‘ಇಂಪ್ರೆಶನ್‌-2026’ದಲ್ಲಿ ಮಹಿಳಾ ವಿವಿಯ ವಿದ್ಯಾರ್ಥಿಗಳ ಸಾಧನೆ

 ‘ಇಂಪ್ರೆಶನ್‌-2026’ದಲ್ಲಿ ಮಹಿಳಾ ವಿವಿಯ ವಿದ್ಯಾರ್ಥಿಗಳ ಸಾಧನೆ Achievements of Women's University students in 'Impression-2026'

ಲೋಕದರ್ಶನ ವರದಿ 

ವಿಜಯಪುರ 26: ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿವಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಜಂಟಿಯಾಗಿ ಹಮ್ಮಿಕೊಂಡಿದ್ದ ‘ಇಂಪ್ರೆಶನ್‌-2026’ ಮಾಧ್ಯಮ ಹಬ್ಬದಲ್ಲಿ ಮಹಿಳಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿಯರು ‘ಸಮಗ್ರ ರನ್ನರ್‌ಅಫ್‌’ ಗಳಿಸಿದ್ದಕ್ಕೆ ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹಾಗೂ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಅಭಿನಂದಿಸಿದ್ದಾರೆ.  

ತುಮಕೂರಿನಲ್ಲಿ ಎರಡು ದಿನಗಳ ಕಾಲ ನಡೆದ 'ಇಂಪ್ರೆಶನ್‌-2026' ಮಾಧ್ಯಮ ಹಬ್ಬದಲ್ಲಿ ಮಾಧ್ಯಮಕ್ಕೆ ಸಂಬಂಧಿಸಿದ ಹಲವಾರು ಸ್ಪರ್ಧೆಗಳನ್ನು ಏರಿ​‍್ಡಸಲಾಗಿತ್ತು. ರಾಜ್ಯದ ವಿವಿಧ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ 30ಕ್ಕೂ ಹೆಚ್ಚು ತಂಡಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು. ಈ ಸ್ಪರ್ಧೆಗಳಲ್ಲಿ ಮಹಿಳಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿಯರು ಹಲವು ಬಹುಮಾನಗಳನ್ನು ಗಳಿಸಿದ್ದಾರೆ.  

ಬಹುಮಾನಗಳ ವಿವರ: ಅಮೃತಾ ಗುರಾಯಿ-ವರದಿಗಾರಿಕೆ (ದ್ವಿತೀಯ), ಬಸ್ಸಮ್ಮಾ ಹಾಗೂ ಜ್ಯೋತಿ ಎಸ್‌- ಡಿಬೆಟ್ (ತೃತೀಯ), ಜ್ಯೋತಿ ಎಸ್‌- ಪಿಟಿಸಿಯಲ್ಲಿ (ತೃತೀಯ), ಜ್ಯೋತಿ ಎಸ್ -ಟಿವಿ ಸುದ್ದಿ ನಿರೂಪಣೆಯಲ್ಲಿ (ತೃತೀಯ), ಭಾಗ್ಯಶ್ರೀ ಲೋಕೂರ-ರೀಲ್ಸ್‌ ನಿರ್ಮಾಣದಲ್ಲಿ (ತೃತೀಯ), ಸುಕನ್ಯಾ ಹತ್ತಿ-ಪೋಸ್ಟರ್ ನಿರ್ಮಾಣ (ತೃತೀಯ), ಅಮೃತಾ, ಸಾರಿಕಾ, ಸುಕನ್ಯಾ, ಬಸಮ್ಮ, ಜ್ಯೋತಿ, ವಿದ್ಯಾಶ್ರೀ ಹಾಗೂ ಮೇಘಪುಷ್ಪ-ನೃತ್ಯ (ದ್ವಿತೀಯ), ಪವಿತ್ರಾ ಇಟೇಕರ್, ಪ್ರಮೀಳಾ ಚಲವಾದಿ, ವರ್ಷಾ ಕಾಂಬಳೆ, ನೀಲಮ್ಮ ವಸ್ತ್ರದ ಹಾಗೂ ಶ್ವೇತಾ ಸಲಗಲ್ ಜಾಹೀರಾತು ನಿರ್ಮಾಣದಲ್ಲಿ (ತೃತೀಯ) ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿನಿಯರ ತಂಡದ ಜತೆಗೆ ಸಹಾಯಕ ಪ್ರಾಧ್ಯಾಪಕರಾದ ಡಾ.ತಹಮೀನಾ ನಿಗಾರ ಸುಲ್ತಾನಾ, ಸಂದೀಪ್, ಸಂಶೋಧನಾ ವಿದ್ಯಾರ್ಥಿನಿಯರಾದ ಪವಿತ್ರಾ ಕಂಬಾರ, ಜಯಶ್ರೀ ತಳವಾರ, ಬೋಧಕೇತರ ಸಿಬ್ಬಂದಿ ಮುತ್ತು ಇದ್ದರು ಎಂದು ವಿವಿ ಪ್ರಕಟಣೆ ತಿಳಿಸಿದೆ.