ತೇರದಾಳ ಪಟ್ಟಣದ ರಾಯಲ್ ಲಾಡ್ಜನಲ್ಲಿ ಮಹಿಳೆ ಹಾಗೂ ವ್ಯಕ್ತಿಯೊಬ್ಬನಿಗೆ ಬೆಂಕಿ ಹತ್ತಿಕೊಂಡು ತೀವ್ರ ಗಾಯ
A woman and a man were seriously injured in a fire at the Royal Lodge in Teradala town.
ಕ್ರೈಂ,
ಲೋಕದರ್ಶನ ವರದಿ,
ಜಮಖಂಡಿ 18 : ರಬಕವಿ-ಬನಹಟ್ಟಿ ತಾಲ್ಲೂಕಿನ ತೇರದಾಳ ಪಟ್ಟಣದ ರಾಯಲ್ ಲಾಡ್ಜನಲ್ಲಿ ಮಹಿಳೆ ಹಾಗೂ ವ್ಯಕ್ತಿಯೊಬ್ಬನಿಗೂ ಬೆಂಕಿ ಹತ್ತಿಕೊಂಡ ಪರಿಣಾಮ ಗಂಭೀರ ಸುಟ್ಟಿರುವ ಘಟನೆ ಜರುಗಿದೆ.
ತೇರದಾಳ ಪಟ್ಟಣದ ರಾಯಲ್ ಲಾಡ್ಜ್ ಮತ್ತು ಬಾರ್ ರೆಸ್ಟೋರೆಂಟನ ರೊಮ್ ಒಂದರಲ್ಲಿ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಅಕ್ಷತಾ ತಂದೆ ಶ್ರೀಶೈಲ್ ಸತ್ತಿ (25) ಹಾಗೂ ರೂಮ್ ಬಾಯ್ ಆಗಿರುವ ಜಮಖಂಡಿ ತಾಲೂಕಿನ ಮರೇಗುದ್ದಿ ಗ್ರಾಮದ ಗುರುಪಾದಯ್ಯ ಕಲ್ಲಯ್ಯ ಮಠಪತಿ (40) ಇಬ್ಬರಿಗೂ ನಸುಕಿನ ಜಾವದಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ ಸಂಪೂರ್ಣವಾಗಿ ಸುಟ್ಟಿರುತ್ತಾರೆ.
ಅಕ್ಷತಾ ತಂದೆ ಶ್ರೀಶೈಲ್ ಸತ್ತಿ (25) ರಾಯಲ್ ಲಾಡ್ಜ್‌ನಲ್ಲಿ ವಸತಿ ಮಾಡಿಕೊಂಡಿದ್ದು. ಮರುದಿನ ಮಹಿಳೆಯ ರೂಮ್‌ವನ್ನು ಕಾಲಿ ಮಾಡಿರುತ್ತಾಳೆ. ಅವಳ ಬಳಿ ಹಣವಿಲ್ಲದ ಕಾರಣ ರೂಮ್ ಬಾಯ್ ಗುರುಪಾದಯ್ಯ ಕಲ್ಲಯ್ಯ ಮಠಪತಿ (40) ಅವಳನ್ನು ತಾನು ಇರುವ ರೂಮ್‌ನಲ್ಲಿ ಇರಿಸಿಕೊಂಡಿರುತ್ತಾನೆ. ನಸುಕಿನ ಜಾವದಲ್ಲಿ ಇಬ್ಬರಿಗೂ ಬೆಂಕಿ ಹತ್ತಿರುತ್ತದೆ. ಇಬ್ಬರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ತೀವ್ರ ಸುಟ್ಟಗಾಯಗಳು ಆಗಿದ್ದು. ಅವರನ್ನು ಹೆಚ್ಚಿನ ಚಿಕಿತ್ಸೆಗೆ ವಿಜಯಪೂರಕ್ಕೆ ರವಾನಿಸಲಾಗಿದೆ ಎಂದು ತೇರದಾಳ ಪಿಎಸ್‌ಐ ಎಸ್.ಕೆ.ಸಿಂಗನ್ನವರ ತಿಳಿಸಿದ್ದಾರೆ.
ರಾಯಲ್ ರೆಸ್ಟೋರೆಂಟ್ ಲಾಡ್ಜ್ ಮತ್ತು ಬಾರನಲ್ಲಿ ಇರುವ ರೂಮ್‌ದಲ್ಲಿ ಇಬ್ಬರಿಗೂ ಬೆಂಕಿ ಹತ್ತಿರುವ ಕುರಿತು ಯಾವುದಾರೂ ಸ್ಪೋಟ್‌ಕ್ಕ ವಸ್ತುಗಳು ಹಾಗೂ ಇಬ್ಬರು ಸೇರಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾರಾ ಎಂಬುವುದರ ಬಗ್ಗೆ ತನಿಖೆಯನ್ನು ಮಾಡಲಾಗುತ್ತಿದೆ ಎಂದು ಪಿಎಸ್‌ಐ ಎಸ್,ಕೆ, ಸಿಂಗನ್ನವರ ಮಾಹಿತಿಯನ್ನು ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 