ಕಾಯಕ ನಗರದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಭಸ್ಮ

ಕಾಯಕ ನಗರದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಭಸ್ಮ Accidental fire in Kayaka Nagar, hut reduced to ashes


ಲೋಕದರ್ಶನ ವರದಿ 

ಹೂವಿನಹಡಗಲಿ 29:     ಆಕಸ್ಮಿಕ ಬೆಂಕಿ ತಗುಲಿ ಎರಡು ಗುಡಿಸಲುಗಳು ಭಸ್ಮವಾಗಿರುವ ಘಟನೆ ಪಟ್ಟಣದ ಕಾಯಕ ನಗರದಲ್ಲಿ ಶುಕ್ರವಾರ ಸಂಭವಿಸಿದೆ. ಕೂಲಿ ಕೆಲಸ ಮಾಡಿ ಬದುಕು  ಕಟ್ಟಿಕೊಂಡಿದ್ದ ಅಂಗವಿಕಲ ದಂಪತಿ ಕೆ.ಪ್ರಕಾಶ್ ವಿಶಾಲಾಕ್ಷಿ ಹಾಗೂ ಗಂಟಿ ಬಷೀರ್ ಸಾಬ್ ಅವರ ಗುಡಿಸಲುಗಳು ಸುಟ್ಟು ಹೋಗಿದ್ದು, ಅಪಾರ ಹಾನಿ ಸಂಭವಿಸಿದೆ. ದವಸ ಧಾನ್ಯ, ಬಟ್ಟೆ, ಟಿ.ವಿ, ಗೃಹೋಪಯೋಗಿ ಸಾಮಾಗ್ರಿ, ಪ್ಲಾಸ್ಟಿಕ್ ತಾಡಪಾಲು, ಟ್ರ್ಯಕ್ಟರ್ ಬಿಡಿಭಾಗ ಹಾಗೂ ಹಣ್ಣು ಸಂಗ್ರಹಿಸಿಡುವ ಟ್ರೇಗಳು ಸುಟ್ಟು ಕರಕಲಾಗಿವೆಕಾಯಕ ನಗರದ ಬಯಲು ಜಾಗದಲ್ಲಿ ಈ ಕುಟುಂಬಗಳು ಗುಡಿಸಲು ಹಾಕಿಕೊಂಡಿದ್ದವು. ಪ್ರಕಾಶ್ ಅವರ ಗುಡಿಸಲಿನಲ್ಲಿ ದೇವರ ಪೂಜೆಗಾಗಿ ಹಚ್ಚಿಟ್ಟಿದ್ದ ದೀಪದಿಂದ ಆಕಸ್ಮಿಕ ಬೆಂಕಿ  ಹೊತ್ತಿಕೊಂಡು ಅನಾಹುತ ಸಂಭವಿಸಿದೆ.ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.