ಹಡಪದ ಅಪ್ಪಣ್ಣ ಕುರಿತು ಶಾಲೆಯಲ್ಲಿ ಪ್ರಬಂಧ ಏರ್ಪಡಿಸಲು ಮನವಿ

ಹಡಪದ ಅಪ್ಪಣ್ಣ ಕುರಿತು ಶಾಲೆಯಲ್ಲಿ ಪ್ರಬಂಧ ಏರ್ಪಡಿಸಲು ಮನವಿ A request to arrange an essay in school on Hadapada Appanna

ಶಿಗ್ಗಾವಿ 05 : ಇದೇ ಜುಲೈ 10 ರಂದು ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ದಿನಾಚರಣೆ ಪ್ರಯುಕ್ತ ಕಡ್ಡಾಯವಾಗಿ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ವಸತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ಹಡಪದ ಅಪ್ಪಣ್ಣನವರ ಕುರಿತು ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಭಾಷಣ ಸ್ಪರ್ಧೆಗಳನ್ನು ಏರಿ​‍್ಡಸುವಂತೆ ಹಡಪದ ಸಮಾಜದ ತಾಲೂಕಾದ್ಯಕ್ಷ ಮಲ್ಲಿಕಾರ್ಜುನ ಹಡಪದ ಮನವಿ ಮಾಡಿದರು. 

ಶಿಗ್ಗಾವಿ ಪಟ್ಟಣದ ತಹಶೀಲಾರ ಕಾರ್ಯಾಲಯದ ಸಭಾ ಭವನದಲ್ಲಿ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಂಡ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶಾಲಾ ಹಂತ, ಗ್ರಾಮ ಪಂಚಾಯತಿ ವ್ಯಾಪ್ತಿಗಳ ಮಟ್ಟದಲ್ಲಿ ಕಡ್ಡಾಯವಾಗಿ ಹಡಪದ ಅಪ್ಪಣ್ಣನವರ ಜಯಂತಿಯನ್ನು ಆಚರಿಸಲು ಮನವಿ ಮಾಡಿ, ಆಯಾ ಶಾಲಾ ವಲಯದಲ್ಲಿ ಹಾಗೂ ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ನಮ್ಮ ಹಡಪದ ಸಮಾಜದ ಭಾಂದವರನ್ನು ಪಾಲ್ಗೊಳ್ಳುವಂತೆ ಮಾಡಿ  ಆಚರಿಸಲು ವಿನಂತಿಸಿದರು. 

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ ಮಾತನಾಡಿ, ಶರಣರ ವಚನಗಳ ಸಂದೇಶ ಸಾರುವ ನುಡಿಗಳು ಮಕ್ಕಳಲ್ಲಿ ಬೆಳೆಯಬೇಕು, ವಚನದ ತಿರುಳನ್ನ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಭಾರತೀಯ ಸಂಸ್ಕೃತಿಯಲ್ಲಿ ವಚನಗಳ ಸಾರಾಂಶದ ಅರಿವು ಮಕ್ಕಳಿಗೆ ಆಗಬೇಕಿದೆ ಎಂದರು. 

ಮಾಜಿ ಜಿಪಂ ಸದಸ್ಯ ಡಾ. ಮಲ್ಲೇಶಪ್ಪ ಹರಿಜನ ಮಾತನಾಡಿ, ಬಹಳಷ್ಟು ತುಳಿತಕ್ಕೆ ಒಳಗಾದ ಸಮುದಾಯಗಳಲ್ಲಿ ಈ ಹಡಪದ ಸಮಾಜವು ಒಂದಾಗಿದ್ದು ಹಡಪದ ಅಪ್ಪಣ್ಣನವರ ಕಾಯಕ ನಿಷ್ಟೆಗೆ ಹೆಸರಾದ ಹಡಪದ ಅಪ್ಪಣ್ಣನವರನ್ನ ಬಸವಣ್ಣನವರು ತಮ್ಮ ಆಪ್ತಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿದ್ದರು ಎಂದ ಅವರು, ಶರಣರ ವಚನಗಳ ಸಂದೇಶದಲ್ಲಿಯೇ ತಿಳಿಸಿರುವಂತೆ ಸರ್ವ ಸಮುದಾಯದ ಏಳಿಗೆ ಜೊತೆಗೆ ವಚನಗಳು ತುಳಿತಕ್ಕೆ ಒಳಗಾದ ಸಮುದಾಯಗಳ ಸರ್ವತೋಮುಖ ಏಳಿಗೆಯನ್ನ ಬಯಸುವ ವಿಚಾರಗಳು ಶರಣರ ವಚನಗಳಲ್ಲಿ ಇದ್ದವು ಅವುಗಳನ್ನ ನಾವು ಅರಿತು ನಡೆಯಬೇಕಿದೆ ಎಂದರು. 

ಪ್ರಭಾರ ತಹಶೀಲ್ದಾರ ರವಿ ಕೊರವರ, ಸಾಮಾಜಿಕ ಹೋರಾಟಗಾರ ಬಸವರಾಜ ಜೇಕಿನಕಟ್ಟಿ, ಕೇದಾರ​‍್ಪ ಬಗಾಡೆ ಮಾತನಾಡಿದರು, ಮುಖಂಡರಾದ ಅಶೋಕ ಕಾಳೆ, ಕಾಳಪ್ಪ ಬಡಿಗೇರ, ರೈತ ಮುಖಂಡರಾದ ಶಂಕರಗೌಡ ಪಾಟೀಲ, ಮಂಜುನಾಥ ಕಂಕನವಾಡ, ಆನಂದ ಕೆಳಗಿನಮನಿ, ಈರಣ್ಣ ಸಮಗೊಂಡ ಹಡಪದ ಸಮಾಜದ ಮುಖಂಡರಾದ ಗುರುಬಸಪ್ಪ ಹಡಪದ, ಮುತ್ತುರಾಜ ಕ್ಷೌರದ, ಈರ​‍್ಪ ಹಡಪದ, ಮಂಜುನಾಥ ಹಡಪದ, ಮಹಾಲಿಂಗಪ್ಪ ಹಡಪದ, ಕೊಟೆಪ್ಪ ಹಡಪದ,  ವೀರೇಶ ಹಡಪದ, ಜಗದೀಶ ಹಡಪದ, ರುದ್ರ​‍್ಪ ಹಡಪದ, ಮಂಜುನಾಥ ಓಣಿಮನಿ, ಅಶೋಕ ಹಂಪಣ್ಣವರ ಸೇರಿದಂತೆ ತಾಲೂಕಿನ ಹಡಪದ ಸಮಾಜದ ವಲಯಮಟ್ಟಗಳ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.