ಬೆಳಗಾವಿಯಲ್ಲಿ 14 ಸೋಂಕಿತರು ಸೇರಿ ರಾಜ್ಯದಲ್ಲಿ ಒಂದೇ ದಿನ 22 ಪ್ರಕರಣ ಪತ್ತೆ
ಬೆಂಗಳೂರು, ಏ30, ಬೆಳಗಾವಿಯಲ್ಲಿ ಹೊಸದಾಗಿ 14 ಕೋರೋನಾ ಸೋಂಕಿನ ಪ್ರಕರಣಗಳು ಸೇರಿ ರಾಜ್ಯದಲ್ಲಿ ಒಟ್ಟು 22 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 557ಕ್ಕೇರಿಕೆಯಾಗಿದೆ. ಇಲ್ಲಿಯವರೆಗೆ 21 ಜನರು ಮೃತಪಟ್ಟಿದ್ದು, 223 ಮಂದಿ ಗುಣಮುಖರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ 58 ವರ್ಷದ ಮಹಿಳೆ, ವಿಜಯಪುರದ 62 ವರ್ಷದ ವ್ಯಕ್ತಿ ಮತ್ತು 33 ವರ್ಷದ ಮಹಿಳೆ, ತುಮಕೂರಿನ 65 ವರ್ಷದ ಮಹಿಳೆ, ಬೆಂಗಳೂರು ನಗರದ 20 ಹಾಗೂ 28 ವರ್ಷದ ಯುವಕರು, 63 ವರ್ಷದ ವೃದ್ಧ ಮತ್ತು ದಾವಣಗೆರೆಯ 69 ವರ್ಷದ ವ್ಯಕ್ತಿ ಸೋಂಕಿಗೆ ಗುರಿಯಾಗಿದ್ದಾರೆ. ಉಳಿದಂತೆ ಬೆಳಗಾವಿಯ ಹಿರೇಬಾಗೇವಾಡಿಯ 24 ವರ್ಷದ ಇಬ್ಬರು ಮಹಿಳೆಯರು, 27 ವರ್ಷದ ವ್ಯಕ್ತಿ, 18 ವರ್ಷದ ಯುವಕ, 48 ವರ್ಷದ ಮಹಿಳೆ , 50 ವರ್ಷದ ವ್ಯಕ್ತಿ, 27 ವರ್ಷದ ಮಹಿಳೆ, 43, 16, 36 ವರ್ಷದ ವ್ಯಕ್ತಿಗಳು, 8 ವರ್ಷದ ಬಾಲಕ, 36 ವರ್ಷದ ವ್ಯಕ್ತಿ, ಬೆಳಗಾವಿ ಹುಕ್ಕೇರಿಯ 9 ವರ್ಷದ ಬಾಲಕ ಮತ್ತು 75 ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ 