ಪಡಿತರ ಧಾನ್ಯ ಕಾಳಸಂತೆಯಲ್ಲಿ ಮಾರಾಟ ಮಾಡಿದಲ್ಲಿ ಕ್ರಮ

ಪಡಿತರ ಧಾನ್ಯ ಕಾಳಸಂತೆಯಲ್ಲಿ ಮಾರಾಟ ಮಾಡಿದಲ್ಲಿ ಕ್ರಮ  Action taken if ration grains are sold in the black market

ಲೋಕದರ್ಶನ ವರದಿ 

ಬಾಗಲಕೋಟೆ 28: ಆಹಾರನಾಗರಿಕ ಸರಬರಾಜು ಹಾಗೂ ಗ್ರಾಹಕರ  ವ್ಯವಹಾರಗಳ ಇಲಾಖೆಯಿಂದ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ಸಾರ್ವಜನಿಕ ವಿತರಣಾ ಪದ್ದತಿಯಡಿ ಅರ್ಹ ಫಲಾನುಭವಿಗಳಿಗೆ ಎನ್‌.ಎಫ್‌.ಎಸ್‌.ಎ ಮತ್ತು ಅನ್ನಭಾಗ್ಯ  ಯೋಜನೆಯಡಿ ಉಚಿತವಾಗಿ ಪಡಿತರವನ್ನು ವಿತರಿಸಲಾಗುತ್ತಿದೆ. ಪಡಿತರ ಚೀಟಿದಾರ ಅಥವಾ ಅದರಲ್ಲಿರುವ ಸದಸ್ಯರು  ತಮಗೆ ಹಂಚಿಕೆಯಾದ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬದಲ್ಲಿ ಅಂತಹವರ ಪಡಿತರ ಚೀಟಿಯನ್ನು 6 ತಿಂಗಳ ಅವಧಿಗೆ ಅಮಾನತ್ತುಪಡಿಸುವುದು ಮತ್ತು ಸದರ ಆಹಾರಧಾನ್ಯಕ್ಕೆ ಎದುರಾಗಿ ಮುಕ್ತ  ಮಾರುಕಟ್ಟೆಯ ದರದಂತೆ ದಂಡ ವಿಧಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.