ರೈತರ ಸಮಸ್ಯೆಗೆ ಪರಿಹಾರ ಒದಗಿಸಲು ಎಬಿವಿಪಿಯಿಂದ ನ.6 ರಂದು ಪ್ರತಿಭಟನೆ
ABVP to protest on November 6 to provide solution to farmers' problems
ಬಳ್ಳಾರಿ 06: ರೈತ ದೇಶದ ಬೆನ್ನೆಲುಬು ರೈತರ ಏಳಿಗೆಗೆ ಶ್ರಮಿಸಬೇಕಾದದ್ದು ಸರಕಾರಗಳ ಕರ್ತವ್ಯ, ಆದರೆ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದ ಕಾರಣ ರೈತರು ಇಂದು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ, ರೈತರು ತಮ್ಮ ಬೆಳೆಗಳನ್ನ ಬೆಳೆಯಲು ಉಪಯೋಗಿಸುವ ರಸಗೊಬ್ಬರ, ಹಾಗೂ ಇನ್ನಿತರ ವಸ್ತುಗಳ ಬೆಲೆ ಹೆಚ್ಚಾಗಿರುವುದು ನಮಗೆಲ್ಲ ತಿಳಿದಿರುವ ಸಂಗತಿ, ಹೀಗೆ ಖರ್ಚು ಮಾಡಿ ಒಂದು ವರ್ಷಗಳ ಕಾಲ ಕಷ್ಟ ಪಟ್ಟು ಬೆಳೆದ ಬೆಳೆಗಳಿಗೆ ಸರಿಯಾದ ರೀತಿಯ ಬೆಲೆ ಸಿಗದೇ ಇರುವ ಕಾರಣ ಹಲವಾರು ತೊಂದರೆಗಳನ್ನು ಅನುಭವಿಸುವಂತಾಗಿದೆ, ಹಿಂದಿನ ಸರಕಾರ ರೈತರ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಜಾರಿಗೆ ಮಾಡಿದ್ದ ರೈತ ವಿದ್ಯಾ ನಿಧಿಯನ್ನು ಸಹಿತ ಇಂದಿನ ಸರಕಾರ ಸ್ಥಗಿತ ಮಾಡಿದ್ದು ರೈತರ ಮಕ್ಕಳಿಗೆ ಮಾಡಿದ ಅನ್ಯಾಯವಾಗಿದೆ.
ರೈತರು ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆ ಸಿಗದೇ ಹೋಗುವುದು ಎಂದರೆ ರೈತರ ಶ್ರಮ ಕ್ಕೆ ಅಪಮಾನದ ಜತೆಗೆ ಅವರಿಗೆ ಮಾಡುವ ದ್ರೋಹವೂ ಹೌದು. ನಮ್ಮ ಸಾಮಾಜಿಕ ಜೀವನ, ಆರ್ಥಿಕತೆ ಎಲ್ಲವೂ ಕೃಷಿ ಅವಲಂಬಿತವಾಗಿದೆ. ಯಾವಾಗ ರೈತರ ಬೆಳೆಗಳಿಗೆ ಸೂಕ್ತ ವರಮಾನ ಸಿಗುವುದಿಲ್ಲವೋ ಅದು ಉಳಿದೆಲ್ಲಾ ಕ್ಷೇತ್ರಗಳನ್ನೂ ಬಾಧಿಸುತ್ತದೆ. ಮುಖ್ಯವಾಗಿ ರೈತ ಮಕ್ಕಳ ಶಿಕ್ಷಣ, ಮದುವೆ, ವ್ಯವಹಾರ ಎಲ್ಲವೂ ತೊಂದರೆಗೆ ಒಳಗಾಗುತ್ತದೆ. ಮೊದಲೇ ಅವರಿಸಿದ ಬಡತನ ಸಂಕಟಗಳಿಂದ ತೊಂದರೆಗೆ ಒಳಗಾದ ಮಕ್ಕಳ ಶಿಕ್ಷಣಕ್ಕೆ ಇರುವ ಅವಕಾಶಕ್ಕೆ ಧಕ್ಕೆ ಉಂಟು ಮಾಡುತ್ತದೆ. ಕೃಷಿ ಬೆಲೆಯನ್ನು ನಂಬಿ ಕೊಂಡು ವ್ಯವಹಾರ ಮಾಡುವ, ಅದಕ್ಕಾಗಿ ಸಾಲ ಮಾಡಿರುವ ರೈತರು ಇನ್ನಷ್ಟು ಸಂಕಟಕ್ಕೆ ಒಳಗಾಗುತ್ತಾರೆ. ಇದನ್ನು ನಿವಾರಿಸಿ ಅವರ ಬದುಕು ಹಸನಾಗಿಸುವುದು ಸರ್ಕಾರದಜವಾಬ್ದಾರಿ.
