ಮೊಬೈಲ್ ನಿಂದ ದೂರವಿರಿ ವಿದ್ಯಾರ್ಥಿಗಳಿಗೆ ಕಿವಿಮಾತು : ಡಾ. ಸಿ.ಎಚ್.ವಿ.ಎಸ್.ವಿ.ಪ್ರಸಾದ್
A word of advice to students to stay away from mobile phones: Dr. C.H.V.S.V.Prasad
ಗಂಗಾವತಿ 18 : ಕಲ್ಯಾಣ ಕರ್ನಾಟಕ ದಿನಾಚರಣೆ ಮತ್ತು ಶಿಕ್ಷಕರ ದಿನಾಚರಣೆಯನ್ನು ವಿದ್ಯಾನಗರ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಅದ್ದೂರಿಯಾಗಿ ಜರುಗಿತು.
ವಿದ್ಯಾರ್ಥಿಗಳು ಕುಂಭ ಮೆರವಣಿಗೆ ಮುಖಾಂತರ ಎಲ್ಲಾ ಗಣ್ಯರನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡರು ನಂತರ ಸಂಸ್ಥೆಯ ಅಧ್ಯಕ್ಷರು ಎಸ್ ಪ್ರಸಾದ್ ಹಾಗೂ ಅತಿಥಿಗಳು ಧ್ವಜಾರೋಹಣ ಮಾಡಿದರು.ಮುಖ್ಯ ಅತಿಥಿಗಳು ಡಾಽಽ ಸಿ.ಎಚ್. ವಿ. ಎಸ್. ವಿ. ಪ್ರಸಾದ್ ರವರು ಮಾತನಾಡಿ ಶಿಕ್ಷಕರ ಸೇವೆಗೆ ನಾವು ಬೆಲೆ ಕಟ್ಟಲು ಆಗುವುದಿಲ್ಲ ಎಂದು ಹಾಗೂ ಮೊಬೈಲ್ ಗಳಿಂದ ದೂರವಿದ್ದು ಸತತ ಪರಿಶ್ರಮ ಪಡಬೇಕು ಪ್ರತಿಯೊಬ್ಬರೂ ಸೇವಾ ಮನೋಭಾವನೆಯನ್ನು ಇಟ್ಟುಕೊಳ್ಳಬೇಕು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ನಾನ್ನು ಅನೇಕ ವಿದ್ಯಾ ಸಂಸ್ಥೆಗಳಿಗೆ ಹಾಗೂ ಸಮಾಜ ಸೇವಕ್ಕೆ ಸಹಾಯ ಸಹಕಾರ ಮಾಡುತ್ತಾ ಬಂದಿದ್ದೇನೆ ಅದೇ ರೀತಿ ಶಾರದಾ ವಿದ್ಯಾ ಸಂಸ್ಥೆಯ ಮೊದಲನೇ ಮಹಡಿಯ ಕಟ್ಟಡ ನಿರ್ಮಾಣಕ್ಕೆ ವೆಚ್ಚವಾಗುವ ಸಂಪೂರ್ಣ ಮೊತ್ತವನ್ನು ನಾನ್ನು ನೀಡುತ್ತೇನೆ ಮುಂದಿನ ದಿನದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗುವ ಯಾವುದೇ ಅನುಕೂಲವಾಗಲಿ ನಾನ್ನು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.ಶ್ರೀ ಎಸ್. ಪ್ರಸಾದ ರವರು ಮಾತನಾಡಿ ಶಿಕ್ಷಕರನ್ನು ಉದ್ದೇಶಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಕರ ಸತತ ಪರಿಶ್ರಮದ ಮೇಲೆ ಅವಲಂಬಿತವಾಗಿದೆ ಎಂದುರು.
