ಅಜಗಣ್ಣನ ಧಾರ್ಮಿಕ ಸಂದೇಶಕ್ಕೆ ಆತ್ಮಸಾಕ್ಷಾತ್ಕಾರದ ಸ್ಪರ್ಶ
A touch of self-realization to Ajaganna's religious message
ಲೋಕದರ್ಶನ ವರದಿ
“ಅಜಗಣ್ಣ ಮತ್ತು ಮುಕ್ತಾಯಕ್ಕ ಈ ಅಣ್ಣತಂಗಿಯರ ಸಂಬಂಧ ಆಧ್ಯಾತ್ಮದ ಅನುಸಂಧಾನದಲ್ಲಿ ಮುಳಗಿದ ಶರಣ-ಶರಣೆಯರಲ್ಲಿ ಶ್ರೇಷ್ಠರಾದವರು. ಮೌಲಿಕವಾದ ಗುಣಗಳನ್ನು ಹೊಂದಿದವರು. ಸರ್ ತನ್ನ ಹೆಡೆಯಲ್ಲಿ ರತ್ನವನ್ನಿರಿಸಿಕೊಂಡು ಆ ಬೆಳಕಿನಲ್ಲಿ ಆಹಾರ ಹುಡುಕಿ ಪಡೆಯುವ ಸಂದರ್ಭದಲ್ಲಿ ಅಜಗಣ್ಣ ‘ಓಂ ನಮಃ ಶಿವಾಯ’ ಎಂದಾಗ ಆ ಶಬ್ದ ಕೇಳಿ ಬೆಳಕನ್ನು ಅಂತರಂಗದಲ್ಲಿಟ್ಟುಕೊಂಡು ಮಾಯವಾಯಿತು. ಅಜಗಣ್ಣನು ಕೂಡಾ ಡಾಂಬಿಕ ಮಂತ್ರೋಚ್ಚಾರಣೆ ಬಿಟ್ಟು ಗುಪ್ತ ಭಕ್ತಿಯಿಂದ ಆತ್ಮ ಸಾಕ್ಷಾತ್ಕಾರ ಹೊಂದಿದನು. ಅಜಗಣ್ಣನು ಮುಕ್ತಾಯಕ್ಕನಿಗೆ ಕೇವಲ ಅಣ್ಣನಾಗಿರದೇ ಗುರುಮಾರ್ಗದರ್ಶಕನಾಗಿದ್ದ ಎಂದು ಶ್ರೀಮತಿ ಶಾರದಾ ಕೊಪ್ಪ ಮಾತನಾಡಿದರು.
ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಚಿಂತನ ಸಾಂಸ್ಕೃತಿಕ ಬಳಗವು ಹಮ್ಮಿಕೊಂಡ ‘ಅನುಭಾವಿಗಳು ಹಿ ಮರುಭೆಟ್ಟಿ(18)’ ಕಾರ್ಯಕ್ರಮದಲ್ಲಿ ಅನುಭಾವದ ನುಡಿಗಳನ್ನಾಡಿದ ಅವರು ತಂಗಿ ಮುಕ್ತಾಯಕ್ಕ ತನ್ನ ‘ಮೊಸರುಕಲ್ಲು’ ಗಂಡನ ಮನೆಗೆ ಹೋಗುವ ಪ್ರಸಂಗ ಬಂದಾಗ ಅಣ್ಣಾ ನೀನೊಬ್ಬನೆ ಹೇಗಿರುವುದು ಎಂದು ತನ್ನ ಕೊರಗನ್ನು ಕಳಕಳಿಯಿಂದ ಕೇಳಿದಾಗ; ಅಣ್ಣ ಅಜಗಣ್ಣ ನಾನು ಮೂರು ಕುರುಹುಗಳನ್ನು ನೀಡುವೆ. ಅವು ಘಟಿಸಿದಾಗ ನನಗೆ ತೊಂದರೆಯಾಗಿದೆ ಎಂದು ತಿಳಿ ‘ಕಟ್ಟಿದ ಮುಡಿಯು ಬಿಚ್ಚಿದಾಗ, ಸೀರೆಯ ನೀರಿಗೆಯು ಸಡಿಲಾದಾಗ, ಕಡಿಯುವ ಮೊಸರು ಕಲ್ಲಾದಾಗ ಎಂದು ಹೇಳಿ ಕಳುಹಿಸುತ್ತಾನೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 