ಕುಡಿದ ಅಮಲಿನಲ್ಲಿ ನದಿಗೆ ಹಾರಿದ ಯುವಕ
A young man who jumped into the river while drunk
ಬೆಳಗಾವಿ 19: ಮದ್ಯದ ನಶೆಯಲ್ಲಿ ಯುವಕನೋರ್ವ ನದಿಗೆ ಹಾರಿದ ಘಟನೆ ಬೆಳಗಾವಿಯ ಕಂಗ್ರಾಳಿಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಕಂಗ್ರಾಳಿ ಗ್ರಾಮದ ಸಚಿನ್ ಮಾನೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದಾನೆ.
ಕಂಗ್ರಾಳಿ ಗ್ರಾಮದ ಬಳಿ ಮಾರ್ಕಂಡೇಯ ನದಿಯ ತೀರದಲ್ಲಿ ಮದ್ಯದ ಬಾಟಲಿ, ನೀರಿನ ಬಾಟಲಿ ಹಾಗೂ ಶೇಂಗಾ ಪತ್ತೆಯಾಗಿದ್ದು, ಈತ ಕುಡಿದ ಅಮಲಿನಲ್ಲಿ ಹೀಗೆ ಮಾಡಿರಬಹುದು ಎಂದು ಕಾಣಿಸುತ್ತಿದೆ.
ಆತ್ಮಹತ್ಯೆಗೆ ಮೊದಲು ಈತನೊಬ್ಬರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ವಿವರಗಳು ಬಹಿರಂಗವಾಗಿವೆ. ಸ್ಥಳೀಯ ಯುವಕರೊಬ್ಬರ ಮೊಬೈಲ್‌ನಿಂದ ಕರೆ ಮಾಡಿದ ಬಳಿಕ ನದಿಗೆ ಹಾರಿದ್ದಾನೆ.
ಘಟನೆಯ ಪ್ರತ್ಯಕ್ಷದರ್ಶಿ ಪ್ರಸಾದ್ ಅವರು ನೀಡಿದ ಮಾಹಿತಿಯ ಪ್ರಕಾರ ಸಚಿನ್ ಮಾನೆ ನದಿಗೆ ಬೀಳುತ್ತಿದ್ದಂತೆ ಯುವಕರಿಬ್ಬರು ತಕ್ಷಣ ರಕ್ಷಣೆಗೆ ಮುಂದಾಗಿ ಪ್ಲಾಸ್ಟಿಕ್ ಎಸೆದು ಜೀವ ಉಳಿಸಲು ಯತ್ನಿಸಿದರು. ಆದರೆ ಯುವಕ ಅದನ್ನು ಹಿಡಿಯದೇ, ನದಿಯಲ್ಲೇ ತೇಲಿ ಹೋಗಿದ್ದಾನೆ.
ಈ ಘಟನೆ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಹಿತಿ ದೊರಕುತ್ತಿದ್ದಂತೆಯೇ ಎಪಿಎಂಸಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರೀಶೀಲನೆ ನಡೆಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 