ಶತಮಾನ ಕಂಡಇದೇನು ವಿದ್ಯಾಮಂದಿರವೋ, ಕಸದ ತೊಟ್ಟಿಯೋ ಸರ್ಕಾರಿ ಶಾಲೆಯ ಆವರಣದಲ್ಲಿ ಕಸದ ರಾಶಿ: ದುರ್ನಾತದಲ್ಲೇ ಮಕ್ಕಳ ಕಲಿಕೆ
A pile of Is this a school or a garbage dump?garbage in the premises of a century-old government sch
ಇದೇನು ವಿದ್ಯಾಮಂದಿರವೋ, ಕಸದ ತೊಟ್ಟಿಯೋ
ಶತಮಾನ ಕಂಡ ಸರ್ಕಾರಿ ಶಾಲೆಯ ಆವರಣದಲ್ಲಿ ಕಸದ ರಾಶಿ: ದುರ್ನಾತದಲ್ಲೇ ಮಕ್ಕಳ ಕಲಿಕೆ
ಶಿವಾನಂದ ಮರಾಠೆ
ಗುರ್ಲಾಪುರ : ಪಟ್ಟಣದ ಶತಮಾನ ಕಂಡ ಸರ್ಕಾರಿ ಮಾದರಿ ಕನ್ನಡ ಕೇಂದ್ರ ಶಾಲೆ, ಸಿಡಿಪಿಓ ಕಚೇರಿ ಹಾಗೂ ಸಾರ್ವಜನಿಕ ಗ್ರಂಥಾಲಯ ಸೇರಿದಂತೆ ಇನ್ನೂ ಎರಡು ಸರ್ಕಾರಿ ಶಾಲೆಗಳು ಕಸದ ತೊಟ್ಟಿಯಾಗಿ ರೂಪುಗೊಂಡಿವೆ. ಇವುಗಳ ಆವರಣದಲ್ಲಿ ಬಹುತೇಕ ಭಾಗ ಕಸ ಆವರಿಸಿ ದುರ್ನಾತ ಬೀರುತ್ತಿದೆ. ದಿನವೂ ಈ ವಾಸನೆ ಸಹಿಸಬೇಕಿರುವುದರಿಂದ ಮಕ್ಕಳ ಕಲಿಕೆಯ ಮೇಲೆ ನೇರ ಪರಿಣಾಮ ಬೀರಿದೆ. ಮಕಕ್ಳಿಗೆ ಬಾಲ್ಯದಲ್ಲೇ ಸ್ವಚ್ಛತೆಯ ಅರಿವು ಮೂಡಿಸಬೇಕಾದ ಸರಸ್ವತಿ ತಾಣ ಅಸ್ವಚ್ಛತೆಯ ಆಗರವಾಗಿದೆ. ವಿದ್ಯಾ ದೇಗುಲ ಕಸದ ತೊಟ್ಟಿಯಾಗಿದೆ. ಆದರೂ ಪುರಸಭೆ ಚುನಾಯಿತ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಮಗೆ ಏನೂ ಸಂಬಂಧವಿಲ್ಲ ಎಂಬಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ವಿಪರ್ಯಾಸ.
ಒಂದು ಸಮಯದಲ್ಲಿ ಈ ಶಾಲೆಯಲ್ಲಿ 1,200 ರಿಂದ 1,400ರವರೆಗೆ ವಿದ್ಯಾರ್ಥಿಗಳು ಓದುತ್ತಿದರು. ಅಕ್ಷರ ಕಲಿಸಿ ಅವರಿಗೆ ಉನ್ನತ ಹುದ್ದೆ ಕಲ್ಪಿಸಿ ಬದುಕು ಕಟ್ಟಿಕೊಟ್ಟ ಈ ಶಾಲೆಯ ಶೋಚನೀಯ ಸ್ಥಿತಿಯನ್ನು ಈಗ ಕೇಳುವವರು ಇಲ್ಲದಂತಾಗಿದೆ.
ಮಳೆಗಾಲ ಬಂತೆಂದರೆ ಸಾಕು ಇಲ್ಲಿಯ ಮಕ್ಕಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಕಾರಣ ಪ್ರತಿ ಬಾರಿ ಜೋರು ಮಳೆಯಾದಾಗ ಆವರಣದೊಳಗೆ ನೀರು ನಿಂತು ಕೆರೆಯಂತೆ ಆಗುತ್ತದೆ. ಆವರಣದೊಳಗೆ ನುಗ್ಗುವ ನೀರು ಬೇರೆ ಕಡೆ ಹೋಗಲು ಅವಕಾಶ ಇಲ್ಲದಂತಾಗಿದೆ. ಹೀಗಾಗಿ ಶಾಲೆಯ ಆವರಣದಲ್ಲಿ ತಿಂಗಳುಗಟ್ಟಲೇ ನೀರು ನಿಂತು ದುರ್ನಾತ ಬೀರುತ್ತದೆ.
