ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗೊಲ್ಲಾಳೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಧನೆ
Achievement of Gollaleshwar High School students in SSLC exams
ಲೋಕದರ್ಶನ ವರದಿ
ವಿಜಯಪುರ 25: ವಿಜಯಪುರ ನಗರದ ಇಂಡಿ ರಸ್ತೆಯಲ್ಲಿನ ಶ್ರೀ ಗೊಲ್ಲಾಳೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯ ಒಟ್ಟು 100 ಅ ಕ್ಕೆ 98 ಅ ಫಲಿತಾಂಶ ಪಡೆಯುವ ಮೂಲಕ ವಿಜಯಪುರಕ್ಕೆ ಕೀರ್ತಿ ತಂದಿದೆ.
ಶಾಲೆಯ ಆಂಗ್ಲ ಮಾಧ್ಯಮ ವಿಭಾಗ ವಿದ್ಯಾರ್ಥಿನಿ ಸೃಷ್ಟಿ ರಾ. ಪಾಟೀಲ 625/588 (94.08) ಪ್ರತಿಶತ ಪಡೆದು ಶಾಲೆಗೆ ಪ್ರಥಮಸ್ಥಾನ ಪಡೆದಿದ್ದಾಳೆ. ಶಿವಕುಮಾರ ಬಗಲಿ 625/485 (77.06) ಪ್ರತಿಶತ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಕುಮಾರ ಶಿವಶಂಕರ ಮೋಟಗಿ 625/478 (76,04) ಪ್ರತಿಶತ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ.
ಕನ್ನಡ ಮಾಧ್ಯಮ ವಿಭಾಗದಲ್ಲಿ ವಿದ್ಯಾರ್ಥಿನಿ ಸ್ವಪ್ನಾ ಖ. ತೊರವೆ 625/577 (92.32) ಪ್ರತಿಶತ ಪಡೆದು ಶಾಲೆಗೆ ಪ್ರಥಮಸ್ಥಾನ ಪಡೆದಿದ್ದಾಳೆ. ಸುಲಾಬಾಯಿ ಸಂ. ಜಾಧವ 625/506 (80.96) ಪ್ರತಿಶತ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಪೂರ್ಣಿಮಾ ಸಿ. ತೊರವಿ 625/469 (75.00) ಪ್ರತಿಶತ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾಳೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಿ.ಬಿ. ಪಾಟೀಲ, ಕಾರ್ಯದರ್ಶಿ ಎಂ.ಬಿ.ಪಾಟೀಲ, ಮುಖ್ಯಗುರುಗಳಾದ ಕಾಶೀನಾಥ ಹಗರಟಗಿ, ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿ ಹಾರೈಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 