ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಮಠಾದೀಶರ ನೇತೃತ್ವದಲ್ಲಿ ಸಂಪರ್ಕ ಅಭಿಯಾನ
A outreach campaign led by the head of the Matha Diwas for the Hindu Samajotsava program
ಆಲಮೇಲ 20: ಪಟ್ಟಣದಲ್ಲಿ ಜನವರಿ 29 ರಂದು ಬ್ರಹತ್ ಹಿಂದೂ ಸಮಾಜೋತ್ಸವ ಸಮಾವೇಶ ಹಾಗೂ ಶೋಭಾಯಾತ್ರೆ ಜರುಗಲಿದೆ. ಈ ಕಾರ್ಯಕ್ರಮ ನಿಮಿತ್ಯ ಸೋಮವಾರ ಎಲ್ಲ ಮಠಾದೀಶರು ನೇತೃತ್ವದಲ್ಲಿ ಎಲ್ಲ ಸಮುದಾಯದ ಹಿಂದೂಗಳ ಮನೆಗೆ ತೆರಳಿ ಕಾರ್ಯಕ್ರಮದ ಸಂಪರ್ಕ ಅಭಿಯಾನ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು. ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ತಾರಾಪೂರ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಗುರು ಸಂಸ್ಥಾನ ಹಿರೇಮಠ ಚಂದ್ರಶೇಖರ ಶಿವಾಚಾರ್ಯರು, ಅರ್ಜುಣಗಿ ಹಿರೇಮಠದ ಸಂಗನಬಸವ ಶಿವಾಚಾರ್ಯರು, ಕುಮಸಗಿಯ ಶಿವಾನಂದ ಮಹಾಸ್ವಾಮಿಗಳು ನೇತೃತ್ವದಲ್ಲಿ ಪಟ್ಟಣ ಪ್ರತಿಯೊಂದು ನಗರಗಳಿಗೆ ತೆರಳಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅಹ್ವಾನಿಸಿದರು.
ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಮುಖಂಡರಾದ ಜಿ.ಸಿ. ಪಷುಪತಿಮಠ ಮಾತನಾಡಿ 29 ರಂದು ನಡೆಯುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ನಿಮಿತ್ಯ ಶೋಭಾಯಾತ್ರೆ ನಡೆಯಲಿದ್ದು ಈ ಶೋಭಾಯಾತ್ರೆಯಲ್ಲಿ ಹಿಂದೂ ಧರ್ಮದ ಎಲ್ಲ ಸಮಾಜದ ಸಾದು ಸಂತರ, ಮಹಾನ ನಾಯಕರ, ಹೋರಾಟಗಾರ ಭಾವಚಿತ್ರಗಳೋಂದಿಗೆ ಶೋಭಾಯಾತ್ರೆ ಮಾಡಲಾಗುವದು. ಸೋಮವಾರ ಎಲ್ಲ ಸ್ವಾಮಿಜಿಗಳ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಸಂಪರ್ಕ ಅಭಿಯಾನ ಮಾಡಲಾಗಿದೆ ಹಾಗೆ ಮಹಿಳಾ ಕಾರ್ಯಕರ್ತಯರು ಮನೆ ಮನೆಗೆ ತೆರಳಿ ಕುಂಕುಮ ಹಚ್ಚಿ ಎಲ್ಲ ಮಹಿಳೆಯರನ್ನು ಕಾರ್ಯಕ್ರಮಕ್ಕೆ ಕರೆತರುವ ಮೂಲಕ ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿದರು. ಹಾಗೂ ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಸಾಧು-ಸಂತರು, ಹಿಂದೂ ಬಾಂಧವರು ಪಾಲ್ಗೋಳ್ಳಲಿದ್ದಾರೆ ಎಂದು ಹೆಳಿದರು. ಸಂಪರ್ಕ ಅಭಿಯಾನದಲ್ಲಿ ಮುಖಂಡರಾದ ಪಿ.ಟಿ.ಪಾಟೀಲ, ಬಾಬು ಬಿಜ್ಜರಗಿ, ಶಂಕರ ಹಳೆಮನಿ, ದಲಿತ ಮುಖಂಡ ಹರಿಶ ಎಂಟಮಾನ, ರವಿ ವಾರದ, ಮಲ್ಲಿಕಾರ್ಜುನ ರಾಂಪೂರಮಠ, ವಿಶ್ವನಾಥ ಅಮರಗೊಂಡ, ಕಮಕಲರ ಪತ್ತಾರ, ರಾಕೇಶ ರಾಂಪೂರಮಠ ಸೇರಿದಂತೆ ಅನೇಕ ಯುವಕರು ಸಂಪರ್ಕ ಅಭಿಯಾನದಲ್ಲಿ ಪಾಲ್ಗೊಂಡಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 