ಇನ್ನೂ ಇಲ್ಲಿ ನಿಂತ ನೀರು ಸೊಳ್ಳೆ ಮತ್ತು ಕಸದ ರಾಶಿಯಿಂದ ಕ್ರಿಮಿ ಕೀಟಗಳ ಆವಾಸದ ತಾಣವಾಗಿ ಮಾರ್ಪಟಟಿದೆ. ನಿತ್ಯ ಶಾಲೆಗೆ ಬರುವ ವಿದ್ಯಾರ್ಥಿಗಳು, ಶಿಕ್ಷಕರು ಆವರಣದಲ್ಲಿ ಮೂಗು ಮುಚ್ಚಿಕೊಂಡೇ ಹೆಜ್ಜೆ ಹಾಕುವಂತಾಗಿದೆ. ಪ್ರಸ್ತುತ ಈ ಶಾಲೆಗಳಲ್ಲಿ ಈಗ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಸರಿಪಡಿಸುವ ಪ್ರಯತ್ನ ಮಾಡುತ್ತಾರೆ ಎನ್ನುವ ನೀರೀಕ್ಷೆಯಲ್ಲಿ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸುಮಾರು ತಿಂಗಳುಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಪರಿಸರ ಪ್ರೇಮಿ ಈರ್ಪ ಢವಳೇಶ್ವರ ಅಸಹಾಯಕತೆ ವ್ಯಕ್ತ ಪಡಿಸಿದರು.
ಸರ್ಕಾರಿ ಶಾಲೆಗೆ ಹೋಗುವ ಮಕ್ಕಳಿಗೆ ಸರ್ಕಾರ ಮೂಲಭೂತ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ಉದಾಹರಣೆ ಆವರಣದಲ್ಲಿ ಇರುವ ಶೌಚಾಲಯದ ಮಹಿಳಾ ಕೊಠಡಿಯ ಬಾಗಿಲು ಹಾಕಿದ್ದಾರೆ. ಹೀಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದಲೇ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದರೂ ಯಾರು ಮಾತನಾಡುತ್ತಿಲ್ಲ. ಇನ್ನು ಶಾಲೆಯ ಆವರಣದಲ್ಲಿ ಮಳೆಗಾಲದಲ್ಲಿ ನೀರು ನುಗ್ಗತ್ತಲಿದ್ದು, ಮತ್ತು ಕಸದ ರಾಶಿಯಿಂದ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಯಿಂದ ಶಿಕ್ಷಣ ಇಲಾಖೆ ಮುಕ್ತಿ ನೀಡಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.
ಪಟ್ಟಣದ ಕೇಂದ್ರ ಶಾಲೆಯಲ್ಲಿ ಸಾಕಷ್ಟು ಸಸಿಗಳನ್ನು ನೆಟ್ಟು ಉತ್ತಮ ಪರಿಸರ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ ಆದರೆ ಮಳೆಗಾಲದಲ್ಲಿ ಮಳೆ ನೀರು ನಿಲ್ಲುತ್ತದೆ. ಹಾಗೆ ಆವರಣದಲ್ಲಿ ಪುರಸಭೆಯ ಕಸ ಘಟಕ ಸ್ಥಾಪನೆ ಮಾಡಿದ ಹಾಗೆ ಕಸ ಇರುವುದರಿಂದ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ. ಹಾಗಾಗಿ ಸಾಕಷ್ಟು ಬಾರಿ ಪುರಸಭೆ ಅಧಿಕಾರಿಗಳಿಗೆ ಹಾಗೂ ಶಾಲಾ ಶಿಕ್ಷಕರಿಗೆ ಹೇಳಿದರು ಯಾವುದೇ ಪ್ರಯೋಜನೆಯಗಿಲ್ಲವೆಂದು ಪರಿಸರ ಪ್ರೇಮಿ ಈರ್ಪ ಢವಳೇಶ್ವರ ಅಸಮಾಧಾನ ಹೊರಹಾಕಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 