ಆಕಸ್ಮಿಕ ಬೆಂಕಿ ತಗುಲಿ ಆಟೋಮೊಬೈಲ್ ಅಂಗಡಿಯೊಳಗಿನ ವಸ್ತುಗಳು ಸುಟ್ಟು ಕರಕಲಾದ ಘಟನ
Accidental fire destroys items inside automobile shop
ಶಿಗ್ಗಾವಿ 28 : ಆಕಸ್ಮಿಕ ಬೆಂಕಿ ತಗುಲಿ ಅಟೋ ಮೋಬೈಲ್ ಅಂಗಡಿಯೊಳಗಿನ ವಸ್ತುಗಳು ಸುಟ್ಟು ಕರಕಲಾದ ಘಟನೆ ಶಿಗ್ಗಾವಿ ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರದ ಶ್ರೀ ಸಾಯಿ ಅಟೋ ಮೋಬೈಲ್ ಅಂಗಡಿಯೊಂದರಲ್ಲಿ ಗುರುವಾರ ರಾತ್ರಿ ನಡೆದಿದೆ.
ಪಟ್ಟಣದ ವಿಜಯ್ ಬುಳ್ಳಕ್ಕನವರ ಅವರಿಗೆ ಸೇರಿದ ಅಂಗಡಿಯಾಗಿದ್ದು, ರಾತ್ರಿ 9 ಘಂಟೆಗೆ ಅಂಗಡಿ ಮುಚ್ಚಿಕೊಂಡು ಮನೆಗೆ ಹೋದ ನಂತರ ಘಟನೆ ನಡೆದಿದೆ, ವಿದ್ಯುತ್ ಶಾರ್ಟ್ ಸೆರ್ಕ್ಯೂಟ್‌ನಿಂದ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದು, ಅಂದಾಜು 1 ಲಕ್ಷಕ್ಕೂ ಹೆಚ್ಚು ಅಟೋಮೊಬೈಲ್ ವಸ್ತುಗಳು ಸುಟ್ಟಿವೆ ಎಂದು ಅಂದಾಜಿಸಲಾಗಿದೆ.
ಸ್ಥಳೀಯರು ಅಂಗಡಿಯೋಳಗೆ ಹೊಗೆ ಆಡುತ್ತಿರುವುದನ್ನ ಕಂಡು ಕೂಡಲೇ ಮಾಲಕರಿಗೆ ಮಾಹಿತಿ ನೀಡಿ, ಬೀಗ ಒಡೆದು ನೀರು ಎರಚುವ ಮೂಲಕ ಸುಡುತ್ತಿರುವ ವಸ್ತುಗಳ ಹೆಚ್ಚಿನ ಹಾನಿಯನ್ನ ತಡೆದಿದ್ದಾರೆ, ನಂತರ ಅಗ್ನಿಶಾಮಕದಳ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ, ಈ ಕುರಿತು ಶಿಗ್ಗಾವಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 