ನೀಟ್ ಪರೀಕ್ಷೆಯಲ್ಲಿ ಸಾಧನೆ: ರಾಹುಲ್‌ಗೆ ಸತ್ಕಾರ
Achievement in NEET Exam: Rahul Felicitated
ಲೋಕದರ್ಶನ ವರದಿ
ಇಂಡಿ 19: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (ನೀಟ್ ) 515 ಅಂಕಗಳನ್ನು ಪಡೆಯುವ ಮೂಲಕ ಸಿ. ವಿ. ರಾಮನ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ರಾಹುಲ್ ಒಂಟೆತ್ತಿನ ಕಾಲೇಜು ಹಾಗೂ ಇಂಡಿ ತಾಲೂಕಿಗೆ ಅತ್ಯುನ್ನತ ಕೀರ್ತಿ ತಂದಿದ್ದಾನೆ ಎಂದು ಸಂಸ್ಥೆಯ ಅಧ್ಯಕ್ಷ ಶಿವಾನಂದ ಕಾಮಗೊಂಡ ಹೇಳಿದರು.ಅವರು ನಗರದ ಸಿ.ವಿ. ರಾಮನ್ ಪದವಿ ಪೂರ್ವ ಕಾಲೇಜಿನ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಪಾರ ಪ್ರತಿಭೆಯಿದೆ ಎಂಬುದನ್ನು ರಾಹುಲ್ ಸಾಬೀತುಪಡಿಸಿದ್ದಾನೆ. ಗುಣಮಟ್ಟದ ಶಿಕ್ಷಣ ಮತ್ತು ವಿದ್ಯಾರ್ಥಿಯ ಕಠಿಣ ಪರಿಶ್ರಮದಿಂದಾಗಿ ಈ ಸಾಧನೆಯಾಗಿದೆ ಎಂದು ತಿಳಿಸಿದರು. ಪ್ರಾಂಶುಪಾಲೆ ವಿಶಾಲಾಕ್ಷಿ ಕಾಮಗೊಂಡ ಮಾತನಾಡಿ, ಕಾಲೇಜಿನಲ್ಲಿ ಆರಂಭದಿಂದಲೂ ನೀಟ್ ಪರೀಕ್ಷೆಗೆ ಪ್ರತ್ಯೇಕ ತರಬೇತಿ ಹಾಗೂ ನಿರಂತರ ಪರೀಕ್ಷೆಗಳನ್ನು ನಡೆಸಿಕೊಂಡು ಬರಲಾಗಿತ್ತು. ವಿದ್ಯಾರ್ಥಿಯು ಉಪನ್ಯಾಸಕರ ಮಾರ್ಗದರ್ಶನವನ್ನು ಸರಿಯಾಗಿ ಬಳಸಿಕೊಂಡು ಈ ಯಶಸ್ಸು ಸಾಧಿಸಿದ್ದಾನೆ. ಮುಂಬರುವ ದಿನಗಳಲ್ಲಿ ನಮ್ಮ ಕಾಲೇಜಿನಿಂದ ಮತ್ತಷ್ಟು ವೈದ್ಯರು ದೇಶ ಸೇವೆಗೆ ಸಿದ್ಧರಾಗಲಿದ್ದಾರೆ ಎಂಬ ನಂಬಿಕೆಯಿದೆ ಎಂದರು.
ಭೌತಶಾಸ್ತ್ರ ಉಪನ್ಯಾಸಕಿ ಕಾವ್ಯಾ ಬಿರಾದಾರ ಮಾತನಾಡಿ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಂತಹ ಕಠಿಣ ವಿಷಯಗಳಲ್ಲೂ ರಾಹುಲ್ ಉತ್ತಮ ಅಂಕ ಗಳಿಸಿದ್ದಾನೆ. ಈತನ ಶಿಸ್ತುಬದ್ಧ ಅಧ್ಯಯನ ಹಾಗೂ ಸತತ ಪ್ರಯತ್ನವೇ ಈ ಸಾಧನೆಗೆ ಪ್ರೇರಣೆ ಎಂದು ತಿಳಿಸಿದರು.ರಾಹುಲ್ ಒಂಟೆತ್ತಿನ ಮಾತನಾಡಿ ನನ್ನ ಈ ಸಾಧನೆಗೆ ಸಿ. ವಿ. ರಾಮನ್ ಕಾಲೇಜಿನ ಆಡಳಿತ ಮಂಡಳಿ ಮತ್ತು ನನ್ನ ಪ್ರೀತಿಯ ಶಿಕ್ಷಕರೇ ಕಾರಣ. ಎಲ್ಲಾ ಶಿಕ್ಷಕರಿಗೆ ನಾನು ಸದಾ ಋಣಿಯಾಗಿದ್ದೇನೆ. ಪರೀಕ್ಷೆಯ ಸಂದರ್ಭದಲ್ಲಿ ಎದುರಾಗುತ್ತಿದ್ದ ಗೊಂದಲಗಳನ್ನು ಶಿಕ್ಷಕರು ಹಗಲಿರುಳೆನ್ನದೆ ಬಗೆಹರಿಸುತ್ತಿದ್ದರು.
ಅವರು ನೀಡಿದ ನಿರಂತರ ಪ್ರೋತ್ಸಾಹ ಮತ್ತು ಮಾರ್ಗದರ್ಶನವೇ ನನ್ನಲ್ಲಿ ಆತ್ಮವಿಶ್ವಾಸವನ್ನು ತುಂಬಿತು ಎಂದು ಹೆಮ್ಮೆಯ ಮಾತನಾಡಿದನು.ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಪ್ರಮುಖ ಸದಸ್ಯರಾದ ವರ್ಧಮಾನ ಮಹಾವೀರ, ಸನ್ಮತಿ ಹಳ್ಳಿ, ಪ್ರಸನ್ನಕುಮಾರ ನಾಡಗೌಡ, ಶೈಲೇಶ ಬೀಳಗಿ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಯ ಪಾಲಕರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 