ಅಧಿಕಾರ ದುರುಪಯೋಗ : ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಂಡನೆ

ವಾಷಿಂಗ್ಟನ್, ಡಿ19 ಅಧಿಕಾರ ದುರುಪಯೋಗಪಡಿಸಿಕೊಂಡ  ಆರೋಪ ಎದುರಿಸುತ್ತಿರುವ  ಅಮೆರಿಕ ಆಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಜನಪ್ರತಿನಿಧಿಗಳ ಸಭೆ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) ಬುಧವಾರ ವಾಗ್ದಂಡನೆ ವಿಧಿಸಿದೆ . ಮುಂದಿನ ತಿಂಗಳು ಸೆನಟ್ ನಲ್ಲಿ ವಾಗ್ದಂಡನೆ ಪ್ರಕ್ರಿಯೆಯ ಮೇಲೆ ಮತದಾನ ನಡೆಯಲಿದೆ. ಆದರೆ, ಸೆನೆಟ್ ನಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕ್ ಪಕ್ಷಕ್ಕೆ ಹೆಚ್ಚಿನ ಬಹುಮತವಿರುವ ಕಾರಣ  ವಾಗ್ದಂಡನೆ ಪ್ರಕ್ರಿಯೆಗೆ ಸೋಲಾಗುವ ಸಾಧ್ಯತೆಯಿದೆ.  ಟ್ರಂಪ್ ಅವರಿಗೆ ವಾಗ್ದಂಡನೆ ವಿಧಿಸುವ ಕುರಿತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಬುಧವಾರ 10 ಗಂಟೆಗಳೆಗೂ ಮೀರಿದ  ಸುದೀರ್ಘ ಚರ್ಚೆ ನಡೆದಿದೆ. ಬಳಿಕ ವಾಗ್ದಂಡನೆಯನ್ನು ಮತಕ್ಕೆ ಹಾಕಲಾಗಿದ್ದು ಟ್ರಂಪ್ ವಿರುದ್ಧ 230 ಮತಗಳು ಹಾಗೂ ಅವರ ಪರವಾಗಿ 197 ಮತ ಚಲಾವಣೆಯಾಗಿದೆ  ಈ ಮೂಲಕ ವಾಗ್ದಂಡನೆಗೆ ಗುರಿಯಾದ ದೇಶದ ಮೂರನೇ  ಅಧ್ಯಕ್ಷ ಎಂಬ ಅಪಖ್ಯಾತಿಗೆ ಡೊನಾಲ್ಡ್ ಟ್ರಂಪ್ ಪಾತ್ರರಾಗಿದ್ದಾರೆ.