ಪ್ರಶಸ್ತಿಗಳ ಗೌರವ ಹೆಚ್ಚಿಸುವ ಸಾಧಕರಿಗೆ ಪ್ರಶಸ್ತಿ ದೊರಕಬೇಕು.
Achievements that enhance the prestige of awards should be rewarded
ಧಾರವಾಡ 04: ನಿಜವಾದ ಸಾಧಕರಿಗೆ ಇಂದು ಪ್ರಶಸ್ತಿಗಳು ದೊರಕುತ್ತಿಲ್ಲ.ಸರಕಾರ ಮತ್ತು ಪ್ರತಿಷ್ಠಿತ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡುವಾಗ ಅರ್ಹತೆಯನ್ನು ಮಾನದಂಡವನ್ನಾಗಿರಿಸಿಕೊಳ್ಳುವುದು ತುಂಬಾ ಸೂಕ್ತವೆಂದು ಹಿರಿಯ ನ್ಯಾಯವಾದಿ ಪಿ ಎಚ್ ನೀರಲಕೇರಿ ಹೇಳಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನೀಡುವ ಧೀಮಂತ ನಾಗರಿಕ ಪ್ರಶಸ್ತಿ ಪುರಸ್ಕೃತ ನಾಡಿನ ಹಿರಿಯ ಸಾಹಿತಿ ಡಾ.ಸಂಗಮನಾಥ ಲೋಕಾಪೂರ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ನಿಷ್ಟೂರವಾದಿಗಳಿಗೆ, ಇದ್ದುದನ್ನು ಇದ್ದಂತೆ ಹೇಳುವವರಿಗೆ ಪ್ರಶಸ್ತಿಗಳು ಲಭಿಸುವುದು ತುಂಬಾ ದುರ್ಲಭ.ಆದರೆ ಲೋಕಾಪೂರವರಂಥ ಬದ್ಧತೆಯ ಬರಹಗಾರರನ್ನು
ಗುರುತಿಸಿ ಪ್ರಶಸ್ತಿ ನೀಡಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನು ನಾನು ಮನಸಾರೆ ಅಭಿನಂದಿಸುತ್ತೇನೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ.ಶಂಭೂಹೆಗಡಾಳ ಮಾತನಾಡಿ, ಲೋಕಾಪೂರವರ ಮಾತು ಮತ್ತು ಲೇಖನಿ ಎರಡೂ ಹರಿತವಾದವುಗಳು.ವ್ಯವಸ್ಥೆಯ ಅಂಕು ಡೊಂಕುಗಳನ್ನು ಬಹು ನಿಷ್ಟೂರವಾಗಿ ಬಯಲಿಗೆಳಿಯುವ ಇಂಥ ಸಾಹಿತಿಗಳ ಬರವಣಿಗೆಯಿಂದ ಮಾತ್ರ ನಮ್ಮ ಸಾಮಾಜಿಕ ಸ್ವಾಸ್ಥ್ಯ ಸುಧಾರಿಸಬಲ್ಲದು ಎಂದು ನುಡಿದರು.
ಇನ್ನೋರ್ವ ಅತಿಥಿ ಕವಿವಿ ಸಿಂಡಿಕೇಟ್ ಸದಸ್ಯ ಶಾಮ್ ಮಲ್ಲನಗೌಡರ ಡಾ.ಲೋಕಾಪೂರವರ ಸಾಹಿತ್ಯಿಕ ಸಾಧನೆಗೆ ಬಹಳಷ್ಟು ಉತ್ಕೃಷ್ಟ ಪ್ರಶಸ್ತಿಗಳು ಲಭಿಸಬೇಕಿತ್ತು. ಅವರ ನೇರ ನಡೆ ನಿಷ್ಟೂರ ಸ್ವಭಾವಗಳು ಇದಕ್ಕೆ ಅಡ್ಡಿಯಾದವು ಎಂದು ಹೇಳಿದರು.ಹಿರಿಯರಾದ ಎಸ್ ಕೆ ಕೊಪ್ಪಾ, ರಾಮೂ ಮೂಲಗಿ, ಎಸ್. ವಾಯ್. ಚಲುವಾದಿ, ಸಿದ್ದಣ್ಣ ಕಂಬಾರ, ಶಿವಾನಂದ ಹೂಗಾರ,ಪ್ರಮಿಳಾ ಜಕ್ಕಣ್ಣವರ ಮುಂತಾದವರು ಡಾ.ಲೋಕಾಪೂರವರ ಸಾಹಿತ್ಯ ಸಾಧನೆ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ಮಾತನಾಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಧಾರವಾಡ ಮತ್ತು ಡಾ.ಸಂಗಮನಾಥ ಲೋಕಾಪೂರ ಅಭಿಮಾನಿ ಬಳಗ ಕಾರ್ಯಕ್ರಮ ಆಯೋಜಿಸಿತ್ತು.
ಶ್ರೀಶೈಲ ರಾಚಣ್ಣವರ ಸ್ವಾಗತಿಸಿದರು. ಸಿ.ಸಿ.ಹಿರೇಮಠ ನಿರೂಪಿಸಿದರು. ಚಂದ್ರಶೇಖರ ಕುಂಬಾರ ವಂದನೆ ಹೇಳಿದರು. ನೂರಕ್ಕೂ ಹೆಚ್ಚು ಜನ ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದ ಈ ಸಮಾರಂಭವು ನಿಜಕ್ಕೂ ಮಾದರಿಯ ಸಮಾರಂಭವಾಗಿತ್ತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 