ಚರಮೂರ್ತೆಶ್ವರ ಜಾತ್ರಾ ಮಹೋತ್ಸವದಲ್ಲಿ ಸಾಧಕರಿಗೆ ಸನ್ಮಾನ

ಚರಮೂರ್ತೆಶ್ವರ ಜಾತ್ರಾ ಮಹೋತ್ಸವದಲ್ಲಿ ಸಾಧಕರಿಗೆ ಸನ್ಮಾನ Achievers honored at Charamoortheshwara Jatra Mahotsav


        ಶಿಗ್ಗಾವಿ 21  : ಜಾತ್ರಾ ಮಹೋತ್ಸವಗಳು ಭಾರತೀಯ ಸಂಸ್ಕೃತಿ, ಧಾರ್ಮಿಕ ನಂಬಿಕೆ ಮತ್ತು ಸಾಮಾಜಿಕ ಒಗ್ಗಟ್ಟಿನ ಸಂಕೇತಗಳಾಗಿವೆ ಎಂದು ಗಂಜೀಗಟ್ಟಿ ಚರಮೂರ್ತೇಶ್ವರ ಮಠದ ಡಾ. ಶಿವಲಿಂಗೇಶ್ವರ ಶಿವಾಚಾರ್ಯರು ಹೇಳಿದರು. ತಾಲೂಕಿನ ಗಂಜೀಗಟ್ಟಿ ಮಠದಲ್ಲಿ ಗುರು ಚರಮೂರ್ತೆಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಧಕರನ್ನ ಸನ್ಮಾನಿಸಿ ಅವರು ಮಾತನಾಡಿದರು.  

ಜಾತ್ರೆಗಳು ಜಾತಿ-ಮತ ಬೇಧವಿಲ್ಲದೆ ಎಲ್ಲರನ್ನೂ ಒಗ್ಗೂಡಿಸುತ್ತವೆ, ಇದು ಸಾಂಸ್ಕೃತಿಕ ಏಕತೆಯನ್ನು ಉತ್ತೇಜಿಸುತ್ತವೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇವತಾ ಕಾರ್ಯಗಳು, ಪೂಜೆಗಳು ಮತ್ತು ಪುರಾಣದ ಕಥೆಗಳನ್ನು ಜನರಿಗೆ ತಲುಪಿಸುವ ಮೂಲಕ ಧಾರ್ಮಿಕ ನಂಬಿಕೆಗಳನ್ನು ಪುನರುಜ್ಜೀವನಗೊಳಿಸುತ್ತವೆ ಎಂದ ಅವರು, ಕನ್ನಡ ಜನಪದ ನೃತ್ಯ ಕಲೆ ಸಾಹಿತ್ಯ ಮುಂತಾದ ನಾಡಿನಾದ್ಯಂತ ಬೆಳೆಯಬೇಕು ಇಂಥ ಕಲಾವಿದರನ್ನು ಎಲ್ಲಾ ಕಡೆ ಗೌರವಿಸಬೇಕು ಎಂದರು. 

ಮುಗಳಿ ಗ್ರಾಮದ ಡಾ. ಬಸನಗೌಡ ರುದ್ರಗೌಡ ಪಾಟೀಲ ಅವರು ಏಷ್ಯಾ ಇಂಟರ್ನ್ಯಾಷನಲ್ ರಿಸರ್ಚ್‌ ವಿಶ್ವವಿದ್ಯಾಲಯ ವತಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಹಿನ್ನೆಲೆಯಲ್ಲಿ ಹಾಗೂ ಹಿರೇಬೆಂಡಿಗೇರಿ ಗ್ರಾಮದ ಕು. ಅಶ್ವಿನಿ ಹಿರೇಮಠ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ನಡೆದ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಸುವರ್ಣ ಪದಕ ಪಡೆದ ಹಿನ್ನೆಲೆ ಸಾಧಕರನ್ನ ಗಂಜೀಗಟ್ಟಿ ಚರಮೂರ್ತೇಶ್ವರ ಮಠದ ಶಿವಲಿಂಗೇಶ್ವರ ಶಿವಾಚಾರ್ಯರು ಸನ್ಮಾನಿಸಿದರು. 

ಕಾರ್ಯಕ್ರಮದಲ್ಲಿ ಫ. ಫ. ಮಂತ್ರೋಡಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಂದ ಜನಪದ ನೃತ್ಯ ಗಮನ ಸೆಳೆಯಿತು. ಮಲ್ಲಿಕಾರ್ಜುನ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಯು ಎನ್ ಮುದಿಗೌಡ್ರ ಚಿದಾನಂದಯ್ಯ ಹಿರೇಮಠ, ಶಿವಪ್ಪ ಮಂತ್ರೋಡಿ ಸೇರಿದಂತೆ ಜಾನಪದ ಕಲಾತಂದ ಸದಸ್ಯರು,   ಫ.ಫ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು ಹಾಗೂ ಚರಮೂರ್ತೆಶ್ವರ ಸೇವಾ ಸಮೀತಿಯ ಸದಸ್ಯರು ಇದ್ದರು.