ನಿಗದಿಗಿಂತ ಹೆಚ್ಚಿನ ಜನರನ್ನು ಸಾಗಿಸುವ ವಾಹನಗಳ ಮೇಲೆ ಕ್ರಮ

ಧಾರವಾಡ 28: ಧಾರವಾಡ ನಗರದಲ್ಲಿ ಸಂಚರಿಸುವ ಟಾಟಾ ಏಸ್, ಟಾಟಾ ಮ್ಯಾಜಿಕ್ ಪ್ರಯಾಣಿಕರ ವಾಹನಗಳು ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಅಪಾಯಕಾರಿ ರೀತಿಯಲ್ಲಿ ಸಾಗಿಸುತ್ತಿದ್ದು ಇದು ಸಾರ್ವಜನಿಕ ಹಾಗೂ ಮಾಧ್ಯಮ ವಲಯದಲ್ಲಿ ಚರ್ಚೆ ಗೆ ಗ್ರಾಸವಾಗಿತ್ತು.

ಅದರಂತೆ ದಿ. 27ರಂದು ಧಾರವಾಡ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ವಾಹನ ತಪಾಸಣಾ ತಂಡಗಳನ್ನಾಗಿ ಮಾಡಿ ಒಟ್ಟು 22 ಇಂತಹ ವಾಹನಗಳನ್ನು ವಶಪಡಿಸಿಕೊಂಡು ಅದರ ಮೂಲ ಮಾಲಿಕರನ್ನು ಹಾಗೂ ಚಾಲಕರನ್ನು ಠಾಣೆಗೆ ಕರೆಯಿಸಿ ಈ ಬಗ್ಗೆ ಸೂಕ್ತ ತಿಳುವಳಿಕೆ ಹಾಗೂ ಎಚ್ಚರಿಕೆಯನ್ನು ನೀಡಿ, ಅಲ್ಲದೇ ಸಂಪೂರ್ಣ ದಾಖಲಾತಿ ಹೊಂದಿರುವಂತಹ ವಾಹನಗಳನ್ನು ಮೋಟಾರ ವಾಹನ ಕಾಯ್ದೆಯಡಿ ದಂಡವಿಧಿಸಿ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಈ ವಿಶೇಷ ವಾಹನ ತಪಾಸಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ, ಹಾಗೂ ಉಪ-ಪೊಲೀಸ್ ಆಯುಕ್ತ ಡಿ.ಎಲ್.ನಾಗೇಶ, ಅವರ ಮಾರ್ಗದರ್ಶನದಲ್ಲಿ ಸಂಚಾರ ಉಪ-ವಿಭಾಗ ಸಹಾಯಕ ಪೊಲೀಸ್ ಆಯುಕ್ತ ಎಸ್.ಎಮ್.ಸಂದಿಗವಾಡ ಇವರ ನೇತ್ರತ್ವದಲ್ಲಿ ಮುರಗೇಶ ಚನ್ನಣ್ಣವರ, ಪೊಲೀಸ್ ಇನ್ಸಪೆಕ್ಟರ್ ಹಾಗೂ ಠಾಣೆಯ ಅಧೀನ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಒಟ್ಟು 20ಪ್ರಕರಣ ದಾಖಲಿಸಿ 41600 ರೂ. ದಂಡ ವಿಧಿಸಿದ್ದಾರೆ. 

ಪೊಲೀಸ್ ಆಯುಕ್ತ ಆರ್.ದಿಲೀಪ ಅವರು ತಂಡದ ಕಾರ್ಯವನ್ಮ್ನ ಪ್ರಶಂಶಿಸಿ, ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.