ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್: ಅಭಿಷೇಕ್ ವರ್ಮಾ-ಜ್ಯೋತಿ ಸುರೇಖಾ ಮಿಶ್ರ ಜೋಡಿಗೆ ಚಿನ್ನದ ಪದಕ
archary
ಬ್ಯಾಂಕಾಕ್, ನ 27 -ಭಾರತದ ಅಭಿಷೇಕ್ ವರ್ಮಾ ಹಾಗೂ ಜ್ಯೋತಿ ಸುರೇಖಾ ವೆನ್ನಮ್ ಜೋಡಿಯು ಇಲ್ಲಿಂದು ಮುಕ್ತಾಯವಾದ 21ನೇ ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್ ಕಾಪೌಂಡ್ ಮಿಶ್ರ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿತು. ಒಟ್ಟಾರೆ, ಭಾರತ ಎಂಟು ಪದಕಗಳನ್ನು ಪಡೆಯುವ ಮೂಲಕ ಚಾಂಪಿಯನ್‌ಶಿಪ್ ಅಭಿಯಾನ ಮುಗಿಸಿತು.
ವರ್ಮಾ ಹಾಗೂ ವೆನ್ನಮ್ ಮಿಶ್ರ ಜೋಡಿಯು ಚೈನೀಸ್ ತೈಫೆಯ ಯಿ-ಹ್ಯೂಸುನ್ ಚೆನ್ ಮತ್ತು ಚಿಯಾ -ಲುಹಾ ಚೆನ್ ಜೋಡಿಯ ವಿರುದ್ಧ 158-151 ಅಂತರದಲ್ಲಿ ಗೆದ್ದು ಚಿನ್ನದ ಪದಕಕ್ಕೆೆ ಭಾಜನವಾಯಿತು. ಒಟ್ಟಾಾರೆ, ಭಾರತ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಪದಕಗಳೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿತು.
ಇದಕ್ಕೂ ಮುನ್ನ ಕಾಪೌಂಡ್ ತಂಡದ ವಿಭಾಗದಲ್ಲಿ ಅಭಿಷೇಕ್ ವರ್ಮಾ ಅವರು ಕೇವಲ ಒಂದೇ-ಒಂದು ಅಂಕದ ಅಂತರದಿಂದ ಕೊರಿಯಾ ವಿರುದ್ಧ 232-233 ಅಂತರದಲ್ಲಿ ಪರಾಭವಗೊಂಡು ಬೆಳ್ಳಿ ಪದಕಕ್ಕೆೆ ತೃಪ್ತಿಪಟ್ಟುಕೊಂಡರು.
ಮಹಿಳೆಯರ ಕಾಪೌಂಡ್ ತಂಡದ ವಿಭಾಗದಲ್ಲಿ ಜ್ಯೋತಿ, ಮುಸ್ಕಾನ್ ಕಿರಾರ್ ಹಾಗೂ ಪ್ರಿಯಾ ಗುಜ್ರಾರ್ ಅವರನ್ನೊಳಗೊಂಡ ತಂಡ ಕೊರಿಯಾ ವಿರುದ್ಧ 215-231 ಅಂತರದಲ್ಲಿ ಸೋತು ಬೆಳ್ಳಿ ಪದಕ ಪಡೆಯಿತು.
ತಂಡದ ವಿಭಾಗದಲ್ಲಿ ಚಿನ್ನದ ಪದಕ ವಂಚಿತರಾದ ಅಭಿಷೇಕ್ ವರ್ಮಾ ಹಾಗೂ ಜ್ಯೋತಿ ಅವರು ಕಾಪೌಂಡ್ ಮಿಶ್ರ ವಿಭಾಗದಲ್ಲಿ ಚೈನೀಸ್ ತೈಫೆ ಜೋಡಿಯನ್ನು ಮಣಿಸಿ ಭಾರತಕ್ಕೆೆ ಮೊದಲ ಚಿನ್ನದ ಪದಕ ತಂದುಕೊಟ್ಟಿತು. ಮಂಗಳವಾರ ಭಾರತ ನಾಲ್ಕು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿತ್ತು. ಇದರಲ್ಲಿ ಅತನು ದಾಸ್ ಮಹತ್ತರ ಪಾತ್ರವಹಿಸಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 