ಕುಟುಂಬದ ಸಮತೋಲನಕ್ಕೆ ಮಹಿಳೆಯ ತಾಳ್ಮೆ ಅವಶ್ಯ.- ಪಂ. ಎಂ. ವೆಂಕಟೇಶಕುಮಾರ

ಕುಟುಂಬದ ಸಮತೋಲನಕ್ಕೆ ಮಹಿಳೆಯ ತಾಳ್ಮೆ ಅವಶ್ಯ.- ಪಂ. ಎಂ. ವೆಂಕಟೇಶಕುಮಾರ A woman's patience is essential for family balance: Pt. M. Venkateshkumar

ಧಾರವಾಡ 09: ಮಹಿಳೆಗೆ ತಾಳ್ಮೆ ಮುಖ್ಯ. ಮಹಿಳೆ ತಾಳ್ಮೆ ವಹಿಸಿದರೆ ಮಾತ್ರ ಕುಟುಂಬದ ಸಮತೋಲನವನ್ನು ಕಾಯ್ದುಕೊಳ್ಳಬಹುದು ಎಂದು ಖ್ಯಾತ ಹಿಂದೂಸ್ಥಾನಿ ಗಾಯಕರಾದ ಪಂ. ಎಂ. ವೆಂಕಟೇಶಕುಮಾರ ಅಭಿಪ್ರಾಯಪಟ್ಟರು. 

ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮತ್ತು ಮಕ್ಕಳ ಮಂಟಪವು ಆಯೋಜಿಸಿದ್ದ ಪ್ರಸಕ್ತ ತ್ರೈವಾರ್ಷಿಕ ಅವಧಿಯ ಕಾರ್ಯಚಟುವಟಿಕೆಗಳ ಉದ್ಘಾಟನೆ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

ಮುಂದುವರೆದು ಮಾತನಾಡಿದ ಅವರು, ಅಗತ್ಯಕ್ಕಿಂತ ಹೆಚ್ಚಿನ ತಾಳ್ಮೆಯನ್ನು ಮಹಿಳೆ ವಹಿಸಿದರೆ ಅದು ಗಂಡಸರ ದಬ್ಬಾಳಿಕೆಯನ್ನು ಹೆಚ್ಚಿಸಬಹುದು ಆದ್ದರಿಂದ ಮಹಿಳೆಯು ಇತಿಮಿತಿಯೊಳಗೆ ತಾಳ್ಮೆಯಿಂದ ಜಾಣ್ಮೆವಹಿಸಿ ಕುಟುಂಬವನ್ನು ನಿರ್ವಹಿಸಬೇಕೆಂದರು.  

ಕರ್ನಾಟಕ ವಿಶ್ವವಿದ್ಯಾಲಯ ಕಲಾ ನಿಖಾಯದ ಡೀನರು ಹಾಗೂ ಮುಖ್ಯಸ್ಥರಾದ ಡಾ. ಮೃತ್ಯುಂಜಯ ಅಗಡಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಹೆಣ್ಣು ಸಂಸಾರದ ಕಣ್ಣು. ಒಂದು ಕುಟುಂಬವು ಯಾವ ಹಾದಿಯಲ್ಲಿ ಸಾಗುತ್ತದೆ ಎನ್ನುವುದಕ್ಕೆ ಹೆಣ್ಣೇ ಕಾರಣ. ಆದರೆ ಆಧುನಿಕ ಯುಗದಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಶಿಕ್ಷಣವನ್ನು ಪಡೆದುಕೊಂಡು ಹಾಗೂ ಕೆಲಸದ ಒತ್ತಡದಿಂದಾಗಿ ಅಹಮಿಕೆಯನ್ನು ಬೆಳೆಸಿಕೊಳ್ಳುತ್ತಿರುವುದರಿಂದ ಕುಟುಂಬದಲ್ಲಿ ಏರುಪೇರು ಉಂಟಾಗುತ್ತದೆ ಎಂದರು. 

ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷೀಯ ನುಡಿಗಳನ್ನಾಡಿ ಮಹಿಳೆ ಮತ್ತು ತಾಳ್ಮೆ ಕುರಿತಾಗಿ ಏರಿ​‍್ಡಸಲಾದ ಸ್ಪರ್ಧಾ ವಿಜೇತರನ್ನು ಅಭಿನಂದಿಸಿದರು. 

