ಬೆಳಗಾವಿ: ಅಪರೂಪದ ಸಂಗೀತ ಸಂಜೆ "ಭಾವ ಸಂಗಮ"

ಲೋಕದರ್ಶನ ವರದಿ

ಬೆಳಗಾವಿ 25:  "ಫ್ಯಾನ್ ಕ್ಲಬ್ ಆಫ್ ಓಲ್ಡ ಸಾಂಗ್ಸ ದವರು ಹಿಂದವಾಡಿಯ ಗೋಮಟೇಶ ವಿದ್ಯಾಪೀಠದ ಹತ್ತಿರವಿರುವ ಆಯ್.ಎಂ.ಇ.ಆರ್. ಸಭಾಭವನದಲ್ಲಿ ಇಂದು ಕನರ್ಾಟಕ ರಾಜ್ಯೋತ್ಸವ ಆಚರಣೆಯ ಅಂಗವಾಗಿ 'ಭಾವಸಂಗಮ' ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.  1956 ರಲ್ಲಿಯ ಜನಪ್ರಿಯ ಗೀತೆ "ಅಮರ ಮಧುರ ಪ್ರೇಮ.." ಗೀತೆಯಿಂದ 1986 ರ "ಶಿಲೆಗಳು ಸಂಗೀತವ ಹಾಡಿದೆ" ಗೀತೆಯವರೆಗೆ  ಸುಮಾರು ಮೂರು ದಶಕಗಳ ಜನಪ್ರಿಯ ಸುಮಧುರ  ಹಳೆಯ ಕನ್ನಡ  ಚಿತ್ರಗೀತೆಗಳನ್ನು  19 ಗಾಯಕರು 30 ಹಾಡುಗಳನ್ನು ಪ್ರಸ್ತುತಪಡಿಸಿದರು.

ಕನರ್ಾಟಕ ರಾಜ್ಯೋತ್ಸವ ಸಂದರ್ಭದಲ್ಲಿ  ಹಮ್ಮಿಕೊಳ್ಳಲಾಗಿದ್ದ 'ಭಾವಸಂಗಮ' ಕಾರ್ಯಕ್ರಮ ಮನರಂಜನೆಯೊಂದಿಗೆ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ  ಕವಿ ದ.ರಾ. ಬೇಂದ್ರೆ, ಕುವೆಂಪು,  ಕೆ. ಎಸ್. ನಿಸಾರ ಅಹ್ಮದ್, ಕಾದಂಬರಿಕಾರರಾದ ಎಂ. ಕೆ .ಇಂದಿರಾ, ವಾಣಿ, ಟಿ. ಕೆ. ರಾಮರಾವ್, ಭಾರತಿಸುತ, ತ್ರಿವೇಣಿ, ತ.ರಾಸು. ಮುಂತಾದ  ಕವಿ, ಸಾಹಿತಿಗಳನ್ನು, ಕಲಾವಿದರನ್ನು ನೆನಪಿಸಿಕೊಳ್ಳುವುದರೊಂದಿಗೆ ಕನ್ನಡ ಮಾತೆಯನು ನೆನೆಯುವ ಸುಮಧುರ ಗೀತೆಗಳನ್ನು ಹಾಡುವುದರ ಮೂಲಕ ಕನ್ನಡ ನಾಡು ನುಡಿ ಕುರಿತು ಅಭಿಮಾನ ಮೆರೆದರು.

