ಸಾಧನೆ ಬೆವರ ಹನಿಗಳ ಫಲ: ಕೃಷ್ಣಾ ಹಡಪದ
Achievement is the result of sweat drops: Krishna Hadapada
ಗದಗ 29: ಸಮಾಜದಲ್ಲಿ ಒಬ್ಬ ವ್ಯಕ್ತಿ ತನ್ನ ಸ್ವಂತ ಪರಿಶ್ರಮ, ಕಠಿಣ ಹಗಲಿರುಳಿನ ಶ್ರಮದಿಂದ ಉನ್ನತ ಸ್ಥಾನಕ್ಕೇರಿದಾಗ ’ನಾನೇ ಬೆಳೆಸಿದ್ದು, ಇದು ನಾನು ಕೊಟ್ಟ ಭಿಕ್ಷೆ’ ಎಂದು ಹೇಳಿಕೊಳ್ಳುವ ಸೋಗುಲಾಡಿಗಳ ಸಂಖ್ಯೆ ಹೆಚ್ಚುತ್ತಿದೆ. ಸಾಧನೆ ಎಂಬುದು ಯಾರೋ ಹಾಕಿದ ಭಿಕ್ಷೆಯಲ್ಲ, ಅದು ಸಾಧಕನ ಬೆವರ ಹನಿಗಳ ಫಲ" ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ಮಾರ್ಮಿಕವಾಗಿ ನುಡಿದಿದ್ದಾರೆ.
ಇಂದು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಮಾಜದ ದ್ವಂದ್ವ ನಿಲುವುಗಳ ಕುರಿತು ಹರಿತವಾದ ಮಾತುಗಳನ್ನಾಡಿದ್ದಾರೆ ಮುಖವಾಡದ ಜನರಿಂದ ದೂರವಿರಿ, ಹೇಳುವುದು ವೇದಾಂತ, ತಿನ್ನುವುದು ಬದನೆಕಾಯಿ ಎಂಬಂತೆ ವರ್ತಿಸುವ ಜನರಿಂದ ಪ್ರತಿಭಾವಂತರು ದೂರವಿರಬೇಕು. ಒಬ್ಬ ವ್ಯಕ್ತಿ ತನ್ನ ತನು-ಮನ-ಧನ ಸವೆಸಿ ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಹೊರಟಾಗ, ಅಚಾತುರ್ಯದಿಂದ ಸಣ್ಣ ತಪ್ಪಾದರೆ ಸಹಾಯಕ್ಕೆ ಬರದ ಈ ಜನ, ಗುಂಪು ಕಟ್ಟಿಕೊಂಡು ಮರ್ಯಾದೆ ತೆಗೆಯಲು ಸಜ್ಜಾಗುತ್ತಾರೆ. ಇಂತಹ ಜನರನ್ನು ನಂಬಿ ಬೆಳೆಯುವ ಹಂಬಲ ಬೇಡ. ಪರಾವಲಂಬಿ ನಂಬಿಕೆಗಿಂತ ಸ್ವಂತ ಪರಿಶ್ರಮವೇ ಶ್ರೇಷ್ಠ" ಎಂದು ಅವರು ಹೇಳಿದರು.
ಸ್ವಂತ ಮನಸ್ಥಿತಿಯೇ ಯಶಸ್ಸಿನ ಬಂಡವಾಳ: ನಮ್ಮ ವ್ಯವಸ್ಥೆಯಲ್ಲಿ ಯಾರೂ ಯಾರನ್ನೂ ಬೆಳೆಸುವುದಿಲ್ಲ. ನಮ್ಮೊಳಗಿನ ಒಳ್ಳೆತನ ಮತ್ತು ದೃಢ ಮನಸ್ಥಿತಿ ಮಾತ್ರ ನಮ್ಮನ್ನು ಉನ್ನತ ಸ್ಥಾನಕ್ಕೇರಿಸುತ್ತದೆ. ಸಾಧಕನ ಯಶಸ್ಸಿನಲ್ಲಿ ಪಾಲು ಕೇಳುವವರು, ಅವನ ಕಷ್ಟದ ಹಾದಿಯಲ್ಲಿ ಜೊತೆಗಿರುವುದಿಲ್ಲ. ಹಾಗಾಗಿ, ಟೀಕೆ ಮಾಡುವವರಿಗೆ ಕುಗ್ಗಬೇಡಿ, ಹೀಯಾಳಿಸುವವರಿಗೆ ಕಿವಿಗೊಡಬೇಡಿ. ಉರಿಯುವವರು ಉರಿಯುತ್ತಲೇ ಇರಲಿ, ನಿಮ್ಮ ಸಾಧನೆಯ ವೇಗ ನಿಲ್ಲದಿರಲಿ" ಎಂದು ಕರೆ ನೀಡಿದರು.
ಸಾರ್ಥಕ ಸೇವೆಗೆ ಒತ್ತು: "ನಾವು ಬೆಳೆದು ಸಮಾಜದ ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡಿದರೆ ಸಾಕು, ಅದನ್ನು ದೇವರು ಮತ್ತು ನಮ್ಮ ಕುಟುಂಬ ಮೆಚ್ಚುತ್ತದೆ. ಸಮಾಜದ ಹಿರಿಯರ, ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ. ಕಷ್ಟ ಬಂದಾಗ ಬೆನ್ನಿಗೆ ನಿಲ್ಲದವರು ಯಶಸ್ಸು ಬಂದಾಗ ’ನನ್ನಿಂದಲೇ ಆಗಿದ್ದು’ ಎನ್ನುವುದು ಹಾಸ್ಯಾಸ್ಪದ. ಅಂತಹವರ ಮಾತುಗಳಿಗೆ ಮರುಳಾಗದೆ ಸ್ವಾವಲಂಬಿ ಸಾಧಕರಾಗಿ" ಎಂದು ಕೃಷ್ಣಾ ಹಡಪದ ಅವರು ಸವಿತಾ ಸಮಾಜದ ಯುವಕರಿಗೆ. ಸೇವಾಕರ್ತರಿಗೆ ಮತ್ತು ಸಾಧಕರಿಗೆ ಕ್ರಾಂತಿಕಾರಿ ಕಿವಿಮಾತು ಹೇಳಿದ್ದಾರೆ.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 