ದುಷ್ಟತನದ ವಿರುದ್ದ ಸದಾಚಾರದ ವಿಜಯದ ಸಂಕೇತ
A symbol of the victory of righteousness over evil
ವಿಜಯಪುರ 04: ದುಷ್ಟತನದ ಮೇಲೆ ಸದಾಚಾರದ ವಿಜಯ ಮತ್ತು ಉತ್ತಮ ಶಕ್ತಿಗಳು, ಭಕ್ತಿ ಮತ್ತು ಶುದ್ಧ ಪ್ರೀತಿ, ಪ್ರಾಬಲ್ಯ ಮತ್ತು ಅನಗತ್ಯ ಶಕ್ತಿಯ ಮೇಲೆ ವಿಜಯವನ್ನು ಗೌರವಿಸಲು ಈ ಹೋಳಿಕಾ ದಹನವನ್ನು ಆಚರಿಸಲಾಗುತ್ತದೆ. ಆದ್ದರಿಂದ ಹೋಳಿ ಹಬ್ಬವೆಂದರೆ ಕೇವಲ ಬಣ್ಣ ಎರಚಿಕೊಂಡು ಮೋಜು ಮಸ್ತಿ ಮಾಡುವದಷ್ಟೇ ಅಲ್ಲ. ಅದು ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಅರಿತು ನಾವೆಲ್ಲರೂ ದ್ವೇಷ ಮತ್ತು ದುರ್ಗುಣಗಳನ್ನು ತ್ಯಜಿಸಿ, ನಾವೆಲ್ಲರೂ ಒಂದು’ ಮತ್ತು ‘ವಸುದೈವ ಕುಟುಬಕಂ’ ಎನ್ನುವಂತೆ ಪ್ರೀತಿ, ಪ್ರೇಮ, ಸ್ನೇಹ ಮತ್ತು ಸೌಹಾರ್ಧತೆಯಿಂದ ಆಚರಿಸಬೇಕು. ಪರಿಸರ ಶುದ್ಧಿಕರಣ ಮತ್ತು ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರದಂತೆ ತಡೆಯುವ ನಿಟ್ಟಿನಲ್ಲಿ ಹೋಳಿ ಹಬ್ಬವನ್ನು ಆಚರಿಸಬೇಕು. ಅಂದಾಗ ಮಾತ್ರ ಹೋಳಿ ಆಚರಣೆಯು ಅರ್ಥಪೂರ್ಣವಾಗುತ್ತದೆ ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.
ಅವರು ಮಾತನಾಡುತ್ತಾ, ಹೋಳಿ ಹಬ್ಬವು ಅತ್ಯಂತ ಸುಂದರ ಮತ್ತು ವಿಶಿಷ್ಟ ಭಾರತೀಯ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬದಲ್ಲಿ ಪ್ರತಿಯೊಬ್ಬರೂ ಬಣ್ಣದೋಕುಳಿಯಲ್ಲಿ ಪಾಲ್ಗೊಂಡು ಸಂತಸವನ್ನು ವ್ಯಕ್ತಪಡಿಸುತ್ತಾರೆ. ಇದೊಂದು ಸೌಹಾರ್ಧತೆಯ ಸಂಕೇತವಾಗಿದೆ. ಹೋಳಿಕಾ ದಹನ್ ಅಥವಾ ಕಾಮದಹನವು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂಕೇತವಾಗಿದೆ. ಪೌರಾಣಿಕ ಕಥೆಯಲ್ಲಿ ಪ್ರಹ್ಲಾದನ ತಂದೆ ಹಿರಣ್ಯಕಶಿಪು ತನ್ನ ಶಕ್ತಿಗಾಗಿ ಎಲ್ಲರೂ ತನ್ನನ್ನು ಪೂಜಿಸಬೇಕೆಂದು ಬಯಸಿದಾಗ, ವಿಷ್ಣುವಿನ ಭಕ್ತನಾಗಿದ್ದ ಪ್ರಹ್ಲಾದನ ಮೇಲೆ ಕೋಪಗೊಂಡ ಹಿರಣ್ಯಕಶಿಪು ತನ್ನ ಸಹೋದರಿ ಹೋಳಿಕಾ ಇವಳೊಂದಿಗೆ ಪ್ರಹ್ಲಾದನನ್ನು ಕೊಲ್ಲಲು ಸಂಚು ಹೂಡುತ್ತಾನೆ. ಅನಂತರ ವಿಷ್ಣು ಪ್ರಹ್ಲಾದನನ್ನು ರಕ್ಷಿಸುತ್ತಾನೆ. ಹೋಳಿಕಾ ದಹನವಾಗುತ್ತಾಳೆ ಎಂಬ ಪ್ರತೀತಿಯಿದೆ ಎಂದು ಹೇಳಿದರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಎನ್.ಜಿ.ಓ. ಕಾಲನಿಯಲ್ಲಿ ದಿನಾಂಕ: 03-03-2026 ರಂದು ಸಂಜೆ ಜರುಗಿದ ಕಾಮದಹನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಕಾಮದಹನ ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮಣ ಶಿಂಧೆ, ಬಿ.ಆರ್.ಬಿರಾದಾರ, ಎನ್.ಬಿ.ಕೂಟನೂರ, ಬಲವಂತ ಬಳೂಲಗಿಡದ, ರಾಮಕೃಷ್ಣ ಮಸಳಿ, ಡಾ. ಸಂತೋಷ ದಂಡ್ಯಾಗೋಳ, ಶ್ರೀರಾಮ ದೇಶಪಾಂಡೆ, ಗಂಗಾಧರ ಚಾಬೂಕಸವಾರ, ಮನೋಜ ಬಿರಾದಾರ, ಶ್ರೀಧರ ತಾಟೆ, ಮಂಜು ಪ್ರಭು ಬಳೂಲಗಿಡದ, ಅನೀಲ ಪಾಟೀಲ, ಮಂಜು ಮೋದಿ, ಚೇತನ ದೇವನಾಯಕ, ಓಂಕಾರ ಕೂಟನೂರ, ಆರ್.ಎಸ್.ಗೋಂಧಳಿ, ಆರ್.ಜಿ.ಗುಜನೂರ, ಆರ್.ಬಿ.ಹಡಪದ ಇನ್ನಿತರು ಸಹ ಉಪಸ್ಥಿತರಿದ್ದರು. ಕಾಮದಹನ ಕಾರ್ಯಕ್ರಮದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 