ಅತಿಥಿಗಳಾಗಿರುವ ಶ್ರೀ ಜಾನೆ ಕುಂಟೆ ಬಸವರಾಜ್ ವೀರಶೈವ ವಿದ್ಯಾವರ್ಧಕ ಸಂಘ ಮತ್ತು ಚೇರ್ಮನ್ ರಾವ್ ಬಹದ್ದೂರ್ ಮಹಾಬಲೇಶ್ವರ ಇಂಜಿನಿಯರಿಂಗ್ ಕಾಲೇಜ್ ಬಳ್ಳಾರಿ ಇವರು ಮಾತನಾಡಿ ದೇಶದ ತುಂಬಾ ಎಷ್ಟೇ ಗುಡಿ ಗುಂಡಾರಗಳು ಕಟ್ಟಿದರು, ಅದರ ಆದಾಯ ಯಾವುದಕ್ಕೆ ಉಪಯೋಗಿಸುತ್ತೇವೆ ಗೊತ್ತಿಲ್ಲ ಆದರೆ ಈ ಶಾರದಾ ವಿದ್ಯಾಸಂಸ್ಥೆಯು ಅನೇಕ ಶಾಲೆಗಳನ್ನು ಪ್ರಾರಂಭಿಸಿ ದೇಶಕ್ಕೆ ಮಕ್ಕಳನ್ನು ಆಸ್ತಿಯನ್ನಾಗಿ ಮಾಡುತ್ತದೆ ಆದ್ದರಿಂದ ಗುಡಿ ಗುಂಡಾರಗಳ ಬದಲು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಎಂದು ಕರೆ ನೀಡಿದರು.ಶ್ರೀ ರಾಮಚಂದ್ರ ಮೂರ್ತಿ ಶ್ರೀ ಮುರಳಿ ಶಿವ ನಾಗೇಶ್ವರರಾವ್ ತುಂಗಭದ್ರಾ ಸ್ಟೋನ್ ಕ್ರಷರ್ ಇವರು ಮಾತನಾಡಿಶಾರದಾ ಸಂಸ್ಥೆಗೆ 2025 - 26 ನೇ ಸಾಲಿನಲ್ಲಿ ಮಧ್ಯಮ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂದು ನಾವು ನಮ್ಮ ಅಳಿಲು ಸೇವೆಯನ್ನು ಸಲ್ಲಿಸಿದ್ದೇವೆ ಎಂದು ಮಾತನಾಡಿದರು.ನಂತರ ಶಿಕ್ಷಕರ ಸತತ ಪರಿಶ್ರಮವನ್ನು ಗುರುತಿಸಿ ಶಾರದಾ ಸಂಸ್ಥೆ ಕಾರ್ಯದರ್ಶಿಗಳು ಶ್ರೀ ಆರ್. ರಾಜಶೇಖರ್ ಅವರು ತಮ್ಮ ಸ್ವ-ಇಚ್ಛೆಯಿಂದ ಎಲ್ಲಾ ಶಿಕ್ಷಕ ಶಿಕ್ಷಕರಿಗೆ ಸಿಬ್ಬಂದಿಗೆ ಶಿಕ್ಷಕರ ದಿನಾಚರಣೆ ಅಂಗವಾಗಿ ಕಾಣಿಕೆಗಳನ್ನು ನೀಡಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಎಚ್ ಬಿ ನಟೇಶ್, ಗೌರವಾಧ್ಯಕ್ಷರು ಟಿ.ವಿ ಸತ್ಯನಾರಾಯಣ್, ಸಂಸ್ಥೆ ಉಪಾಧ್ಯಕ್ಷರಾದ ಡಿ. ರಾಮಕೃಷ್ಣರವರು ಖಜಾಂಚಿಗಳಾಗಿರುವ ಎಂ. ಸತ್ಯನಾರಾಯಣ್ಸಹ ಕಾರ್ಯದರ್ಶಿಗಳಾಗಿರುವ ಕಮ್ಮಾ ಕೋಟೇಶ್ವರರಾವ್,ಕೆ ತ್ರಿನಾಥ್, ಸದಸ್ಯ ಗೊಟ್ಟಿಪಾಟಿ ರವಿಕುಮಾರ್, ಎನ್. ಆರ್. ಶ್ರೀನಿವಾಸ್, ಸಿಎಚ್.ರಾಮಕೃಷ್ಣ ಕಲ್ಯಾಣಂಜಾನಕಿರಾಮ,ಶ್ರೀ ಜಿ. ರಾಯುಡು, ಕೆ. ಬಿ. ಗೋಪಾಲಕೃಷ್ಣ ರೆಡ್ಡಿ, ಪಿ.ಲಕ್ಷ್ಮಣ್ರಾವ್, ಶ್ರೀ ಜಿ. ಕೃಷ್ಣಾರಾವ್, ಟಿ.ವಿ.ಸುಬ್ಬರಾವ್, ಎಸ್. ವೆಂಕಟೇಶ್ವರ್ ರಾವ್, ಶ್ರೀ ಜವ್ವಾದಿ ಸಾಯಿಬಾಬು, ಮೇಕಾ ರಾಮಕೃಷ್ಣ ಸಂಸ್ಥೆಯ ಆಡಳಿತ ಅಧಿಕಾರಿ ವೈ ಸುದರ್ಶನ್ ರಾವ್ ಮತ್ತು ಮುಖ್ಯ ಉಪಾಧ್ಯಾಯನಿ ಉದಯಶ್ರೀ ಶಿಕ್ಷಕ ಮತ್ತು ಸಿಬ್ಬಂದಿ, ಮತ್ತು ಎನ್. ಆರ್. ಶಾಲೆ, ಎಸ್.ಜಿ.ವಿ.ಆರ್. ತೆಲುಗು ಮಾಧ್ಯಮ ಪ್ರೌಢಶಾಲೆ, ಹೆಚ್.ಆರ್. ಸರೋಜಮ್ಮ ಪ್ರಾಥಮಿಕ ಶಾಲೆ, ಎಸ್.ಜಿ.ವಿ. ಆರ್. ಆಂಗ್ಲ ಮಾಧ್ಯಮ ಶಾಲೆ ಮತ್ತು ವೈ.ಜೆ.ಆರ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 