ಸ್ವಯಂ ಜನಗಣತಿಯ ಬೈಕ್ ರಾ​‍್ಯಲಿಗೆ ಎಸಿ, ಶ್ವೇತಾ ಬೀಡಿಕರ ಚಾಲನೆ

ಸ್ವಯಂ ಜನಗಣತಿಯ ಬೈಕ್ ರಾ​‍್ಯಲಿಗೆ ಎಸಿ, ಶ್ವೇತಾ ಬೀಡಿಕರ ಚಾಲನೆ AC, Shweta Bidika drive the bike rally for self-census

ಲೋಕದರ್ಶನ ವರದಿ, 

ಜಮಖಂಡಿ 09 : ಸರಕಾರದ ಸುತ್ತೋಲೆ ಪ್ರಕಾರ ಸ್ವಯಂ ಜನಗಣತಿಯನ್ನು ಜಾರಿಗೆ ತಂದಿರುತ್ತದೆ. 2027ರ ಪ್ರಕಾರ ಸ್ವಯಂ ಗಣನೆ ಪ್ರಕ್ರಿಯೆಯನ್ನು 2026ರ ಏಪ್ರಿಲ್ 1ರಿಂದ ಏಪ್ರಿಲ್ 15 ರವರೆಗೆ ನಡೆಸಲಾಗುತ್ತದೆ. ಈ ಸಮಯದಲ್ಲಿ ಸರ್ಕಾರದ ಅಂತರ್ಜಾಲದಲ್ಲಿ ಸ್ವಯಂ ಆಗಿ ಸಾರ್ವಜನಿಕರು ತಮ್ಮ ವಿವರವನ್ನು ನೀಡಬಹುದು ಎಂದು ಉಪವಿಭಾಗಾಕಾರಿ ಶ್ವೇತಾ ಬೀಡಿಕರ ತಿಳಿಸಿದರು. 

ನಗರದ ತಾಲೂಕಾಡಳಿತ ಸೌಧದ ಮುಂಭಾದಲ್ಲಿ ಬೈಕ್ ರಾ​‍್ಯಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಂದು ಕುಟುಂಬವು ತಮ್ಮ ಮನೆಯ ಮಾಹಿತಿಯನ್ನು ನಿಖರವಾಗಿ ಮತ್ತು ಸಂಪೂರ್ಣವಾಗಿ ಸ್ವಯಂ ಗಣನೆ ವ್ಯವಸ್ಥೆಯ ಮೂಲಕ ಸಲ್ಲಿಸಬೇಕು. ಈ ಪ್ರಕ್ರಿಯೆ ಸರಿಯಾದ, ಪಾರದರ್ಶಕ ಹಾಗೂ ಸಮಯೋಚಿತ ಮಾಹಿತಿಯನ್ನು ಸಂಗ್ರಹಿಸಲು ಸಹಕಾರಿಯಾಗುತ್ತದೆ, ಇದು ಭವಿಷ್ಯದ ಯೋಜನೆ ಮತ್ತು ಅಭಿವೃದ್ಧಿಗೆ ಬಹಳ ಮುಖ್ಯವಾಗಿದೆ. ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದರು. 

ತಹಶೀಲ್ದಾರ ಅನೀಲ ಬಡಿಗೇರ, ನಗರಸಭೆ ಪೌರಾಯುಕ್ತ ಜೋತಿ ಗೀರೀಶ ಸ್ವಯಂ ಜನಗಣತಿಯ ಕುರಿತು ಮಾತನಾಡಿದರು. 

ವಿಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಶೀಲ್ದಾರ ಅನೀಲ ಬಡಿಗೇರ, ನಗರಸಭೆ ಪೌರಾಯುಕ್ತ ಜೋತಿ ಗೀರಿಶ ಅವರು ಎಲ್ಲ ಸಿಬಂಧಿಗಳ ಜೊತೆಗೆ ಬೈಕ್ ರಾ​‍್ಯಲಿ ಓಡಿಸುವ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸ್ವಯಂ ಜನಗಣತಿಯ ಕುರಿತು ಜನಜಾಗೃತಿ ಮೂಡಿಸಿದರು. ನಂತರ ಎ,ಜಿ, ದೇಸಾಯಿ ಸರ್ಕಲ್‌ನಲ್ಲಿ ಜಮಾಯಿಸಿ. ಕೆಲಕಾಲ ರಸ್ತೆ ತಡೆಯನ್ನು ನಡೆಸಿ ಮಾನವ ಸರಪಳಿಯಿಂದ ಘೋಷಣೆಯನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಿದರು.