ರಾಜ್ಯದಲ್ಲಿ 12 ಹೊಸ ಕೊರೋನಾ ಪ್ರಕರಣಗಳು ಪತ್ತೆ, ಸೋಂಕಿತರ ಸಂಖ್ಯೆ 371ಕ್ಕೇರಿಕೆ

ಬೆಂಗಳೂರು, ಏ 18 ,ರಾಜ್ಯದಲ್ಲಿ ಶುಕ್ರವಾರ ಸಂಜೆ 5ರಿಂದ ಇಲ್ಲಿಯವರೆಗೆ ಒಟ್ಟು 12 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 371ಕ್ಕೇರಿಕೆಯಾಗಿದೆ. ಇಲ್ಲಿಯವರೆಗೆ 13 ಜನರು ಮೃತಪಟ್ಟಿದ್ದು, 92 ಮಂದಿ ಚೇತರಿಕೆ ಹೊಂದಿದ್ದಾರೆ. ಕಲಬುರಗಿಯ 34 ವರ್ಷದ ವ್ಯಕ್ತಿ, ಇಲ್ಲಿನ ಶಹಾಬಾದ್ ನ 16 ವರ್ಷದ ಬಾಲಕ, ವಿಜಯಪುರದ 60 ವರ್ಷದ ವೃದ್ಧ, ಹುಬ್ಬಳ್ಳಿ, ಧಾರವಾಡದ 63 ವರ್ಷದ ವೃದ್ಧ,ಬೆಳಗಾವಿ ಹಿರೇಬಾಗೇವಾಡಿಯಲ್ಲಿ 45ವರ್ಷದ ವ್ಯಕ್ತಿ, ಮೈಸೂರು ನಂಜನಗೂಡಿನಲ್ಲಿ 30 ಹಾಗೂ 50 ವರ್ಷದ ವ್ಯಕ್ತಿಗಳು, ಬಾಗಲಕೋಟೆಯ 48 ಮಹಿಳೆಯರು ಹಾಗೂ 65 ವರ್ಷದ ವ್ಯಕ್ತಿ, ಮೈಸೂರಿನ 65 ವರ್ಷದ ವೃದ್ಧ, ಗದಗದ 42 ವರ್ಷದ ವ್ಯಕ್ತಿ ಹಾಗೂ ಮಂಡ, ಮಳವಳ್ಳಿಯ 39 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.