ತಾಯಿಯ ಹೆಸರಿನಲ್ಲಿ ಒಂದು ಮರ: ಜಾಗೃತಿ ಕಾರ್ಯಕ್ರಮ

ತಾಯಿಯ ಹೆಸರಿನಲ್ಲಿ ಒಂದು ಮರ: ಜಾಗೃತಿ ಕಾರ್ಯಕ್ರಮ A tree in the name of mother: Awareness program

ಧಾರವಾಡ 25: ಕಳೆದ ಮೇ ತಿಂಗಳು ಬಿದರಗೆ ಹೋಗುವುದಿತ್ತು. ಅಲ್ಲಿನ ಮೊಬೈಲ್ ಕರೆ ಮಾಡಿ 'ಹೇಗಿದೆ ಬಿಸಿಲು'  ಎಂದಿದ್ದಕ್ಕೆ,' ಬಿಸಿಲಿನ ಜೊತೆ ದೂಳಿನ ಬಿಸಿಗಾಳಿ ಇದೆ. ಪ್ರವಾಸ ಇದೆ ಅಂತ ಬಿಳಿ ಬಟ್ಟೆ ಧರಿಸಿ ಬರಬೇಡ, ಮುಖ ಮೈ ಕವರ್ ಮಾಡುವ ಬಟ್ಟೆ ಇರಲಿ' ಎಂದು ಗೆಳೆಯ ಎಚ್ಚರಿಸಿದನು. ಕೆಟ್ಟ ಗಾಳಿಯ ಬಗ್ಗೆ ಗೊತ್ತಿತ್ತು. ನಿರಂತರ ಗಣಿಗಾರಿಕೆ. ಏರುತ್ತಿರುವ ಮರಭೂಮಿಯ ವ್ಯಾಪ್ತಿ ದೆಹಲಿಗೂ ಚಾಚುತ್ತಿದೆ. ನಿರಂತರ ಮತ್ತು ಶಾಶ್ವತ ಬರಪೀಡಿತ ಪ್ರದೇಶಗಳು ಮರುಭೂಮಿಗಳಾಗುತ್ತಿರುವ ವಿದ್ಯಮಾನ ಭೂಮಿಯ ಚರಿತ್ರೆಯುದ್ದಕ್ಕೂ ಇದೆ. ಆದರೆ ಪ್ರಕೃತಿಯಲ್ಲಿ ಮಾನವ ಹಸ್ತಕ್ಷೇಪದಿಂದ ನಿರ್ಮಾಣಗೊಳ್ಳುತ್ತಿರುವ ಮರುಭೂಮಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ.  

ಹೌದು ಹೀಗೊಂದು ಶಾಲೆಯ ಪರಿಸರದಲ್ಲಿ ನಿಂತು ನೈಜ ಕಥೆ ಹೇಳುವ ಮೂಲಕ “ತಾಯಿಯ ಹೆಸರಿನಲ್ಲಿ ಒಂದು ಮರ ” ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಮಾಡಲಾಯಿತು. ವ್ಯವಸಾಯ ಮಾಡುತ್ತಿದ್ದ ಭೂಮಿ ಇಂದು ಬಂಜರಾಗಿದ್ದು, ಕೆರೆಗಳೆಲ್ಲ ಬತ್ತಿ ಒಣಗಿ ಕ್ರಿಕೆಟ್ ಮೈದಾನಗಳಾಗಿವೆ. ಮುಂದೊಂದು ದಿನ ಸೌರಮಂಡಲದಲ್ಲಿರು ಭೂಮಿ ಜನರಹಿತ ಗ್ರಹ ಆಗಲಿದೆ. ಎಚ್ಚರವಿರಲಿ ನಾವೆಲ್ಲರೂ ತಾಯಿಯ ಹೆಸರಿನಲ್ಲಿ ಗಿಡನೆಟ್ಟು ತಾಯಿಗೆ ಎಷ್ಟು ಕಾಳಜಿವಹಿಸುತ್ತೆವೆಯೋ ಅಷ್ಟೆ ಮರಕ್ಕೂ ಕಾಳಜಿವಹಿಸಿ ರಕ್ಷಣೆ ಮಾಡೊಣಾ ಎಂದರು. 

“ಮರಗಳನ್ನು ನೆಟ್ಟು ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ” ಎಂದು ಕೇತ್ರ ಸಮನ್ವಯಾಧಿಕಾರಿ ಕುಮಾರ ಕೆ ಎಫ್ ಕರೆ ನೀಡಿದರು. 

