ಗಡಿಭಾಗದಲ್ಲೊಂದು ಆಧ್ಯಾತ್ಮಿಕ ಕೇಂದ್ರ
A spiritual center on the border
ಯಮಕನಮರಡಿ :ಹುಕ್ಕೇರಿ ತಾಲೂಕಿನ ಗಡಿಭಾಗವಾದ ಹತ್ತರಗಿ ರಾಷ್ಟ್ರೀಯ ಹೆದ್ದಾರಿ ನಂಬರ್ 4 ರ ಪಕ್ಕದಲ್ಲಿ ಪಶ್ಚಿಮಕ್ಕೆ ಮುಖ ಮಾಡಿ ಕಂಗೊಳಿಸುತ್ತಿರುವ ಒಂದು ಆಧ್ಯಾತ್ಮಿಕ ಸಿದ್ದಿ ಪುರುಷರ ಸ್ಥಾನ ಇದಕ್ಕೆ ಹರಿ ಮಂದಿರವೆಂದು ಕರೆಯುತ್ತಾರೆ ಸುಮಾರು ಶ್ರೀಮಠಕ್ಕೆ 800 ವರ್ಷಗಳ ಇತಿಹಾಸವಿದ್ದು ಇಲ್ಲಿ ಅನೇಕ ಸತ್ಪುರುಷರು ಆಗಿ ಹೋಗಿದ್ದಾರೆ ಹತ್ತರಗಿ ಗ್ರಾಮದ ಪಕ್ಕದಲ್ಲಿರುವ ಚಿಕ್ಕದೊಂದು ಜಂಬು ತೀರ್ಥವೆಂಬ ನದಿಯ ಪೂರ್ವಕ್ಕೆ ಮುಖ ಮಾಡಿ ಹರಿಯುತ್ತಿದ್ದು ಅದರ ಪಕ್ಕದಲ್ಲಿ ಸುಮಾರು 800 ವರ್ಷಗಳ ಹಿಂದೆ ಮಹಾತ್ಮರು ಪಾದಯಾತ್ರೆ ಮೂಲಕ ಬಂದು ಈ ಸ್ಥಳದಲ್ಲಿ
ನರಸಿಂಹಮಂದಿರ ಒಂದನ್ನು ಸ್ಥಾಪನೆ ಮಾಡಿ ಸಕಲ ಭಕ್ತಾದಿಗಳಿಗೆ ವರದ ಹಸ್ತವಾಗಿ ಕಾಲ ಕಳೆಯುತ್ತಿದ್ದರು ಸ್ಥಾಪನೆ ಮಾಡಿದವರ ಹೆಸರು ಶ್ರೀ ಪದ್ಮನಾಭ ಯತಿಯರು ಎಂದು ತಿಳಿದು ಬರುತ್ತದೆ ತದನಂತರ ಇದೇ ಸ್ಥಳಕ್ಕೆ ನರಸಪ್ಪ ಗೋಸಾವಿ ಎಂಬುವರು ಈ ಸ್ಥಾನವನ್ನು ಮುಂದುವರಿಸಿಕೊಂಡು ಹೋಗಿದ್ದರು ಅಲ್ಲಿ ಅಪಾರ ಸಿದ್ದಿ ಪುರುಷರು ತಾಣವನ್ನು ಮುಂದುವರಿಸಿಕೊಂಡು ಹೋಗುವುದಕ್ಕಾಗಿ ಸ್ಥಳೀಯ ಗೋಸಾವಿ ಕುಟುಂಬದವರು ಸದರಿ ದೇವಸ್ಥಾನಕ್ಕೆ ಧರ್ಮಾಧಿಕಾರಿಗಳಾಗಿ ಅಧಿಕಾರ ಮುಂದುವರಿಸಿಕೊಂಡು ಹೋಗುವುದನ್ನು ನಿರ್ಧರಿಸಿ ಶ್ರೀ ಮಠಕ್ಕೆ ಶಾಶ್ವತ ಪರಿಹಾರ ರೂಪಿಸಲು ಸದರಿ ಮಠಕ್ಕೆ ಗ್ರಹಸ್ಥ ಆಶ್ರಮವೆಂದು ನಾಮಕರಣ ಮಾಡಿ ಮುಂದುವರಿಸಿಕೊಂಡು ಬಂದಿರುವುದರಿಂದ ಶ್ರೀ ಮಠವು ಹೊಸ ಅಧ್ಯಾಯವನ್ನು ಪ್ರಾರಂಭ ಮಾಡಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಹತ್ತರಗಿ ಭಾಗದಲ್ಲಿ ಭವ್ಯವಾದ ಮಠವನ್ನು ಸ್ಥಾಪನೆ ಮಾಡಿ ಸಕಲ ಭಕ್ತಾದಿಗಳ ಕಾಯ ಕಲ್ಪವನ್ನಾಗಿ ಹರಿಕಾಕ ಗೋಸಾವಿ ಎಂಬ ಮಹಾತ್ಮರು