ಕರೋನ ವೈರಸ್ ತಡೆಗೆ ಅಮೆರಿಕ ಅಧ್ಯಕ್ಷರಿಂದ ಕಾರ್ಯಪಡೆ ರಚನೆ

ವಾಷಿಂಗ್ಟನ್, ಜ 30, ಕೊರೊನಾ ವೈರಸ್ ವ್ಯಾಪಿಸುವುದನ್ನು ಪರಿಣಾಮಕಾರಿಯಾಗಿ ತಡೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಪಡೆಯೊಂದನ್ನು ರಚಿಸಿದ್ದಾರೆ ಎಂದು ಶ್ವೇತಭವನ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.‘ಕಾರ್ಯಪಡೆ ವೈರಸ್ ಹರಡುವಿಕೆಯ ಮೇಲ್ವಿಚಾರಣೆ ಮಾಡಲಿದ್ದು, ಹರಡುವುದನ್ನು ತಡೆಯಲು ಸರ್ಕಾರಕ್ಕೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದೆ. ಅಲ್ಲದೆ, ಅಮೆರಿಕಾದ ಜನರಿಗೆ ಅತ್ಯಂತ ಪ್ರಯಾಣದ ನಿಖರ ಮಾಹಿತಿಯನ್ನು ಒದಗಿಸಲಿದೆ ಎಂದು ಹೇಳಿಕೆ ತಿಳಿಸಿದೆ. ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಅಲೆಕ್ಸ್ ಅಜರ್ ನೇತೃತ್ವದ ಕಾರ್ಯಪಡೆ ಸೋಮವಾರದಿಂದ ಈಗಾಗಲೇ ಮೂರು ಸಭೆಗಳನ್ನು ನಡೆಸಿದೆ. ಅಮೆರಿಕನ್ನರಿಗೆ ಸೋಂಕಿನ ಅಪಾಯ ಕಡಿಮೆ ಎಂದು ಶ್ವೇತಭವನದ ವಕ್ತಾರ ಸ್ಟೆಫನಿ ಗ್ರಿಶಮ್ ತಿಳಿಸಿದ್ದಾರೆ. 

ಕೊರೊನಾವೈರಸ್ ಮೊದಲ ಬಾರಿಗೆ ಚೀನಾದ ಮಧ್ಯ ನಗರವಾದ ವುಹಾನ್ ನಲ್ಲಿ ಕಳೆದ ಡಿಸೆಂಬರ್‍ನಲ್ಲಿ ಪತ್ತೆಯಾಗಿದೆ. ಈ ಮಾರಕ ಸೋಂಕು ಚೀನಾದೊಳಗೆ ಮತ್ತು ಕನಿಷ್ಠ 16 ಇತರ ದೇಶಗಳಿಗೆ ಹರಡಿದೆ. ಅಮೆರಿಕದಲ್ಲಿ ಈ ವೈರಸ್ ನ  ಹೊಸ ಐದು ಪ್ರಕರಣಗಳು ಇದುವರೆಗೆ ದೃಢಪಟ್ಟಿವೆ. ದೇಶದಲ್ಲಿ ಇದುವರೆಗೆ 90 ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆಂದು ಶಂಕಿಸಲಾಗಿದೆ. ಈ ಮಧ್ಯೆ, ಡೆಲ್ಟಾ, ಯುನೈಟೆಡ್ ಮತ್ತು ಅಮೇರಿಕನ್ ಏರ್ ಲೈನ್ಸ್ ವಿಮಾನಯಾನ ಸಂಸ್ಥೆಗಳು ಅಮೆರಿಕ ಮತ್ತು ಮತ್ತು ಚೀನಾ ನಡುವೆ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿವೆ.ಚೀನಾದಲ್ಲಿ ಸಾಂಕ್ರಾಮಿಕ ರೋಗದಿಂದ ಈಗಾಗಲೇ 170 ಜನರನ್ನು ಮೃತಪಟ್ಟಿದ್ದು, 7,700 ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ.