ಯೋಗ, ಧ್ಯಾನ, ಪ್ರಾಣಯಾಮದಿಂದ ನೆಮ್ಮದಿ ಜೀವನ : ಬಾಲಚಂದ್ರ ಶರ್ಮ
A peaceful life through yoga, meditation, and pranayama: Balachandra Sharma
ಕಂಪ್ಲಿ 21; ಒತ್ತಡ ಜೀವನದಲ್ಲಿ ಯೋಗ ಧ್ಯಾನ ಪ್ರಾಣಯಾಮ ಮಾಡುವದರಿಂದ ಅರೋಗ್ಯ ಕಾಪಾಡಿಕೊಳ್ಳಬಹುದು ಎಂದು ಯೋಗ ಸಾಧಕ ಬಾಲಚಂದ್ರ ಶರ್ಮ ಹೇಳಿದರು. ಪಟ್ಟಣದ ಶಾರದ ಹಿ.ಪ್ರಾ.ಶಾಲೆ ಆವರಣದಲ್ಲಿ ಪತಂಜಲಿ ಯೋಗ ಸಮಿತಿಯಿಂದ ಏರ್ಾಡಿಸಿದ 11ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಯೋಗದಿಂದ ಒತ್ತಡಗಳು ನಿವಾರಣೆಯಾಗುತ್ತವೇದೈಹಿಕ ಮತ್ತು ಮಾನಸಿಕವಾಗಿ ಸಧೃಡರಾಗಬಹುದು. ಮಕ್ಕಳಲ್ಲಿ ಜ್ಞಾಪಕ ಶಕ್ತಿ ವೃಧ್ದಿಯಾಗಬೇಕಾದರೇ ಧ್ಯಾನ ಅವಶ್ಯಕ ಪ್ರತಿಯೋಬ್ಬರು ಯೋಗ ಧ್ಯಾನ ಅಳವಡಿಸಿಕೊಂಡಾಗ ನೆಮ್ಮದಿ ಜೀವನ ನೆಡಸಬಹುದು.
ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಆರೋಗ್ಯದ ಸರಳ ಸೂತ್ರವಾಗಿದೆ. ಯೋಗದಿಂದ ನೆಮ್ಮದಿ, ತೃಪ್ತಿ, ಸಂತೋಷ ಲಭಿಸಲಿದೆ. ಮಾನವ ಸರ್ವತೋಮುಖ ಅಭಿವೃದ್ಧಿಗಾಗಿ ಯೋಗದ ಅವಶ್ಯಕತೆ ಇದೆ ಎಂದರು. ಪತಂಜಲಿ ಯೋಗ ಸಮಿತಿ ತಾಲೂಕು ಪ್ರಭಾರಿ ಡಿ.ಮೌನೇಶ ಮಾತನಾಡಿ, ಯೋಗವು ಇಂದಿನ ದಿನಮಾನದಲ್ಲಿ ಮನುಷ್ಯನಿಗೆ ಅತ್ಯವಶ್ಯಕವಾಗಿದೆ. ಯೋಗವು ವ್ಯಕ್ತಿಯಲ್ಲಿನ ಶಕ್ತಿ ವೃದ್ಧಿಪಡಿಸುವ ವಿಧಾನವಾಗಿದೆ. ಮಾನವನ ಪ್ರಜ್ಞೆಯು ಆತ್ಮಶಕ್ತಿ ಅಭಿವೃದ್ಧಿ ಯೋಗವು ವಿಕಾಸವಾಗುತ್ತಿರುವ ಪ್ರಕ್ರಿಯೆಯಾಗಿದೆ ಎಂದರು. ನಂತರ ವಿದ್ಯಾರ್ಥಿಗಳು ಶಿಬಿರರ್ಥಿಗಳಿಗೆ ಯೋಗಾಸನವನ್ನು ಉಚಿತವಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಕೊಟ್ರೇಶ, ಕಾರ್ಯದರ್ಶಿ ಎಸ್.ಜಿ.ಚಿತ್ರಗಾರ, ಮಹಿಳಾ ಪ್ರಭಾರಿ ಕಲ್ಗುಡಿರತ್ನಮ್ಮ, ಯೋಗ ಸಾಧಕರಾದ ಡಾ.ರಾಮರಾಜ್ ವಿರೂಪಾಕ್ಷಿ, ತಿಪ್ಪೇಸ್ವಾಮಿ, ಭೀಮನಗೌಡ, ಡಾ.ಜಂಬನಾಥ, ಚಂದ್ರಣ್ಣ, ಮೋಹನ್ ರಾವ್, ನಾಗರತ್ನಮ್ಮ, ಕೆ.ನಿರ್ಮಲಮ್ಮ, ಭವಾನಿ, ಉಮಾ, ಮಮತಾ, ವೆಂಕಟೇಶ, ವಿರೂಪಾಕ್ಷಿ, ಶ್ರೀನಿವಾಸ ಸೇರಿದಂತೆ ಯೋಗಪಟುಗಳು ಹಾಗೂ ಮಕ್ಕಳು ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 