ದೇಶದಲ್ಲಿ ಹೊಸ 24,879 ಕೊವಿಡ್‍ ಪ್ರಕರಣಗಳು ವರದಿ, 487 ಮಂದಿ ಸಾವು

ನವದೆಹಲಿ, ಜುಲೈ 9: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ 24,879 ಹೊಸ ಕೊವಿಡ್‍ ಪ್ರಕರಣಗಳು ವರದಿಯಾಗುವುದರೊಂದಿಗೆ ಸೋಂಕಿತರ ಸಂಖ್ಯೆ 7.6 ಲಕ್ಷಗಳನ್ನು ತಲುಪಿದೆ.

ಈ ಅವಧಿಯಲ್ಲಿ 487 ರೋಗಿಗಳು ಮಾರಕ ಸೋಂಕಿಗೆ ಬಲಿಯಾಗುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 21,129 ಕ್ಕೆ ತಲುಪಿದೆ..

ಸದ್ಯ, ದೇಶಾದ್ಯಂತ ಸಾಂಕ್ರಾಮಿಕ ರೋಗದ ಒಟ್ಟು ಪ್ರಕರಣಗಳ ಸಂಖ್ಯೆ 7,67,296ರಷ್ಟಿದೆ ಎಂದು ಆರೋಗ್ಯ ಸಚಿವಾಲಯದ ನವೀಕರಣ ಮಾಹಿತಿ ಸಂಚಿಕೆ ತಿಳಿಸಿದೆ.

ಆದರೂ, ಚೇತರಿಕೆಯ ವಿಷಯದಲ್ಲಿ ಆಶಾದಾಯಕ ಬೆಳವಣಿಗೆ ಕಂಡುಬರುತ್ತಿದ್ದು,  ಗುಣಪಡಿಸಿದ ಮತ್ತು ಆಸ್ಪತ್ರೆಗಳಿಂದ ಬಿಡುಗಡೆಯಾದ ಪ್ರಕರಣಗಳ ಸಂಖ್ಯೆ ಇಲ್ಲಿಯವರೆಗೆ 4,76,378ಕ್ಕೆ ತಲುಪಿದೆ. 

ದೇಶದಲ್ಲಿ ಸದ್ಯ ಸಕ್ರಿಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುವ ಪ್ರಕರಣಗಳ ಸಂಖ್ಯೆ 2,69,789 ರಷ್ಟಿದ್ದು, ಸಕ್ರಿಯ ಪ್ರಕರಣಗಳು ಮತ್ತು ಗುಣಮುಖರಾದವರ ನಡುವಿನ ಅಂತರ ಸಕಾರಾತ್ಮಕ ರೀತಿಯಲ್ಲಿ ಹೆಚ್ಚಾಗುತ್ತಿದೆ.

ಈ ಮಧ್ಯೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಾಹಿತಿಯಂತೆ ಬುಧವಾರದವರೆಗೆ ಒಟ್ಟು 1,07,40,832 ಮಾದರಿಗಳನ್ನು ಪರೀಕ್ಷಿಸಲಾಗಿದೆ.