ಅವರು ತಾಲೂಕಿನ ಲಾಳಗಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ “ತಾಯಿಯ ಹೆಸರಿನಲ್ಲಿ ಒಂದು ಮರ” ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಮಾತನಾಡುತ್ತಾ.ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ, ವಿಜ್ಞಾನ- ತಂತ್ರಜ್ಞಾನದ ಅಭಿವೃದ್ಧಿಗಳೆಂಬ ಹತ್ತು ಹಲವು ಕಾರಣಗಳು ಪರಿಸರದ ವಿನಾಶದ ಅಂಚಿನತ್ತ ತೆರಳಲು ಇವುಗಳ ಪಾತ್ರವಿದೆ ಎಂದರೆ ತಪ್ಪಾಗಲಾರದು. ವ್ಯವಸಾಯ ಮಾಡುತ್ತಿದ್ದ ಭೂಮಿ ಇಂದು ಬಂಜರಾಗಿದ್ದು, ನದಿಕೆರೆಗಳೆಲ್ಲ ಬತ್ತಿ ಒಣಗಿ ಕ್ರಿಕೆಟ್ ಮೈದಾನಗಳಾಗಿವೆ. ಮುಂದೊಂದು ದಿನ ಸೌರಮಂಡಲದಲ್ಲಿರು ಭೂಮಿ ಜನರಹಿತ ಗ್ರಹ ಆಗಲಿದೆ. ಎಚ್ಚರವಿರಲಿ ನಾವೆಲ್ಲರೂ ಗಿಡ ನೆಟ್ಟು ಪರಿಸರ ರಕ್ಷಣೆ ಮಾಡೊಣಾ ಎಂದರು. 

ಎರಡನೇ ತರಗತಿ ವಿದ್ಯಾರ್ಥಿನಿಯಾದ ಜ್ಯೋತಿ  ತನ್ನ ತಾಯಿಯಾದ ಮಂಜುಳಾ ನವಲೂರ ಇವರ ಹೆಸರಿನಲ್ಲಿ ಗಿಡ ನೇಡುವ ಮೂಲಕ “ತಾಯಿಯ ಹೆಸರಿನಲ್ಲಿ ಒಂದು ಮರ” ಉದ್ಘಾಟನೆ ಮಾಡಿದಳು. 

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಕೆ ಇ ಬೋರ್ಡ ನಿವೃತ್ತ ಶಿಕ್ಷಕರಾದ ಸುರೇಶ ಕುಲಕರ್ಣಿ ಮಾತನಾಡುತ್ತಾ ಪರಿಸರವೊಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಪರಿಸರವಿಲ್ಲದೇ ಮಾನವನಿಲ್ಲ, ಮೊದಲು ಪರಿಸರ ರಕ್ಷಿಸಿ ಮುಂದಿನ ಪಿಳಿಗೆಗೆ ಉಳಿಸೋಣ ಎಂದರು. 

ಮುಖ್ಯೋಪಾಧ್ಯಾಯರಾದ ಪ್ರಶಾಂತ ಕಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕೇವಲ ವರ್ಷಕ್ಕೆ ಒಂದು ದಿನ ಪರಿಸರ ರಕ್ಷಣೆಯೆಂಬುದು ಸೀಮಿತವಾಗದೇ, ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು ಎಂದರು. 

ಶಾಲಾ ಹಿರಿಯ ಶಿಕ್ಷಕಿಯಾದ ಲೀಲಾಬಾಯಿ.ಎಲ್‌.ಕೆ, ನಾಗಿಣಿ ಮೊರಬದ, ಗ್ರಾಮದ ಹಿರಿಯರಾದ ಪಕ್ಕೀರ​‍್ಪ ಚವರಗುಡ್ಡ, ಮಂಜುಳಾ ನವಲೂರ ಉಪಸ್ಥಿತರಿದ್ದರು. 

ಮಕ್ಕಳು ಸಮೂಹಿಕ ಪ್ರಾರ್ಥನೆ ಮಾಡಿದರು, ಪ್ರಶಾಂತ ಕಲಕರ್ಣಿ ಸ್ವಾಗತಿಸಿ ವಂದಿಸಿದರು. 

ಎರಡನೇ ತರಗತಿ ವಿದ್ಯಾರ್ಥಿನಿಯಾದ ಜ್ಯೋತಿ  ತನ್ನ ತಾಯಿಯಾದ ಮಂಜುಳಾ ನವಲೂರ ಇವರ ಹೆಸರಿನಲ್ಲಿ ಗಿಡ ನೇಡುವ ಮೂಲಕ “ತಾಯಿಯ ಹೆಸರಿನಲ್ಲಿ ಒಂದು ಮರ” ಉದ್ಘಾಟನೆ ಮಾಡಿದಳು. 

“ಮರಗಳನ್ನು ನೆಟ್ಟು ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ” ಎಂದು ಕೇತ್ರ ಸಮನ್ವಯಾಧಿಕಾರಿ ಕುಮಾರ ಕೆ ಎಫ್ ಕರೆ ನೀಡಿದರು. 

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಕೆ ಇ ಬೋರ್ಡ ನಿವೃತ್ತ ಶಿಕ್ಷಕರಾದ ಸುರೇಶ ಕುಲಕರ್ಣಿ ಹಾಗೂ ಮುಖ್ಯೋಪಾಧ್ಯಾಯರಾದ ಪ್ರಶಾಂತ ಕಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.