ಉದ್ಘಾಟನಾ ಸಮಾರಂಭಕ್ಕಿಂತ ಮೊದಲು ಜರುಗಿದ “ಮಹಿಳೆ ಮತ್ತು ತಾಳ್ಮೆ” ಕುರಿತು ನಡೆದ ಘಟನೆ ವಿವರಿಸುವ ಸ್ಪರ್ಧೆಯಲ್ಲಿ ಸುಮಾರು 20ಕ್ಕಿಂತ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. “ಮಹಿಳೆ ಮತ್ತು ತಾಳ್ಮೆ” ಕುರಿತು ನಡೆದ ಘಟನೆ ಸ್ಪರ್ಧೆಯಲ್ಲಿ ಶ್ರೀಮತಿ ಮಂಜುಳಾ ಚೌಗಲೆ ಪ್ರಥಮ ಸ್ಥಾನ, ಡಾ. ಸುಧಾ ಹುಲಗೂರ ದ್ವಿತೀಯ ಸ್ಥಾನ, ಶ್ರೀಮತಿ ಶಿಲ್ಪಾ ಮಿಣಜಗಿ ಹಾಗೂ ಡಾ. ಸುಕುಮಾರಿ ಎಚ್‌.ಯು. ಮತ್ತು ಶ್ರೀಮತಿ ನೀಲಾ ಶಿಗ್ಲಿ ಸಮಾಧಾನಕರ ಬಹುಮಾನ ಪಡೆದರು. ಸ್ಪರ್ಧಾ ವಿಜೇತರಿಗೆ ಬಹುಮಾನ ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.  

ಗುಬ್ಬಚ್ಚಿ ಗೂಡು ಶಾಲೆ, ಧಾರವಾಡ, ಸರಕಾರಿ ಹೆಣ್ಣು ಮಕ್ಕಳ ಶಾಲೆ, ಅಮ್ಮಿನಭಾವಿ ಹಾಗೂ ಸರಕಾರಿ ಉರ್ದು ಶಾಲೆ, ಹೆಬ್ಬಳ್ಳಿ ಶಾಲೆಯ ಮಕ್ಕಳಿಂದ ವೃಂದಗಾನ ಜರುಗಿತು.   

ಸಮಾರಂಭದಲ್ಲಿ ಎಲ್ಲರನ್ನೂ ಸಂಚಾಲಕರಾದ ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ  ಶಂಕರ ಹಲಗತ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ವಿ. ಶಾರದಾ ಹಾಗೂ ಗುಡುಸಾಬ ನದಾಫ್ ಅತಿಥಿಗಳನ್ನು ಪರಿಚಯಿಸಿದರು. ಡಾ. ಅರುಣಾ ಹಳ್ಳಿಕೇರಿ, ಸರಸ್ವತಿ ಪೂಜಾರ, ಎಲ್‌.ಐ. ಲಕ್ಕಮ್ಮನವರ ನಿರ್ಣಾಯಕರಾಗಿದ್ದರು. ಸ್ಪರ್ಧೆಯನ್ನು ಶ್ರೀಮತಿ ಗೀತಾ ಕುಂಬಿ ನಡೆಸಿಕೊಟ್ಟರು. ರುದ್ರಾಕ್ಷಿ ಹಟ್ಟಿಹೊಳಿ ವಂದಿಸಿದರು. ಸವಿತಾ ಕುಸುಗಲ್ ನಿರೂಪಿಸಿದರು. ಕುಮಾರಿ ಆರಾಧ್ಯ ದೊಡವಾಡ ಪ್ರಾರ್ಥಿಸಿದರೆ, ಶ್ರೀನಿಧಿ ಅಕ್ಕಿ ವಚನ ನೃತ್ಯ ಪ್ರಸ್ತುತಪಡಿಸಿದರು.  

ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶ ತುರುಮರಿ, ಶಿವಾನಂದ ಭಾವಿಕಟ್ಟಿ, ಡಾ. ಧನವಂತ ಹಾಜವಗೋಳ, ಶಶಿಕಲಾ ಶಾಸ್ತ್ರಿಮಠ, ಸುಜಾತಾ ಪರ್ವತದೇವರಮಠ, ಆನಂದ ಅಮರಶೆಟ್ಟಿ, ಜ್ಯೋತಿ ಭಾವಿಕಟ್ಟಿ, ರೇಖಾ ಅಂತಕ್ಕನವರ, ಶ್ರೀಮತಿ ನಿರ್ಮಲಾ ಮತ್ತು ಮಂಗಳಾ ಚಿಗಟೇರಿ, ಇನ್ನಿತರರು ಪಾಲ್ಗೊಂಡಿದ್ದರು.