ಮನುಷ್ಯ ಜೀವನದಲ್ಲಿ ಗುರಿ ಹೊಂದಿರಬೇಕು: ಶ್ರೀಗಳು
A person should have a goal in life: Shri
ಹಾವೇರಿ 06: ಮನುಷ್ಯ ಜೀವನದಲ್ಲಿ ಉನ್ನತ್ತಿ ಹೊಂದಬೇಕಾದರೇ ನಿರ್ದಿಷ್ಟವಾದ ಗುರಿ ಹೊಂದಿರಬೇಕು ಅದನ್ನು ಸಾಕರಾಗೊಳಿಸಿಕೊಳ್ಳಲು ಸದ್ಗುರಿನ ಮಾರ್ಗದರ್ಶನ ಅತಿಅವಶ್ಯಕ ಇವೆರಡಿಲ್ಲದಿದ್ದರೇ ಜೀವನವೇ ವ್ಯರ್ಥವಾಗುವುದು ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಪೂಜ್ಯ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಕೋಡಬಾಳ ಗ್ರಾಮದಲ್ಲಿ ಜರುಗುತ್ತಿರುವ ಪರಿವರ್ತನೆಯಡೆಗೆ ಧರ್ಮ ಜಾಗೃತಿ ಪ್ರವಚನ ಕಾರ್ಯಕ್ರಮದಲ್ಲಿ ಸೋಮವಾರ ಸಾನ್ನಿಧ್ಯವಹಿಸಿ ಆರ್ಶೀವಚನ ನೀಡಿ ಮನುಷ್ಯ ತನ್ನ ಜೀವನದಲ್ಲಿ ಎನೆಲ್ಲ ಸಾಧಿಸುವ ಛಲವನ್ನೂ ಹೊಂದಿದ್ದಾನೆ, ಆದರೆ ತನ್ನನ್ನು ತಾನು ತಿದ್ದಿಕೊಳ್ಳುವ ಪ್ರಯತ್ನ ಮಾಡಲಿಲ್ಲ, ಎಷ್ಟೇ ದೊಡ್ಡ ವ್ಯಕ್ತಿಯಾದರೊ ಕೊಟ್ಟಮಾತು,ಇಟ್ಟ ನಂಬಿಕೆ ಸುಳ್ಳಾದರೆ ಆತನಿಗೆ ಯಾವುದೇ ಬೆಲೆ ಸಿಗುವುದಿಲ್ಲ. ಆದ್ದರಿಂದ ಜಿವನದಲ್ಲಿ ಉನ್ನತ್ತಮಟ್ಟದ ಗುರಿಯನ್ನು ಹೊಂದಿರಬೇಕು ಅದನ್ನು ಸಕಾರಗೊಳಿಸಿಕೊಳ್ಳಲು ಸದ್ಗುರುವಿನ ಮಾರ್ಗದರ್ಶನವಿದ್ದಾಗ ಮಾತ್ರ ಜೀವನದಲ್ಲಿ ಶ್ರೇಯಸ್ಸು ಪಡೆಯಲು ಸಾಧ್ಯವಾಗುತ್ತದೆ. ಸಂಪತ್ತು ಹೊಂದಿದವರು ಶ್ರೀಮಂತರಲ್ಲ ಸಂತೋಷದಿಂದರುವವರೇ ಶ್ರೀಮಂತರು ಎಂದರು. ಪ್ರವಚನಕಾರ ಗುರುಮಹಾಂತಯ್ಯ ಶಾಸ್ತ್ರೀ ಆರಾಧ್ಯಮಠ ಮಾತನಾಡಿ ಮನುಷ್ಯ ತನ್ನ ಜೀವನದಲ್ಲಿ ಧರ್ಮ ಸಂಸ್ಕೃತಿ ಸಂಸ್ಕಾರಗಳನ್ನು ಎಂದಿಗೂ ಮರೆಯದೇ ಜನ್ಮ ಕೊಟ್ಟ ತಾಯಿ, ಜೀವನ ಪಾಠ ಕಲಿಸಿದ ತಂದೆ, ಅನ್ನ ನಿಡುವ ರೈತ, ದೇಶ ಕಾಯುವ ಯೋಧ, ಮತ್ತು ಅರಿವು ನೀಡುವ ಗುರುವನ್ನು ಎಂದಿಗೂ ಮರೆಯಬಾರದು ಎಂದರು. ಇದೇ ಸಂದರ್ಭದಲ್ಲಿ ಕೋಡಬಾಳ ಗ್ರಾಮದ ಗೌಡ್ರ ಕುಟುಂಬಸ್ಥರಿಂದ ಶ್ರೀಗಳಿಗೆ ತುಲಾಭಾರ, ಅನ್ನಸಂರ್ತಪಣೆ ಸೇವೆ ನೇರವೇರಿಸಿದರು. ಕಾರ್ಯಕ್ರಮದಲ್ಲಿ ನೆಗಳೂರ,ಕೋಡಬಾಳ,ಗುತ್ತಲ,ಬೆಳವಿಗಿ, ಹಾಲಗಿ,ಮರೋಳ ಗ್ರಾಮಗಳ ಸದ್ಭಕ್ತರು ಭಾಗಿಯಾಗಿದ್ದರು.
ಶ್ರೀಗಳಿಂದ ದುಶ್ಚಟಗಳ ಬೀಕ್ಷೆ ಸದ್ಗುಣಗಳ ದೀಕ್ಷೆ ಪಾದಯಾತ್ರೆ: ಕೋಡಬಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳಿಂದ ದುಶ್ಚಟಗಳ ಬೀಕ್ಷೆ, ಸದ್ಗುಣಗಳ ದೀಕ್ಷೆ ಎಂಬ ಸದ್ಭಾವನಾ ಪಾದಯಾತ್ರೆ ಜರುಗಿಸುತ್ತಿದ್ದು ಭಕ್ತಾದಿಗಳಿಂದ ತಮ್ಮ ಜೋಳಿಗೆಗೆ ಕಾಣಿಕೆ ಪಡೆಯದೇ ಅವರಿಂದ ದುಶ್ಚಟಗಳನ್ನೇ ಬೀಕ್ಷೆ ಪಡೆಯುತ್ತಿರುವುದು ವಿಶೇಷವಾಗಿದೆ. ಇನ್ನೂ ಪ್ರತಿಯೊಬ್ಬರಿಗೂ ಭಸ್ಮಧಾರೆಣೆ ಹಾಗೂ ರುದ್ರಾಕ್ಷಿ ಧಾರಣೆಯನ್ನು ಶ್ರೀಗಳು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಸಂತಸವನ್ನುಂಟುಮಾಡಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 