ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಅಂಗಳದಲ್ಲಿ ಗಾನ ಕಲಾ ಸಂಜೆ ಎಂಬ ಕಾರ್ಯಕ್ರಮ

A program called Gana Kala Samjam at Chinnara Angal in Government Senior Primary School

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಅಂಗಳದಲ್ಲಿ ಗಾನ ಕಲಾ ಸಂಜೆ ಎಂಬ ಕಾರ್ಯಕ್ರಮ  

ಕೊಪ್ಪಳ 19 : ಗುರುಕುಲ ಸಂಗೀತ ಕಲಾ ಸಂಸ್ಥೆಯವತಿಯಿಂದ ದದೆಗಲ್‌ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಅಂಗಳದಲ್ಲಿ ಕಲಾ ಯಾನ ಎಂಬ ಶೀರ್ಷಿಕೆಯಡಿ ಗಾನ ಕಲಾ ಸಂಜೆ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ಕಾರ್ಯಕ್ರಮದ ಉದ್ಘಾಟನೆಯನ್ನು ಶಿಕ್ಷಕರಾದ ರಾಜೇಶ್ವರಿ ಗೌಡರರವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಂಕ್ರ​‍್ಪ ಬಿನ್ನಾಳರವರು ಮಾತನಾಡಿ ಮಕ್ಕಳಿಗಾಗಿ ಶಾಲೆಗೆ ಕಾರ್ಯಕ್ರಮವನ್ನು ತಂದು ವಿಶೇಷವಾಗಿ ಸಂಗೀತ ವಾದ್ಯ ನೃತ್ಯ ಕಾರ್ಯಕ್ರಮಗಳನ್ನು ಮಕ್ಕಳಿಗೆ ಪರಿಚಯಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನಿಯವಾದದ್ದು ಎಂದರು. ಮುಖ್ಯ ಅತಿಥಿಗಳಾಗಿ ರುದ್ರಮ್ಮ ಮಾದಿನೂರು, ದಾಕ್ಷಾಯಿಣಿ ಇಂಗಲಿಗಿ, ಮಂಜುನಾಥ ಹೊಸಮನಿ, ಪ್ರವೀಣ ಬಳಿಗೇರಿ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಪುಟ್ಟರಾಜ ಬಣ್ಣದರಿಂದ ಬಾನ್ಸೂರಿ ವಾದನ, ಶಂಕ್ರ​‍್ಪ ಬಿನ್ನಾಳರಿಂದ ಸುಗಮ ಸಂಗೀತ, ವಿಜಯಲಕ್ಷ್ಮಿ ನಾಗರಾಜರಿಂದ ವಚನ ಸಂಗೀತ, ಅಭಿಷೇಕ ಭಾವಿಕಟ್ಟಿಯವರಿಂದ ಭಾವಗೀತೆಗಳು, ಕೇಶವ ಹಾಗೂ ತಂಡದವರಿಂದ ಸಮೂಹ ನೃತ್ಯ ಕಾರ್ಯಕ್ರಮಗಳು ಸೊಗಸಾಗಿ ಮೂಡಿ ಬಂದವು. 

ವಾದ್ಯವೃಂದದ ಕೀಬೋರ್ಡನಲ್ಲಿ ರಾಮಚಂದ್ರ​‍್ಪ ಉಪ್ಪಾರ, ಬಾನ್ಸೂರಿಯಲ್ಲಿ ನಾಗರಾಜ ಶ್ಯಾವಿ, ತಬಲದಲ್ಲಿ ಮಾರುತಿ ದೊಡ್ಡಮನಿ ರಿಧಮ ಪ್ಯಾಡನಲ್ಲಿ ಪುಟ್ಟರಾಜ ಬಿನ್ನಾಳ ಸಾಥ್ ನೀಡಿದರು.