ಸರ್ಕಾರಿ ಕಾಲೇಜುಗಳ ಶೈಕ್ಷಣಿಕ ಸ್ಥಿತಿಗತಿ: ಸುತ್ತೋಲೆ ಹಿಂಪಡೆಯಲು ಒತ್ತಾಯ

 ಸರ್ಕಾರಿ ಕಾಲೇಜುಗಳ ಶೈಕ್ಷಣಿಕ ಸ್ಥಿತಿಗತಿ: ಸುತ್ತೋಲೆ ಹಿಂಪಡೆಯಲು ಒತ್ತಾಯ Academic status of government colleges: Demand to withdraw circular

ಲೋಕದರ್ಶನ ವರದಿ 


ಸರ್ಕಾರಿ ಕಾಲೇಜುಗಳ ಶೈಕ್ಷಣಿಕ ಸ್ಥಿತಿಗತಿ: ಸುತ್ತೋಲೆ ಹಿಂಪಡೆಯಲು ಒತ್ತಾಯ 

ಕೊಪ್ಪಳ 24: ಇತ್ತೀಚೆಗೆ ಸರಕಾರಿ ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳ ಸ್ಥಿತಿಗತಿ ಮಾಹಿತಿಗಳ ಸಂಗ್ರಹಿಸುವ ಮತ್ತು ಪರೀಶೀಲನೆ ಮಾಡುವ ಸುತ್ತೋಲೆಯನ್ನು ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ಶಿಕ್ಷಣ ಮತ್ತುರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ(ಡಿ.ಎಸ್‌.ಇ.ಅರ್‌.ಟಿ) ಇಲಾಖೆಗಳಿಂದ ಜಂಟಿಯಾಗಿ ಸುತ್ತೋಲೆನ್ನು ಹೊರಡಿಸಿವೆ. ಈ ಸುತ್ತೋಲೆ ಅವೈಜ್ಞಾನಿಕವಾಗಿದ್ದು ಕೂಡಲೇ ಹಿಂಪಡೆಯಬೇಕೆಂದು ಕೊಪ್ಪಳ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕ ಮತ್ತು ಪ್ರಾಚಾರ್ಯರ ಸಂಗಳು ಜಂಟಿಯಾಗಿ ಒತ್ತಾಯಿಸಿವೆ. ಕಾಲೇಜುಗಳ ಶೈಕ್ಷಣಿಕಹಾಗೂ ಇತರೆ ಸೌಕರ್ಯಗಳ ಪರೀಶೀಲನೆಗೆ ನಮ್ಮದುಯಾವುದೇ ಅಭ್ಯಂತರವಿಲ್ಲ. ನಮ್ಮದೇಇಲಾಖೆಯ ಅಧಿಕಾರಿಗಳು, ಹಿರಿಯ ಪ್ರಾಚಾರ್ಯರು, ಉಪನ್ಯಾಸಕರುಗಳಿಂದ ಪರೀಶೀಲನೆಗೆ ನಮ್ಮದುತಕರಾರಿಲ್ಲ. ಆದರೆ ನಮ್ಮ ಇಲಾಖೆಗೆ ಸಂಬಂಧಪಡದಡಯಟ್ ಅಧಿಕಾರಿಗಳು ಹಾಗೂ ಉಪನ್ಯಾಸಕರುಗಳಿಂದ ಕಾಲೇಜುಗಳ ಪರೀಶೀಲನೆ ಮಾಡುವುದುತರವಲ್ಲ. ಈ ಸುತ್ತೋಲೆಯು ಅವೈಜ್ಙನಿಕವಾಗಿದ್ದು ನಮ್ಮನೌಕರರಲ್ಲಿ ಅಭದ್ರತೆಕಾಡುತ್ತದೆ. ಕೂಡಲೇಇದನ್ನುವಾಪಸ್ಸು ಪಡೆಯಬೇಕೆಂದುಎರಡೂ ಸಂಘಗಳ ಪದಾಧಿಕಾರಿಗಳು ಜಿಲ್ಲಾಉಪನಿರ್ದೇಶಕರಾದ ಜಿ.ಎಚ್‌.ಜಗದೀಶಅವರ ಮೂಖಾಂತರ ಇಲಾಖೆಗೆ ಮನವಿ ಅರ​‍್ಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯರ ಸಂಘದಅಧ್ಯಕ್ಷರಾದ ಬಸಪ್ಪ ನಾಗೋಲಿ, ಕಾರ್ಯದರ್ಶಿ ಬಸವರಾಜ, ಕಜಾಂಚಿ ಟಿ.ಸಿ.ಶಾಂತಪ್ಪ, ಉಪನ್ಯಾಸಕರ ಸಂಘದಅಧ್ಯಕ್ಷರಾದ ಸೋಮಶೇಖರಗೌಡ, ಕಾರ್ಯಾಧ್ಯಕ್ಷ ಮಾರುತಿ ಲಕಮಾಪುರ, ಹಿರಿಯಪ್ರಾಚಾರ್ಯರಾದರಾಜಶೇಖರ ಪಾಟೀಲ್, ಶಿವಾನಂದ, ಮಂಜುನಾಥ ಸ್ವಾಮಿ, ಉಪನ್ಯಾಸಕರಾದ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್,ರಾಚಪ್ಪಕೇಸರಬಾವಿ, ಕೆ.ಎಸ.ಹುಲಿ, ಎಸ್‌.ವಿ.ಮೇಳಿ. ಕೆ.ಎಚ್‌.ಕೊಳ್ಳಣ್ಣನವರ್, ಶಿವಾಂದ ಮೇಟಿ, ಲಲಿತಮ್ಮಾಹಾಗೂ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.