ಈ ಕೂಡಲೇ ಪ್ರತಿಭಟನೆ ನಿರತರೈತರ ಬೇಡಿಕೆಗಳನ್ನು ಆಲಿಸಿ ಅವುಗಳನ್ನು ಕಾಲಮಿತಿ ಒಳಗೆ ಪೂರೈಸಬೇಕು. ಮೊದಲೇ ಮಳೆ, ನೆರೆಯಿಂದ ತಮ್ಮ ಕೃಷಿ ಉತ್ಪನ್ನಗಳನ್ನು ಕಳೆದುಕೊಂಡ ರೈತರಿಗೆ ಉಳಿದ ಬೆಳೆಗೂ ಸೂಕ್ತ ಬೆಲೆ ಸಿಗದೆ ಹೋದರೆ ಅವರನ್ನು ಮತ್ತಷ್ಟು ನೋವಿಗೆ ತಳ್ಳಿದಂತಾಗುತ್ತದೆ. ಸರ್ಕಾರ ಅವರ ಬೇಡಿಕೆ ಈಡೇರಿಸದೇ ಹೋದರೆ ರಾಜ್ಯದ ವಿದ್ಯಾರ್ಥಿಗಳು ಕೂಡ ರೈತರನ್ನು ಬೆಂಬಲಿಸಿ ಬೀದಿಗಿಳಿದು ಹೋರಾಡಲು ಸಿದ್ಧವಿದೆ. ಕೂಡಲೇ ಸರ್ಕಾರ ಗಮನ ಹಸರಿಸಲು ಒತ್ತಾಯಿಸುತ್ತಿದ್ದೇವೆ. ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ಬೆಂಗಳೂರು ರವರಿಗೆ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲಾಗುವುದು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಕೆ.ದೀಲೀಪ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಟಿ.ಭರತ್ ಹಂಪಾಪಟ್ಟಣ, ನಗರ ಕಾರ್ಯದರ್ಶಿ ಆಂಜಿನೇಯ, ಕಾರ್ಯಕರ್ತರಾದ ಮಾರುತಿ, ದರ್ಶನ್, ವಂಶಿ, ಶಶಿಕಲಾ ನಂದಿನಿ, ಮಹೇಶ್, ಪ್ರಜ್ವಲ್, ಲೋಹಿತ್, ವಿನೋದ್ ಹಾಗೂ ಮತ್ತಿತರರು ಭಾಗವಹಿಸಿದ್ದರು, ಸದರಿ ವಿಷಯವನ್ನು ತಮ್ಮ ಅಮೂಲ್ಯ ದಿನಪತ್ರಿಕೆಯಲ್ಲಿ ಪ್ರಕಟಿಸಲು ಕೋರಿದೆ. ಪ್ರಮುಖ ಬೇಡಿಕೆಗಳು ರೈತ ಬೆಳೆದ ಬೆಳೆಗೆ ಸೂಕ್ತ ದರವನ್ನು ನೀಡಬೇಕು. ರೈತರಿಗೆ ಅಗತ್ಯವಿರುವ ಕೃಷಿ ಚಟುವಟಿಕೆ ವಸ್ತುಗಳನ್ನು ಸಮರ್ಕವಾಗಿ ಸರಬರಾಜು ಮಾಡಬೇಕು. ರೈತರ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದರೈತ ವಿದ್ಯಾನಿಧಿಯನ್ನು ನೀಡಬೇಕು. ಕಬ್ಬು ಬೆಳೆಗಾರರ ಬೇಡಿಕೆಗೆ ತಕ್ಷಣವೇ ಪರಿಹಾರ ಒದಗಿಸಬೇಕು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 