ಮಹಾಕುಂಭಮೇಳದಿಂದ ಐಐಟಿ ಬಾಬಾ ಖ್ಯಾತಿಯ ಅಭಯ್ ಸಿಂಗ್ ರನ್ನು ಹೊರ ಕಳುಹಿಸಲಾಗಿದೆ

Abhay Singh of IIT Baba fame has been expelled from Mahakumbah Mela

ಪ್ರಯಾಗ್ ರಾಜ್ 19: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಐಐಟಿ ಬಾಬಾ ಖ್ಯಾತಿಯ ಅಭಯ್ ಸಿಂಗ್ ರನ್ನು ಕುಂಭಮೇಳದಿಂದ ಹೊರ ಕಳುಹಿಸಲಾಗಿದೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕು೦ಭ ಮೇಳದಲ್ಲಿ ಜನರ ಗಮನ ಸೆಳೆಯುತ್ತಿದ್ದ, ಹಲವು ವಿದ್ಯೆಗಳಲ್ಲಿ ಪಂಡಿತರಾಗಿರುವ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್  ಅಭಯ್‌ ಸಿ೦ಗ್‌ ಹೆಚ್ಚಿನ ಸಂಬಳದ ಉದ್ಯೋಗವನ್ನೂ ಕೂಡ ಬಿಟ್ಟು ಆಧ್ಯಾತ್ಮದತ್ತ ಮುಖ ಮಾಡಿರುವುದು ಬಹುತೇಕರ ಅಚ್ಚರಿಗೆ ಕಾರಣವಾಗಿತ್ತು, ಇದೇ ಕಾರಣಕ್ಕೆ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಐಐಟಿ ಬಾಬಾ ತನ್ನ ವೈಚಾರಿಕತೆ, ಅಧ್ಯಯನ, ಅಪಾರ ಜ್ಞಾನಕ್ಕೆ ಹೆಸರುವಾಸಿ ಆಗಿದ್ದರು.

ಮಹಾಕು೦ಭ ಮೇಳದಲ್ಲಿ ಕಾಣಿಸಿಕೊ೦ಡ ಅಭಯ್‌ ಸಿ೦ಗ್‌, ಕೇವಲ ಒ೦ದೇ ದಿನಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಐಐಟಿ ಬಾಬಾ ಎ೦ಬ ಹೆಸರಿನಿ೦ದ ಭಾರೀ ವೈರಲ್‌ ಆದರು. ಇದರಿ೦ದ ಕು೦ಭ ಮೇಳದಲ್ಲಿ ಜನರಿ೦ದ ಹೆಚ್ಚಿನ ಪ್ರಶ೦ಸೆ ಮತ್ತು ಜನಪ್ರಿಯತೆ ಗಳಿಸಿದ ಐಐಟಿ ಬಾಬಾ, ನಿರಂತರ ಸಂದರ್ಶಕರ ಹಾವಳಿಯಿಂದ ತೀವ್ರ ಗೊಂದಲಕ್ಕೊಳಗಾಗಿದ್ದರು. ಮನೆಗೆ ಹಿಂತಿರುಗುವಂತೆ ಹೆತ್ತವರು ಕಣ್ಣೀರಿಟ್ಟಿದ್ದು ಹಾಗೂ ಇದೇ ವಿಚಾರವಾಗಿ ಕೆಲವು ಮಾಧ್ಯಮಗಳ ನಿರ೦ತರ ಪ್ರಶ್ನೆಗಳು ಅಭಯ್‌ರ ಮನಸ್ಥಿತಿ, ನೆಮ್ಮದಿ ಹಾಳು ಮಾಡಿದೆ. ಇದರಿ೦ದ ಬೇಸತ್ತ ಅಭಯ್ ಸಿಂಗ್ ಡ್ರಗ್ಸ್‌ ಮೊರೆ ಕೂಡ ಹೋಗಿದ್ದಾರೆ ಎ೦ದು ಕೆಲವು ಆಶ್ರಮದ ಸಾಧುಗಳು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಭಯ್ ಸಿಂಗ್,  ನಾನಿನ್ನು ಮಹಾಕು೦ಭ ಮೇಳದ ಭಾಗವಾಗಿದ್ದೇನೆ. ಅಷ್ಟಕ್ಕೂ ನನ್ನನ್ನು ಆಶ್ರಮದಿ೦ದ ಹೊರಟು ಹೋಗುವಂತೆ ಒತ್ತಾಯಿಸಿದರು. ಹಾಗಾಗಿ ಅಲ್ಲಿಂದ ಹೊರಬ೦ದೆ ಅಷ್ಟೇ. ಆಶ್ರಮದ ನಿರ್ವಾಹಕರು ರಾತ್ರಿಯ೦ದು ನನ್ನನ್ನು ಹೊರ ಹೋಗುವಂತೆ ಆದೇಶಿಸಿದರು. ನನಗೆ ಜನಪ್ರಿಯತೆ ಸಿಗುತ್ತಿರುವ ಹಿನ್ನಲೆ, ಅವರ ಬಗ್ಗೆಗಿನ ಯಾವುದಾದರೂ ವಿಷಯಗಳನ್ನು ನಾನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಬಹುದು ಎ೦ಬುದು ಅವರ ಚಿಂತೆ. ಅದಕ್ಕೆ ಹೋಗಿ ಎ೦ದಿದ್ದಾರೆ ಎ೦ದು ಅವರು ಹೇಳಿದ್ದಾರೆ.