"ಫ್ಯಾನ್ ಕ್ಲಬ್ ಆಫ್ ಓಲ್ಡ ಸಾಂಗ್ಸದ ಸಂಚಾಲಕರಾದ ಡಾ. ಎ. ಎಲ್. ಕುಲಕಣರ್ಿಯವರು, ಕನರ್ಾಟಕ ರಾಜ್ಯೋತ್ಸವ ಆಚರಣೆ ಅಂಗವಾಗಿ ಹಮ್ಮಿಕೊಂಡಿರುವ  'ಭಾವ ಸಂಗಮ' ಕಾರ್ಯಕ್ರಮದಲ್ಲಿ ಮರಾಠಿ ಮಾತೃಭಾಷೆಯ ಶ್ರೀಮತಿ ಶುಭಾಂಗಿ ಕಾರೆಕರ, ಸಿದ್ದಾರ್ಥ ಹೊಂಗಲ ಹಾಗೂ ಹಿಂದಿ ಮಾತೃಭಾಷಯ ರಫೀಕ್ ಶೇಕ್ ಅವರು ಕನ್ನಡ ಹಾಡುಗಳನ್ನು ತಮ್ಮ ಭಾಷೆಗಳಲ್ಲಿ ಬರೆದುಕೊಂಡು ಶುಶ್ರಾವ್ಯವಾಗಿ ಹಾಡಿ ಕನ್ನಡ ಭಾಷಾ ಪ್ರೇಮ ಮೆರೆದಿದ್ದಾರೆ. ಇದು ಗಡಿನಾಡಾದ ಬೆಳಗಾವಿಯ ಒಂದು ವಿಶೇಷ. ಯಾವುದೇ ಕಲೆ ಮಧ್ಯೆ ಭಾಷೆ ಅಡ್ಡ ಬರಲಾರದು, ಕನ್ನಡ ಸಾಹಿತ್ಯವನ್ನು ಹೆಚ್ಚಾಗಿ ಚಿತ್ರರಂಗಕ್ಕೆ  ಉಪಯೋಗಿಸಿಕೊಂಡವರೆಂದರೆ ಪುಟ್ಟಣ್ಣ ಕಣಗಾಲ್ ಎಂದು ಅವರು ಹೇಳಿದರು. 

ಗಾಯಕ ರಫೀಕ್ ಶೇಖ, ನಾಟಕಕಾರ ಶ್ರೀಪತಿ ಮಂಜನಬೈಲ್ ಕಾರ್ಯಕ್ರಮ ಉದ್ಘಾಟಿಸಿದರು. ಡಿ. ಎಸ್. ಕಕರ್ಿಯವರ "ಹಚ್ಚೇವು ಕನ್ನಡ ದೀಪ..." ಹಾಡಿನಿಂದ ಕಾರ್ಯಕ್ರಮ ಪ್ರಾರಂಭವಾಯಿತು.  ಅಮರಾ ಮಧುರ ಪ್ರೇಮ (ರತ್ನಗಿರಿ ರಹಸ್ಯ) "ಅಪಾರ ಕೀತರ್ಿ...."(ವಿಜಯನಗರ ವೀರಪುತ್ರ), ಮೂಡಲ ಮನೆಯ...(ಬೆಳ್ಳಿಮೋಡ), ಹೂವು ಚಲುವೆಲ್ಲ ನಂದೆಂದಿತು(ಹಣ್ಣೆಲೆ ಚಿಗುರಿದಾಗ), ಪಂಚಮವೇದ ಪ್ರೇಮದ ನಾದ(ಗೆಜ್ಜೆ ಪೂಜೆ), ಉತ್ತರ ದ್ರುವದಿಂ... (ಶರಪಂಜರ), ಗಗನವು ಎಲ್ಲೋ...(ಗೆಜ್ಜೆಪೂಜೆ), ಒಲವೆ ಜೀವನ ಸಾಕ್ಷಾತ್ಕಾರ(ಸಾಕ್ಷಾತ್ಕಾರ), ಬಾಳ ಬಂಗಾರ ನೀನು(ಬಂಗಾರದ ಮನುಷ್ಯ), ಆಕಾಶದಿಂದ ಧರೆಗಿಳಿದ..(ಚಂದನದ ಗೊಂಬೆ), ಪ್ರೀತಿನೇ ಆ ದ್ಯಾವ್ರು ತಂದಾ...(ದೂರದ ಬೆಟ್ಟ). ನಾವಾಡುವ ನುಡಿಯೇ ಕನ್ನಡ ನುಡಿ(ಗಂಧದ ಗುಡಿ), ಸಂಪಿಗೆ ಮರದಾ ಹಸಿರೆಲೆ ನಡುವೆ(ಉಪಾಸನೆ), ಮಾಮರವೆಲ್ಲೋ ಕೋಗಿಲೆ ಎಲ್ಲೋ(ದೇವರ ಗುಡಿ), ನಿನ್ನ ನೀನು....(ದೇವರ ಕಣ್ಣು) ಪೂಜಿಸಲೆಂದೆ.. (ಎರಡು ಕನಸು) ಬೆಳದಿಂಗಳಾಗಿ ಬಾ(ಹುಲಿ ಹಾಲಿನ ಮೇವು), ಬಾನಲ್ಲೂ ನೀನೆ.. (ಬಯಲುದಾರಿ) ಮುಂತಾದ ಸುಮಧುರ  ಗೀತೆಗಳನ್ನು  ಪ್ರಸ್ತುತ ಪಡಿಸಿದರು.

