ಸುಖುಮಿ, ಜ 22 : ಅಬ್ಖಾಜಿಯಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಹಾಗೂ ಪ್ರಚಾರದ ಭರಾಟೆ ಆರಂಭವಾಗಿದ್ದು, ಫೆಬ್ರವರಿಯ ವರೆಗೆ ಇರುತ್ತದೆ ಎಂದು ಸ್ವಯಂ ಘೋಷಿತ ದಕ್ಷಿಣ ಕಾಕಸಸ್ ಗಣರಾಜ್ಯದ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ತಮಾಜ್ ಗೊಗಿಯಾ ತಿಳಿಸಿದ್ದಾರೆ.
"ಅಬ್ಖಾಜಿಯಾ ಅಧ್ಯಕ್ಷ ಹುದ್ದೆಗೆ ಅಭ್ಯರ್ಥಿಗಳ ನಾಮನಿರ್ದೇಶನ ಜನವರಿ 22 ರಿಂದ ಪ್ರಾರಂಭವಾಗಿದ್ದು, ಫೆಬ್ರವರಿ 11 ರವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗುವುದು" ಎಂದು ಗೊಗಿಯಾ ಬುಧವಾರ ಮುಂಜಾನೆ ಹೇಳಿದರು,
ಅಧ್ಯಕ್ಷೀಯ ಅಭ್ಯರ್ಥಿಗಳು ಮೇಲೆ ತಿಳಿಸಿದ ಅವಧಿಯಲ್ಲಿ ಅಬ್ಖಾಜಿಯನ್ ಭಾಷಾ ಪರೀಕ್ಷೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.
ರಾಜಕೀಯ ಪಕ್ಷಗಳು ಮತ್ತು ಮತದಾರರ ಗುಂಪುಗಳು ತಮ್ಮ ಅಧ್ಯಕ್ಷೀಯ ಅಭ್ಯರ್ಥಿಗಳನ್ನು ಅಬ್ಖಾಜಿಯಾದಲ್ಲಿ ನಾಮನಿರ್ದೇಶನ ಮಾಡುವ ಹಕ್ಕನ್ನು ಹೊಂದಿವೆ ಎಂದು ಗೊಗಿಯಾ ಸ್ಪುಟ್ನಿಕ್ಗೆ ತಿಳಿಸಿದರು. ಮತದಾರರ ಗುಂಪುಗಳ ವಿಷಯದಲ್ಲಿ, ಕನಿಷ್ಠ 2,ಸಾವಿರ ಹಾಗೂ ಗರಿಷ್ಠ 2,500 ಸಹಿ ಸಂಗ್ರಹಿಸಬಹುದಾಗಿದೆ.
ಈ ತಿಂಗಳ ಆರಂಭದಲ್ಲಿ, ಅಬ್ಖಾಜಿಯಾನ್ ಶಾಸಕರು ಅಧ್ಯಕ್ಷ ರೌಲ್ ಖಾಜಿಂಬಾ ಅವರ ರಾಜೀನಾಮೆಗೆ ಮತ ಚಲಾಯಿಸಿದರು ಮತ್ತು ಪ್ರಧಾನಿ ಬಗನ್ಬಾ ಅವರನ್ನು ಕಾರ್ಯಕಾರಿ ಅಧ್ಯಕ್ಷರಾಗಿ ಸರ್ವಾನುಮತದಿಂದ ಅಂಗೀಕರಿಸಿದರು.
ಅಬ್ಖಾಜಿಯಾದಲ್ಲಿ ಮುಂಬರುವ ಅಧ್ಯಕ್ಷೀಯ ಚುನಾವಣೆ ಮಾರ್ಚ್ 22 ರಂದು ನಡೆಯಲಿದೆ.