ಎಇಇ ಆನಂದಸ್ವಾಮಿಗೆ ಗೌರವ ಸಮರೆ್ಣ
A tribute to AEE Anandaswamy
ತಾಳಿಕೋಟಿ 29: ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ಇದರ ಬ.ಬಾಗೇವಾಡಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆನಂದಸ್ವಾಮಿ ಇವರನ್ನು ಚಬನೂರ ಗ್ರಾಮಸ್ಥರಿಂದ ಸನ್ಮಾನಿಸಲಾಯಿತು. ಇತ್ತೀಚಿಗೆ ಚಬನೂರ ಗ್ರಾಮದಲ್ಲಿ ಇಲಾಖೆಯ ವಿವಿಧ ಕಾಮಗಾರಿಗಳನ್ನು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲರು ಚಾಲನೆ ನೀಡಲು ಆಗಮಿಸಿದ ಸಂದರ್ಭದಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಆನಂದಸ್ವಾಮಿ ಇವರಿಗೆ ದಕ್ಷ ಸೇವೆಗಾಗಿ ಈ ಸನ್ಮಾನ ನೀಡಲಾಯಿತು.
ಜ್ಯೋತಿಷ್ಯ ರತ್ನ ಪರಮಪೂಜ್ಯ ಶ್ರೀರಾಮಲಿಂಗಯ್ಯ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸಿದ್ದರು. ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ,ತಾಪಂ ಇಒ ಅನಸೂಯಾ ಚಲವಾದಿ,ವಿಲಾಸ ರಾಠೋಡ, ಮುಖಂಡರಾದ ರುದ್ರಗೌಡ ಪಾಟೀಲ,ಸಂಗನಗೌಡ ಪಾಟೀಲ, ಬಸವರಾಜ ಡೆಂಗಿ, ಮಡುಸೌಕಾರ ಬಿರಾದಾರ,ಮಲ್ಲನಗೌಡ ಬಿರಾದಾರ,ಸಾಹೇಬಗೌಡ ಬಿರಾದಾರ, ಸಿದ್ದು ಹಿರೇಕುರುಬರ, ಯಮನೂರಿ ಒಡೆಯರ್, ತಿಪ್ಪಣ್ಣ ಹಿರೇಕುರಬರ, ರಾಮನಗೌಡ ಚೌದ್ರಿ,ಸಿದ್ದು ಸಿಂಧನಕೇರಿ, ಸಿದ್ದರಾಯ ಹಿರೇಕುರಬರ, ಪ್ರಕಾಶ ಪಡಶೆಟ್ಟಿ, ಸಿದ್ದು ಅವಟಿ ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 