ಖಾಸಗಿ ಹೊಟೇಲೊಂದರಲ್ಲಿ ಪ್ರಾಚಾರ್ಯ ಚನ್ನಗೊಂಡ ಅವರು ನಿವೃತ್ತಿ ಹೊಂದಿದ ಪ್ರಯಕ್ತ ಸನ್ಮಾನ
A private hotel felicitated Principal Channagonda upon his retirement
ಲೋಕದರ್ಶನ ವರದಿ
ಸಿಂದಗಿ 21 : ಶಿಕ್ಷಕ ಸೇವಾವೃತ್ತಿಯಲ್ಲಿ ಪದೋನ್ನತಿ, ನಿವೃತ್ತಿ ಸಹಜ ಆದರೆ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಮನಸ್ಸು ಗೆದ್ದು ಕಳಂಕ ರಹಿತ ಸೇವೆ ಸಲ್ಲಿಸುವುದು ದೊಡ್ಡ ಕಾರ್ಯವಾಗಿದೆ ಎಂದು ಸಿ.ಎಂ. ಮನಗೂಳಿ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಅರವಿಂದ ಮನಗೂಳಿ ಅಭಿಮತ ವ್ಯಕ್ತಪಡಿಸಿದರು. ನಗರದ ಹೊರವಲಯದ ಖಾಸಗಿ ಹೊಟೇಲೊಂದರಲ್ಲಿ ಕಲಕೇರಿ ಬಸವೇಶ್ವರ ಪಪೂ ಕಾಲೇಜಿನ ಪ್ರಾಚಾರ್ಯರಾಗಿ ಅಮೋಘ ಸೇವೆ ಸಲ್ಲಿಸಿದ ಬಸವರಾಜ ಚನ್ನಗೊಂಡ ಅವರು ನಿವೃತ್ತಿ ಹೊಂದಿದ ಪ್ರಯಕ್ತ ಹಂದಿಗನೂರ ಗ್ರಾಮಸ್ಥರು, ಕಲಕೇರಿ ಕಾಲೇಜು ಸಿಬ್ಬಂದಿ ಹಾಗೂ ತಾಲೂಕು ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕ ವೃತ್ತಿ ಸಮಾಜದಲ್ಲಿ ಗೌರವಯುತವಾದ ಹುದ್ದೆ ಅದನ್ನು ಕಳಂಕ ರಹಿತವಾದ ಸತತ 35 ವರ್ಷ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಗರಿಮೆ ಇವರಿಗೆ ಸಲ್ಲುತ್ತದೆ ಎಂದರು, ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ತಾಲುಕು ಅದ್ಯಕ್ಷ ಎಂ.ಎಂ.ಹಂಗರಗಿ, ನಿವೃತ್ತ ದೈಹಿಕ ಶಿಕ್ಷಕ ಎಚ್.ಎಂ.ಉತ್ನಾಳ, ಟಿಎಸ್ಪಿ ಮಂಡಳಿ ನಿರ್ದೇಶಕ ವ್ಹಿ.ಬಿ.ಕುರಡಿ, ದೈಹಿಕ ಉಪನ್ಯಸಕರ ಸಂಘದ ತಾಲೂಕು ಅದ್ಯಕ್ಷ ಸತೀಶ ಬಸರಕೋಡ, ಮಾಜಿ ರಾಜ್ಯ ಪರಿಷತ್ ಸದಸ್ಯ ಸಂಗನಗೌಡ ಪಾಟೀಲ ಅಗಸಬಾಳ, ಕಸಾಪ ಮಾಜಿ ಅದ್ಯಕ್ಷ ಸಿವು ಬಡಾನೂರ ಸೇರಿದಂತೆ ಕಲಕೇರಿ ಬಸವೇಶ್ವರ ಕಾಲೇಜಿನ ಸಿಬ್ಬಂದಿ, ಕುಟುಂಬಸ್ಘರು ಇದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 