ಎಟಿಪಿ ಚಾಲೆಂಜರ್: ಸೆಮಿಫೈನಲ್ಗೆ ಬಾಲಾಜಿ-ವಿಷ್ಣುವರ್ಧನ್ ಜೋಡಿ
ಮೀರ್ಬುಶ್, ಆ 16 ಶ್ರೀರಾಮ್ ಬಾಲಾಜಿ ಹಾಗೂ ವಿಷ್ಣು ವಧರ್ನಭಾರತದ ಜೋಡಿಯು ಇಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದೆ.
ಶುಕ್ರವಾರ ನಡೆದ ಎಟಿಪಿ ಚಾಲೆಂಜರ್ ಕ್ವಾರ್ಟರ್ ಫೈನಲ್ ಪುರುಷರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತದ ಜೊಡಿಯು ಸ್ವಿಜರ್ಲೆಂಡ್ನ ಮಾರ್ಕ-ಆ್ಯಂಡ್ರಿಯಾ ಹ್ಯೂಸ್ಲರ್ ಮತ್ತು ಚಿಲಿಯ ಹ್ಯಾನ್ಸ್ ಪೊಡ್ಲಿಪ್ನಿಕ್-ಕ್ಯಾಸ್ಟಿಲ್ಲೊ ಜೋಡಿಯ ವಿರುದ್ಧ 6-3, 6-2 ಅಂತರದಲ್ಲಿ ನೇರ ಸೆಟ್ಗಳಿಂದ ಗೆದ್ದು ಅಂತಿಮ ಎಂಟರ ಘಟಕ್ಕೆ ಲಗ್ಗೆ ಇಟ್ಟಿದೆ.
ಬಾಲಾಜಿ ಹಾಗೂ ವರ್ಧನ್ ಜೋಡಿಯು ಪಂದ್ಯದ ಎಲ್ಲ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ತೋರಿತು. ಮೂರು ಡಬಲ್ಸ್ ಫಾಲ್ಟ್ ಜತೆಗೆ ಎಂಟು ಏಸ್ ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿತು. ಆರು ಬ್ರೇಕಿಂಗ್ ಪಾಯಿಂಟ್ಗಳಲ್ಲಿ ಮೂರರಲ್ಲಿ ಜಯ ಸಾಧಿಸಿತು.
ಮಾರ್ಕ-ಆಂಡ್ರಿಯಾ ಹ್ಯೂಸ್ಲರ್ ಮತ್ತು ಹ್ಯಾನ್ಸ್ ಪೊಡ್ಲಿಪ್ನಿಕ್-ಕ್ಯಾಸ್ಟಿಲ್ಲೊ ಜೋಡಿಯು ಮೂರು ಏಸ್ ಅಂಕಗಳನ್ನು ಪಡೆಯಿತು. ಆದರೆ, ಒಂದೇ-ಒಂದು ಡಬಲ್ಸ್ ಫಾಲ್ಟ್ ಮಾಡಿತು. ಆರು ಬ್ರೇಕಿಂಗ್ ಪಾಯಿಂಟ್ಗಳಲ್ಲಿ ಮೂರರಲ್ಲಿ ಜಯ ಸಾಧಿಸಿತು. ಆದರೆ, ಅತ್ಯುತ್ತಮ ಪ್ರದರ್ಶನ ತೋರಿದ ಭಾರತದ ಜೋಡಿಯ ವಿರುದ್ಧ ಪುಟುದೇಳುವಲ್ಲಿ ಮೂರನೇ ಶ್ರೇಯಾಂಕದ ಜೋಡಿಯಿಂದ ಸಾಧ್ಯವಾಗಲಿಲ್ಲ.
ಜೆಕ್ ಗಣರಾಜ್ಯದ ರೋಮನ್ ಜೆಬಾವಿ ಮತ್ತು ನೆದರ್ಲ್ಯಾಂಡ್ನ ಮ್ಯಾಟ್ವೆ ಮಿಡೆಲ್ಕೂಪ್ ಜೋಡಿಯ ವಿರುದ್ಧ ಭಾರತದ ಜೋಡಿ ಸೆಮಿಫೈನಲ್ ಹಣಾಹಣಿಯಲ್ಲಿ ಸೆಣಸಲಿದೆ.
ಸ್ಲೊವೇನಿಯಾ ಓಪನ್ ಮೂರನೇ ಸುತ್ತಿನ ಪಂದ್ಯದಲ್ಲಿ 16ನೇ ಶ್ರೇಯಾಂಕದ ಭಾರತದ ಸಸಿಕುಮಾರ್ ಮುಕುಂದ್ ಅವರು ಅಗ್ರ ಕ್ರಮಾಂಕದ ಸ್ಥಳೀಯ ಆಟಗಾರ ಅಲ್ಜಾಜ್ ಬೆಡೆನೆ ವಿರುದ್ಧ 6-2, 6-2 ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ನೇರ ಸೆಟ್ಗಳಿಂದ ಸೋತು ಟೂನರ್ಿಯಿಂದ ಹೊರ ನಡೆದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 