ಆನ್ ಲೈನ್ ನಲ್ಲಿ ಜಿ ೭ ದೇಶಗಳ ಹಣಕಾಸು ಸಚಿವರು, ಕೇಂದ್ರೀಯ ಬ್ಯಾಂಕ್ ಗೌವರ್ನರ್ಗಳ ಸಭೆ

  
ವಾಷಿಂಗ್ಟನ್, ಮಾ ೧೩:ಮುಂಬರುವ   ಜಿ  ೭   ದೇಶಗಳ  ಗುಂಪಿನ  ಹಣಕಾಸು ಸಚಿವರು  ಹಾಗೂ ಕೇಂದ್ರೀಯ    ಬ್ಯಾಂಕ್   ಗೌವರ್ನರ್ಗಳ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ  ಆಯೋಜಿಸಲಾಗುತ್ತಿದೆ    ಎಂದು ಅಮೆರಿಕಾ  ಖಜಾನೆ ಇಲಾಖೆ ಗುರುವಾರ ತಿಳಿಸಿದೆ.   ಫಿಲಡೆಲ್ಫಿಯಾ ನಗರ   ಕಾರ್ಯಕ್ರಮದ  ಆತಿಥ್ಯವಹಿಸಲು  ಮುಂದೆಬಂದಿರುವುದಕ್ಕೆ    ಅಮೆರಿಕಾ ಖಜಾನೆ ಕಾರ್ಯದರ್ಶಿ ಸ್ಟೀವನ್ ಮ್ಯೂಚಿನ್,   ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್   ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.   ಈ ಮೊದಲು  ಈ ಸಭೆಯನ್ನು    ಮುಂದಿನ ತಿಂಗಳು ನಡೆಯಲು   ನಿರ್ಧರಿಸಲಾಗಿತ್ತು.    ಪಿಟ್ಸ್ ಬರ್ಗ್ ನಲ್ಲಿ  ಈ ತಿಂಗಳ ಕೊನೆಯಲ್ಲಿ  ಜಿ ಏಳು ಗುಂಪಿನ ದೇಶಗಳ ವಿದೇಶಾಂಗ ಸಚಿವರ ಸಭೆ ನಿಗದಿಯಾಗಿದ್ದು,  ಕೊರೊನಾ ಭೀತಿಯ ಕಾರಣದಿಂದ ಈ ಸಭೆಯನ್ನು  ವಿಡಿಯೋ ಕಾನ್ಫರೆನ್ಸ್  ಮೂಲಕ ನಡೆಸಲಾಗುವುದು  ಎಂದು  ಅಮೆರಿಕಾ ವಿದೇಶಾಂಗ ಇಲಾಖೆ ತಿಳಿಸಿತ್ತು   ಜಿ ಏಳು ದೇಶಗಳ ಗುಂಪಿನಲ್ಲಿ ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಹಾಗೂ ಅಮೆರಿಕಾ  ಸದಸ್ಯ ದೇಶಗಳಾಗಿವೆ.   ಅಮೆರಿಕಾದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುರುವ ಹಿನ್ನಲೆಯಲ್ಲಿ  ತೀವ್ರ ಭೀತಿ  ಆವರಿಸಿದ್ದು,   ಬಹುತೇಕ ಕಂಪನಿಗಳು  ಮನೆಯಿಂದ ಕಾರ್ಯನಿರ್ವಹಿಸುವಂತೆ ತನ್ನ ಉದ್ಯೋಗಿಗಳಿಗೆ ಸೂಚಿಸಿವೆ ಹಲವು ವಿಶ್ವ ವಿದ್ಯಾಲಯಗಳು ತರಗತಿಗಳನ್ನು ಆನ್ ಲೈನ್ ನಲ್ಲಿ  ನಡೆಸಲು ನಿರ್ಧರಿಸಿವೆ.   ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್,  ಶ್ವೇತಭವನದ ಮೂಲಕ ಬುಧವಾರ ರಾತ್ರಿ ಮಾಡಿದ ಭಾಷಣದಲ್ಲಿ,  ಶಾಲೆಗಳನ್ನು ಮುಚ್ಚಲು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹಾಗೂ ಜನರು ಒಂದಡೆ ಜಮಾವಣೆಗೊಳ್ಳದಂತೆ  ಆಡಳಿತಕ್ಕೆ  ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.   ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕ್ಯುಮೊ,  ಗುರುವಾರ  ರಾಜ್ಯಾದ್ಯಂತ ೫೦೦ ಕ್ಕೂ ಹೆಚ್ಚು ಜನರು  ಜಮಾಯಿಸುವಂತಹ ಸಭೆ ಸಮಾರಂಭಗಳ ಮೇಲೆ ನಿಷೇಧ ವಿಧಿಸಿದ್ದಾರೆ.    ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಅಭಿವೃದ್ಧಿಪಡಿಸಿದ   ಸೋಂಕು   ಪತ್ತೆ   ವ್ಯವಸ್ಥೆ  ಪ್ರಕಾರ, ಬುಧವಾರ ರಾತ್ರಿಯ ವೇಳೆಗೆ  ಅಮೆರಿಕಾದಲ್ಲಿ  ೧,೩೦೦ ಕೊರೊನಾ ವೈರಸ್ ಸೋಂಕು  ಪ್ರಕರಣಗಳು ದೃಢಪಟ್ಟಿದ್ದು, ೩೮ ಮಂದಿ ಮೃತಪಟ್ಟಿದ್ದಾರೆ