ಪಡಿತರ ಅಕ್ಕಿ ಅಕ್ರಮ ಸಂಗ್ರಹಣೆ ಮಾಡುವ ದಂಧೆಕೋರರ ವಿರುದ್ಧ ಕ್ರಮ: ಬೀಡಿಕರ

ಪಡಿತರ ಅಕ್ಕಿ ಅಕ್ರಮ ಸಂಗ್ರಹಣೆ ಮಾಡುವ ದಂಧೆಕೋರರ ವಿರುದ್ಧ ಕ್ರಮ: ಬೀಡಿಕರ Action against smugglers who illegally hoard ration rice: Bidikara

ಲೋಕದರ್ಶನ ವರದಿ 

ಜಮಖಂಡಿ 11: ಬಿಪಿಎಲ್ ಕಾರ್ಡ ಹೊಂದಿದವರಿಗೆ ಸರ್ಕಾರದಿಂದ ವಿತರಿಸುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದವರ ಪಡಿತರ ಚೀಟಿ ರದ್ದು ಮಾಡುವ ಮೂಲಕ ಹಾಗೂ ಪಡಿತರ ಅಂಡಿಗಳ ಪರವಾನಿಯನ್ನು ರದ್ದುಗೊಳಿಸುವದು ಮತ್ತು ಅಕ್ರಮವಾಗಿ ಸಂಗ್ರಹಣೆ ಮಾಡುವ ದಂಧೆಕೋರರ ವಿರುದ್ಧ ನಿರ್ಧಾಕ್ಷಣೆಯಾಗಿ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದ್ದಾರೆ.  

ನಗರದ ಮಿನಿವಿಧಾನ ಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪವಿಭಾಗದ ವ್ಯಾಪ್ತಿಯ ಮುಧೋಳ, ರಬಕವಿ, ಬನಹಟ್ಟಿ ಹಾಗೂ ಜಮಖಂಡಿಯಲ್ಲಿ ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವ ಜಾಲ ಕಾರ್ಯ ಪ್ರವೃತವಾಗಿದ್ದು ಕಂಡು ಬಂದಿದೆ. ಮಂತ್ರಿಗಳು, ಶಾಸಕರು, ಜಿಲ್ಲಾಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ಕಠಿಣ ಕ್ರಮ ಜರುಗಿಸಲು ಆದೇಶ ನೀಡಿದ್ದಾರೆ. ಆ ಹಿನ್ನೆಯಲ್ಲಿ ಪಡಿತರ ಅಕ್ಕಿ ಮಾರಾಟ ಮಾಡುವ ಸಾರ್ವಜನಿಕರ ಪಡಿತರ ಚೀಟಿಗಳನ್ನು ರದ್ದು ಗೊಳಿಸಲಾಗುವದು, ಅಕ್ರಮ ಮಾರಾಟಗಾರರ ವಿರುದ್ದ ಪ್ರಕರಣ ದಾಖಲಿಸಲಾಗುವದು. ಪಡಿತರ ಅಂಗಡಿ ನಡೆಸುವರು ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದರೆ ಅಂಥವರ ಪಡಿತರ ವಿತರಿಸುವ ಪರವಾನಿಗೆಯನ್ನು ರದ್ದು ಗೊಳಿಸಲಾಗುವದೆಂದು. ಬಿಪಿಎಲ್ ಕಾರ್ಡ ಹೊಂದಿದವ ಪ್ರತಿ ಕುಟುಂಬಕ್ಕೆ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ, ಪ್ರತಿ ತಿಂಗಳು 10ನೇ ದಿನಾಂಕದಂದು ಪಡಿತರ ವಿತರಣೆ ಪ್ರಾರಂಭಿಸಲಾಗುತ್ತದೆ. ಬಡವರಿಗೆ ಅನುಕೂಲ ಕಲ್ಪಿಸಲು ಸರ್ಕಾರದ ಯೋಜನೆ ಜಾರಿಗೆ ತಂದಿದ್ದು ದುರುಪಯೋಗಪಡಿಸಿಕೊಳ್ಳಬಾರದು ಎಂದರು. 

ತಂಡಗಳ ರಚನೆ;  

ಪಡಿತರ ಅಕ್ಕಿ ಅಕ್ರಮ ಮಾರಾಟ ತಡೆಗೆ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಅಕ್ರಮ ಸಾಗಾಟ ಹಾಗೂ ಮಾರಾಟವನ್ನು ನಿಯಂತ್ರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಕ್ರಮವಾಗಿ ಪಡಿತರ ಅಕ್ಕಿಯ ಮಾರಾಟ ಕಂಡು ಬಂದಲ್ಲಿ ಆಹಾರ ನೀರೀಕ್ಷಕರು, ತಹಸೀಲ್ದಾರ ಅವರಿಗೆ ಮಾಹಿತಿ ನೀಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.