ಲೋಕದರ್ಶನ ವರದಿ
ಬೆಳಗಾವಿ 04: ದಕ್ಷಿಣ ಮತಕ್ಷೇತ್ರದ ಒಳಚರಡಿ ಹಾಗೂ ವಸತಿ ಸಮಸ್ಯೆ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳನ್ನು ಬಗೆಹರಿಸಲು
ವಿಧಾನ ಸಭೆಯಲ್ಲಿ ಸಚಿವ ಯು. ಟಿ. ಖಾದರರನ್ನು ಭೇಟಿಯಾದ ಶಾಸಕ ಅಭಯ ಪಾಟೀಲ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಒಳಚರಂಡಿ ಸಮಸ್ಯೆಯಿಂದ ಇಲ್ಲಿನ ಜನರು ಪರದಾಡುತ್ತಿದ್ದಾರೆ. ದಕಿಣ ಕ್ಷೇತ್ರದಲ್ಲಿ ಒಳಚರಂಡಿ ನಿಮರ್ಾಣ ಮಾಡಬೇಕು ಅದಕ್ಕಾಗಿ ಕೂಡಲೇ ಕ್ರಮ ಜರುಗಿಸಬೇಕು ಜೊತೆಗೆ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ನಗರದಲ್ಲಿ ತಾರತಮ್ಯ ಮಾಡದೇ ಎಲ್ಲರಿಗೂ ಸರಿಸಮನಾಗಿ ನೀರು ಹಂಚಿಕೆ ಮಾಡಲು ಕ್ರಮ ಜರಗಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿಕೊಂಡರು.
ಬೆಳಗಾವಿ ನಗರದಲ್ಲಿ ಕೇವಲ 10 ವಾರ್ಡಗಳಲ್ಲಿ 24ಥ7 ನಿರಂತರ ನೀರು ಪೂರೈಕೆ ವ್ಯವಸ್ಥೆ ಇದೆ. ಈ ಯೋಜನೆಯನ್ನು ಬೆಳಗಾವಿ ನಗರದ 58 ವಾರ್ಡಗಳಲ್ಲಿ ವಿಸ್ತರಿಸಲು ಟೆಂಡರ ಕರೆಯಲಾಗಿತ್ತು, ಆದರೆ ಹಲವಾರು ತಾಂತ್ರಿಕ ಕಾರಣಗಳಿಂದ ಟೆಂಡರ ಪ್ರಕ್ರೀಯೆ ಪೂರ್ಣಗೊಂಡಿಲ್ಲ. ಕೂಡಲೇ ಈ ಯೋಜನೆಯನ್ನು ಮರು ಟೆಂಡರ್ ಕರೆದು ಈ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಶಾಸಕ ಅಭಯ ಪಾಟೀಲ ಸಚಿವ ಯು. ಟಿ. ಖಾದರರವರಲ್ಲಿ ಮನವಿ ಮಾಡಿಕೊಂಡರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಸಾವಿರಾರು ನೇಕಾರ ಕುಟುಂಬಗಳಿವೆ ಬಡ ನೇಕಾರ ಕುಟುಂಬಗಳಿಗೆ ವಿಶೇಷವಾದ ವಸತಿ ಸಮುಚ್ಛಯ ನಿಮರ್ಿಸಿ, ದಕ್ಷಿಣ ಮತಕ್ಷೇತ್ರದ ಬಡ ಕುಟುಂಬಗಳಿಗೆ ಹೆಚ್ಚುವರಿ ಆಶ್ರಯ ಮನೆಗಳನ್ನು ಮಂಜೂರು ಮಾಡಬೇಕೆಂದು ಮನವಿ ಸಲ್ಲಿಸಿದರು. ಬೆಳಗಾವಿ ನಗರದಲ್ಲಿ ಸ್ವಚ್ಛತಾ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ. ಸ್ಮಾರ್ಟಸಿಟಿ ಪಟ್ಟಿಗೆ ಸೇರಿರುವ ಬೆಳಗಾವಿ ನಗರದಲ್ಲಿ ಕಂಡು ಕಂಡಲ್ಲಿ ಗಲೀಜು ಕಾಣಿಸುತ್ತಿದೆ ಎಂದು ಸಚಿವರಿಗೆ ದೂರು ನೀಡಿದರು.
ಶಾಸಕ ಅಭಯ ಪಾಟೀಲರ ಮನವಿ ಮತ್ತು ಅಹವಾಲಗಳನ್ನು ಸ್ವೀಕರಿಸಿ ಮಾತನಾಡಿದ ಯು. ಟಿ. ಖಾದರ ಅವರು ಮುಂದಿನ ವಾರ ಬೆಳಗಾವಿಗೆ ಭೇಟಿ ಕೊಡುತ್ತೇನೆ. ಮಹಾನಗರ ಪಾಲಿಕೆಯ ಸ್ವಚ್ಛತಾ ಕಾಮಗಾರಿಗಳು ಸೇರಿದಂತೆ ಪಾಲಿಕೆಯ ಪ್ರಗತಿ ಪರಿಶೀಲನೆ ಮಾಡುವುದರ ಮೂಲಕ ನಗರದ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಕೊಳ್ಳುವುದಾಗಿ ಭರವಸೆ ನೀಡಿದರು ಎಂದೂ ಶಾಸಕ ಅಭಯ ಪಾಟೀಲ ತಿಳಿಸಿದರು.