ಕರ್ಕಶ ಶಬ್ದ ಮಾಡುವ ವಾಹನಗಳ ಮೇಲೆ ಕ್ರಮ

ಧಾರವಾಡ 28: ನಗರದಲ್ಲಿ ಅತೀಯಾದ ಕರ್ಕಶ ಶಬ್ದ ಮಾಡಿ ಶಬ್ದ ಮಾಲಿನ್ಯ ಮಾಡುವಂತಹ ದ್ವಿ-ಚಕ್ರಗಳ ವಾಹನಗಳನ್ಮ್ನ ಪತ್ತೆ ಮಾಡಿ ಪೊಲೀಸರು ದಂಡ ವಿಧಿಸಿದ್ದಾರೆ.

ಡಿ. 22ರಿಂದ ದಿ. 27ರವರಗೆ ಒಟ್ಟು ಒಂದು ವಾರದಲ್ಲಿ 14 ಕರ್ಕಶ ಶಬ್ದ ಮಾಡುವ ಸೈಲೆನ್ಸರಗಳನ್ನು ವಶಪಡಿಸಿಕೊಂಡು ಅವುಗಳನ್ನು ಅಳವಡಿಸಿಕೊಂಡು ವಾಹನ ಚಾಲನೆ ಮಾಡುವ ಸವಾರರ ತಂದೆ-ತಾಯಿಗಳನ್ನು ಠಾಣೆಗೆ ಕರೆಯಿಸಿ ಈ ಬಗ್ಗೆ ಅವರ ಮಕ್ಕಳ ಬಗ್ಗೆ ಎಚ್ಚರಿಕೆ ಇರುವಂತೆ ಸೂಚಿಸಿ ಎಂ.ವ್ಹಿ.ಕಾಯ್ದೆಯಡಿಯಲ್ಲಿ ಸೂಕ್ತ ಕ್ರಮ ಕೈಕೊಂಡಿದ್ದಾರೆ.

ಸನ್-2019 ರಲ್ಲಿ ಇಲ್ಲಿಯವರೆಗೆ ಒಟ್ಟು 140 ಕರ್ಕಶ ಶಬ್ದ ಮಾಡುವಂತಹ ಸೈಲೆನ್ಸರ್ಗಳನ್ನು ವಶಪಡಿಸಿಕೊಂಡು 19,600 ರೂ. ದಂಡ ವಿಧಿಸಿ ಸೂಕ್ತ ಕ್ರಮ ಕೈಕೊಂಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ, ಹಾಗೂ ಉಪ-ಪೊಲೀಸ್ ಆಯುಕ್ತ ಡಿ.ಎಲ್.ನಾಗೇಶ, ಅವರ ಮಾರ್ಗದರ್ಶನದಲ್ಲಿ ಸಂಚಾರ ಉಪ-ವಿಭಾಗ ಸಹಾಯಕ ಪೊಲೀಸ್ ಆಯುಕ್ತ ಎಸ್.ಎಮ್.ಸಂದಿಗವಾಡ ಇವರ ನೇತ್ರತ್ವದಲ್ಲಿ ವಿಶೇಷ ತಪಾಸಣಾ ತಂಡಗಳನ್ನಾಗಿ ಮಾಡಿದ್ದು, ತಂಡದಲ್ಲಿ ಪೊಲೀಸ್ ಇನ್ಸಪೆಕ್ಟರ್ ಮುರಗೇಶ ಚನ್ನಣ್ಣವರ, ಹಾಗೂ ಠಾಣೆಯ ಅಧೀನ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ.

ಪೊಲೀಸ್ ಆಯುಕ್ತ ಆರ್.ದಿಲೀಪ ಅವರು ತಂಡದ ಕಾರ್ಯವನ್ಮ್ನ ಪ್ರಶಂಶಿಸಿ, ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.