ಪರೀಶೀಲನೆ ನಡೆಸಿದ ಪ್ರಜಾಸೌಧ ಸ್ಥಳ ಕೈ ಬಿಡಲು ಕರವೇ ಮನವಿ

ಪರೀಶೀಲನೆ ನಡೆಸಿದ ಪ್ರಜಾಸೌಧ ಸ್ಥಳ ಕೈ ಬಿಡಲು ಕರವೇ ಮನವಿ  A request was made to leave the inspected public building


ತಾಳಿಕೋಟಿ 24: ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಪ್ರಜಾ ಸೌಧ ಕಟ್ಟಡವನ್ನು ಮೈಲೇಶ್ವರ ಗ್ರಾಮದ ಹತ್ತಿರ ನಿರ್ಮಾಣ ಮಾಡಲು ಯೋಚಿಸಿದ್ದು ಅದನ್ನು ಕೈಬಿಟ್ಟು ಸಮೀಪದ ಸ್ಥಳಗಳಲ್ಲಿ ನಿರ್ಮಾಣ ಮಾಡಬೇಕೆಂದು ಕರವೇ(ಪ್ರವೀಣ ಶೆಟ್ಟಿ ಬಣ) ತಾಲೂಕ ಘಟಕದ ಪದಾಧಿಕಾರಿಗಳು ಶುಕ್ರವಾರ ವಿಜಯಪುರ ಜಿಲ್ಲಾಧಿಕಾರಿ ಡಾ.ಕೆ.ಆನಂದ ಇವರಿಗೆ ಮನವಿ ಸಲ್ಲಿಸಿದರು.  

ಮನವಿ ಪತ್ರದಲ್ಲಿ ತಾಳಿಕೋಟಿ ಪಟ್ಟಣದ ನಾಗರೀಕರ ಬಹುದಿನಗಳ ಬೇಡಿಕೆಯಾದ ಪ್ರಜಾಸೌಧ ಕಟ್ಟಡವನ್ನು ನಿರ್ಮಾಣ ಮಾಡಲು ಯೋಚಿಸಿದ್ದು ಅದನ್ನು ಮೈಲೇಶ್ವರ ಗ್ರಾಮದ ಹತ್ತಿರ ನಿರ್ಮಾಣ ಮಾಡಲು ಯೋಚಿಸಿದ್ದು ಜಿಲ್ಲಾಧಿಕಾರಿಗಳಾದ ಡಾ.ಕೆ.ಆನಂದ ಅವರು ಇತ್ತೀಚೆಗೆ ಸ್ಥಳ ಪರೀಶೀಲನೆ ನಡೆಸಿದ್ದು ಸದರಿ ಸ್ಥಳವು ಪಟ್ಟಣದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿದೆ ಇದರಿಂದಾಗಿ ಹಿರಿಯ ನಾಗರಿಕರಿಗೆ ವೃದ್ಧರಿಗೆ ಹಾಗೂ ವಿಕಲಚೇತನರಿಗೆ ತುಂಬಾ ತೊಂದರೆ ಯಾಗುತ್ತದೆ ಹಾಗೂ ಗ್ರಾಮೀಣ ಪ್ರದೇಶಗಳಿಂದ ಬರುವ ಬಡ ಹಾಗೂ ಮಧ್ಯಮದ ವರ್ಗದ ಜನರಿಗೆ ಇದು ಕಷ್ಟದ ಜೊತೆಗೆ ಆರ್ಥಿಕವಾಗಿ ಭಾರವೂ ಆಗುತ್ತದೆ.

ಕಾರಣ ಸದರಿ ಸ್ಥಳವನ್ನು ರದ್ದುಗೊಳಿಸಿ ಪಟ್ಟಣಕ್ಕೆ ಹೊಂದಿಕೊಂಡಿರುವ ದೇವರ ಹಿಪ್ಪರಗಿ ಮಾರ್ಗದ ಆಶ್ರಯ ಕಾಲೋನಿಯ ಸ್ಥಳ, ಹಳೆ ಪುರಸಭೆ ಕಾರ್ಯಾಲಯದ ಆವರಣ, ಪುರಸಭೆ ವ್ಯಾಪ್ತಿಯ ನಾಗರಿಕ ಸೌಲಭ್ಯಗಳ ಜಾಗ ಹಾಗೂ ಪ್ರವಾಸಿ ಮಂದಿರದ ಸ್ಥಳ ಅನುಕೂಲವಾಗುತ್ತದೆ ಆದ್ದರಿಂದ ತಾವುಗಳು ಈ ನಾಲ್ಕು ಸ್ಥಳಗಳಲ್ಲಿ ಯಾವುದಾದರೂ ಒಂದು ಆಯ್ಕೆ ಎಂದು ಒತ್ತಾಯಿಸಲಾಗಿದೆ.  

ಈ ಸಮಯದಲ್ಲಿ ಕರವೇ ತಾಲೂಕ ಘಟಕದ ಅಧ್ಯಕ್ಷ ರವೀಂದ್ರ ಕಟ್ಟಿಮನಿ, ಪದಾಧಿಕಾರಿಗಳಾದ ಮಹೇಶ ಚಲವಾದಿ, ನಾರಾಯಣ ಹಿಂಗಮೋರೆ, ನೀಲಕಂಠ ಕೊಣ್ಣೂರ,ನಾಗೇಶ ಕಟ್ಟಿಮನಿ, ರಾಘು ಮಾನೆ, ಗುರುಪಾದಪ್ಪ ಬಸರಿಕಟ್ಟಿ, ಶಿವು ಕಟ್ಟಿಮನಿ, ನಾರಾಯಣ ಹಿಂಗಮೋರೆ, ನಾಗರಾಜ್ ಪತ್ತಾರ ಹಾಗೂ ಪದಾಧಿಕಾರಿಗಳು ಇದ್ದರು.