ಮಾಡಿದರು. ತಮ್ಮ ವಾಕ್ಯ ಸಿದ್ದಿ ಮೂಲಕ ಭಕ್ತರ ಕಲ್ಪವೃಕ್ಷರಾಗಿ ಮುಂದುವರಿಸಿಕೊಂಡು ಬಂದು ತದನಂತರ ಸದರಿ ಮಠಕ್ಕೆ ಅವರ ಸುಪುತ್ರರಾದ ಏಕನಾಥ್ ದಾದಾ ಮಹಾರಾಜ್ ಎಂಬುವರನ್ನು ಉತ್ತರಾಧಿಕಾರಿಗಳನ್ನಾಗಿ ಮಾಡಿ ಶ್ರೀಮಠವನ್ನು ಎತ್ತರಕ್ಕೆ ಬೆಳೆಸುವಲ್ಲಿ ಯಶಸ್ವಿಯಾದರು ಸುಮಾರು ವರ್ಷಗಳ ಕಾಲ ಏಕನಾಥ ಮಹಾರಾಜರು ಭಕ್ತರ ಕಾಮಧೇನು ಅಪಾರಭಕ್ತರ ಕಷ್ಟ ಸುಖಗಳನ್ನು ದೂರು ಮಾಡುವಲ್ಲಿ ಯಶಸ್ವಿಯಾದರು ಇವರ ನಂತರ ಮತ್ತೆ ಶ್ರೀಮಠಕ್ಕೆ ಉತ್ತರಾಧಿಕಾರಿಗಳನ್ನಾಗಿ ಆನಂದ ಮಹಾರಾಜ್ ಅವರನ್ನು ನೇಮಕ ಮಾಡಿದರು ಇದರಿಂದಾಗಿ ಗಡಿ ಭಾಗದ ಭಕ್ತಾದಿಗಳಿಗೆ ಹುಣ್ಣಿಮೆಯ ಚಂದಿರನ ಬೆಳದಿಂಗಳ ಬೆಳಕಾಗಿ ಸಕಲ ಭಕ್ತಾದಿಗಳನ್ನು ತಮ್ಮವರೆಂದು ಹಚ್ಚಿಕೊಂಡು ಭಕ್ತಿ ಪೂರ್ವಕ ಅವರನ್ನು ಆಧ್ಯಾತ್ಮಿಕ ಕಡೆಗೆ ಕರೆತಂದು ಶ್ರೀಮಠವು ಭಕ್ತಿಯಿಂದ ತುಂಬಿ ತುಳುಕುವ ತಾಣವನ್ನಾಗಿ ಮಾಡಿದ್ದಾರೆ ಶ್ರೀಮಠದಲ್ಲಿ ಪ್ರತಿವರ್ಷವು ಶ್ರಾವಣ ಮಾಸದಲ್ಲಿ ಗೋಕುಲಷ್ಟಮಿ ಇತ್ಯಾದಿ ಕಾರ್ಯಕ್ರಮಗಳು ಜರುಗುತ್ತಾ ಬಂದಿರುವುದು ಪ್ರತೀತಿ. ಇದೇ ತಿಂಗಳ ಆಗಸ್ಟ್ 16 ರಿಂದ 19 ರವರೆಗೆ ಭವ್ಯವಾದ ಗೋಕುಲಾಷ್ಟಮಿ ಕಾರ್ಯಕ್ರಮವು ಜರುಗಲಿದ್ದು ಕಾರ್ಯಕ್ರಮಕ್ಕೆ ಅಪಾರ ಪ್ರಸಿದ್ಧ ಕಲಾವಿದರು ಬಂದು ತಮ್ಮ ಕಾರ್ಯಕ್ರಮಗಳನ್ನು ಸಾದರಪಡಿಸಿ ಗುರುವಿನ ಕೃಪೆಗೆ ಪಾತ್ರರಾಗುತ್ತಾರೆ ಅಲ್ಲದೆ ಅನೇಕ ರಾಜಕಾರಣಿಗಳು ಶ್ರೀಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಕೃಪೆಗೆ ಪಾತ್ರರಾಗುತ್ತಾರೆ ದಿನಾಂಕ 18 ರಂದು ರಥೋತ್ಸವ ಮೊಸರು ಗಡಿಗೆಯನ್ನು ಒಡೆಯುವುದರ ಜೊತೆಗೆ ಮಹಾಪ್ರಸಾದ ಇರುತ್ತದೆ. ನಂತರದಲ್ಲಿ ಭಕ್ತರಿಗೆ ಆಶೀರ್ವಾದ ಇತ್ಯಾದಿ ಕಾರ್ಯಕ್ರಮಗಳು ಜರುಗುತ್ತವೆ..
ಗೋಪಾಲ್ ಚಪ್ಪಣಿ ಯಮ ಕನಮರಡಿ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 