ಮೊಹರಂ ಹಬ್ಬದ ಪ್ರಯುಕ್ತ ಸರ್ವ ಧರ್ಮ ಗುರುಗಳ ಸಾನ್ನಿಧ್ಯದಲ್ಲಿ ಭಾವೈಕ್ಯತಾ ನಡಿಗೆ
A walk of unity in the presence of religious leaders on the occasion of Muharram
ಶಿಗ್ಗಾವಿ 28 : ಪ್ರವಾದಿ ಮೊಹ್ಮದ ಪೈಗಂಬರರು ಹಾಗೂ ಮೊಹರಂ ದೇವರ ಸ್ಮರಣಾರ್ಥ ಮೊಹರಂ ಹಬ್ಬದ ಪ್ರಯುಕ್ತ ವಿರಕ್ತಮಠ ಸಂಗನಬಸವ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶಿಗ್ಗಾವಿ ಅಹಲೇ ಸುನ್ನತುಲ್ ಜಮಾತ ಸಾಲಗೇರಿ ಓಣಿ ಶಿಗ್ಗಾವಿ, ಪುರಸಭೆ ಸದಸ್ಯೆ ನಸ್ರೀಬಾನು ಮುಕ್ತಾರಖಾನ ತಿಮ್ಮಾಪೂರ ಇವರ ಸಹಯೋಗದಲ್ಲಿ ದಿ 3 ಗುರುವಾರದಂದು ಭಾವೈಕ್ಯತಾ ನಡಿಗೆಯು ಆಯೋಜಿಸಲಾಗಿದೆ ಎಂದು ಸಮಾಜ ಸೇವಕ ಮುಕ್ತಾರಖಾನ ತಿಮ್ಮಾಪೂರ ಹೇಳಿದರು.
ಪಟ್ಟಣದ ರಾಣಿ ಚನ್ನಮ್ಮ ವೃತ್ತದಿಂದ ಮಧ್ಯಾಹ್ನ 3 ಘಂಟೆಗೆ ಸರ್ವ ಧರ್ಮ ಗುರುಗಳ ಸಾನ್ನಿಧ್ಯದಲ್ಲಿ ಭಾವೈಕ್ಯತಾ ನಡಿಗೆಯು ಮಾರ್ಕೆಟ್ ರಸ್ತೆ ಮಾರ್ಗವಾಗಿ ಸಾಲಗೇರಿ ಓಣಿಯ ದೊಡ್ಡ ದೇವರ ಮಸೀದಿಯವರೆಗೆ ಭಾವೈಕ್ಯತಾ ನಡಿಗೆ ಕೈಗೊಂಡಿದ್ದು ನಂತರ ಮೊಹರಂ ಹಬ್ಬದ ದೇವರುಗಳಿಗೆ ತೇರಾ ಏರಿಸುವ ಕಾರ್ಯಕ್ರಮ ಜರುಗಲಿದೆ ಎಂದು ಸಮಾಜ ಸೇವಕ ಜಿಲಾನಿ ಜಂಗ್ಲಿ ಹೇಳಿದರು.
ಈ ಸಂದರ್ಭದಲ್ಲಿ ವಿರಕ್ತಮಠ ಸಂಗನಬಸವ ಮಹಾಸ್ವಾಮಿಗಳು, ಇಮಾಮಹುಸೇನ ಅದಂಬಾಯಿ, ರಬ್ಬಾನಿ ಗೋಟಗೋಡಿ, ಆಸ್ಕರಲಿ ಮುಳಕೇರಿ, ಹಜರೇಸಾಬ ಲಕ್ಷ್ಮೇಶ್ವರ, ಮೌಲಾಲಿ ಟಪಾಲ, ಮಕ್ಬುಲಹ್ಮದ ಗುಜ್ಜರ ಸೇರಿದಂತೆ ಸಾಲಗೇರಿ ಓಣಿ ಶಿಗ್ಗಾವಿಯ ಅಹಲೇ ಸುನ್ನತುಲ್ ಜಮಾತನವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 