ರಫೀಕ್ ಶೇಖ, ರಾಜೇಶ್ವರಿ ಹಿರೇಮಠ, ಅಂತರಾ ಕುಲಕಣರ್ಿ, ಗಿರೀಶ ಜುಮ್ಮಾಯಿ, ಶುಭಾಂಗಿ ಕಾರೇಕರ, ಸೌಂದರ್ಯ ಪದಕಿ, ಡಾ. ಸ್ವಪ್ನಾ ಕುಲಕಣರ್ಿ, ಅಕ್ಷತಾ ಕುಲಕಣರ್ಿ, ಡಾ. ಅರವಿಂದ ಕುಲಕಣರ್ಿ, ಪದ್ಮಾ ಕುಲಕಣರ್ಿ, ಪೂಣರ್ಿಮಾ ಕುಲಕಣರ್ಿ, ಮಾಲತೇಶ ಪದಕಿ, ದೀಪಾ ಪದಕಿ, ಸೃಜನಾ, ದರ್ಶನ ಪದಕಿ, ಡಾ. ಗುರುರಾಜ ಮನಗೂಳಿ ಮುಂತಾದ ಕಲಾವಿದರು ತಮ್ಮ   ಸುಶ್ರಾವ್ಯ ಕಂಠದಿಂದ ಹಾಡಿ ಕೇಳುಗರನ್ನು ಮೂರು ಗಂಟೆಗಳ ಕಾಲ  ಮೈಮರೆಸಿದರು. ರಫೀಕ್ ಶೇಖ್ ಹಾಗೂ ಬೆಳ್ಳಿಚುಕ್ಕಿ ಸಂಗೀತ ಸಂಸ್ಥೆಯ ಶ್ರೀಮತಿ  ರಾಜೇಶ್ವರಿ ಹಿರೇಮಠ ಈ ಎಲ್ಲ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದರು.

ದರ್ಶನ ಪದಕಿ ಹಾಡಿದ ತಿರಗುಬಾಣ ಚಿತ್ರದ 'ಇದೇ ನಾಡು ಇದೇ ಭಾಷೆ ಎಂದೆಂದೂ  ನನ್ನದಾಗಿರಲಿ' ಎಲ್ಲರಲ್ಲಿ ನಾಡು ನುಡಿ ಅಭಿಮಾನ ಮೈ ಮನಗಳಲ್ಲಿ ತುಂಬಿ ಎಲ್ಲರಲ್ಲಿ ಕನ್ನಡದ ಜೋಶ್ ಉಂಟು ಮಾಡಿದರೆ. ಅಕ್ಷತಾ ಕುಲಕಣರ್ಿಯವರು ಹಾಡಿದ  ಪರೋಪಕಾರಿ ಚಿತ್ರದ "ಜೋಕೆ  ನಾನು ಬಳ್ಳಿಯ ಜಿಂಕೆ" ಯುವಕರಷ್ಟೇ ಅಲ್ಲ ವಯಸ್ಸಾದವರಲ್ಲೂ  ಹೊಸ ಹುರುಪನ್ನು ತುಂಬಿ ಕುಣಿಯುವಂತೆ ಮಾಡಿತು. ಅಂತರಾ ಕುಲಕಣರ್ಿ ಕುಲಕಣರ್ಿ ಹಾಡಿದ ರಥಸಪ್ತಮಿ ಚಿತ್ರದ "ಶಿಲೆಗಳು ಸಂಗೀತವ ಹಾಡಿದೆ..." ಹಾಡು ಎಲ್ಲರ  ಮೆಚ್ಚುಗೆಯನ್ನು ಪಡೆಯಿತು. ಡಾ. ಅರವಿಂದ ಕುಲಕಣರ್ಿ, ಪ್ರೇಮಾ ಕುಲಕಣರ್ಿ  ನಿರೂಪಿಸಿದರು.