ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯೇ ಹೊಸ ಜಿಲ್ಲೆ ಘೋಷಣೆ ಮಾಡಬೇಕು: ಮಹಾವೀರ ಮೋಹಿತೆ
A new district should be declared within the Chikkodi Lok Sabha constituency: Mahavir Mohite
ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯೇ ಹೊಸ ಜಿಲ್ಲೆ ಘೋಷಣೆ ಮಾಡಬೇಕು: ಮಹಾವೀರ ಮೋಹಿತೆ
ಚಿಕ್ಕೋಡಿ, 12 : ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿರುವ ಗೋಕಾಕ ಮತ್ತು ಮೂಡಲಗಿ ತಾಲೂಕುಗಳನ್ನು ಕೈಬಿಟ್ಟು ಚಿಕ್ಕೋಡಿಲೋಕಸಭೆ ಕ್ಷೇತ್ರ ಒಳಗೊಂಡಂತೆ ನೂತನ ಚಿಕ್ಕೋಡಿ ಜಿಲ್ಲೆ ರಚನೆ ಮಾಡಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಅಹಿಂದ ಮುಖಂಡ ಮಹಾವೀರ ಮೋಹಿತೆ ಒತ್ತಾಯಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಟೀಯಲ್ಲಿ ಮಾತನಾಡಿದ ಅವರು. ಚಿಕ್ಕೋಡಿ ಈಗಾಗಲೇ ಶೈಕ್ಷಣಿಕ ಜಿಲ್ಲಾ ಸ್ಥಾನಮಾನ ಹೊಂದಿದೆ. ಇದರಲ್ಲಿ ನಿಪ್ಪಾಣಿ. ಚಿಕ್ಕೋಡಿ. ಹುಕ್ಕೇರಿ. ರಾಯಬಾಗ.ಅಥಣಿ.ಕಾಗವಾಡ.ಮೂಡಲಗಿ ಮತ್ತು ಗೋಕಾಕ ತಾಲೂಕುಗಳನ್ನು ಒಳಗೊಂಡಿದೆ. ಆದರೆ ಗೋಕಾಕ ಕೂಡಾ ಜಿಲ್ಲೆಯಾಗುವ ಬೇಡಿಕೆ ಇರುವುದರಿಂದ ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ತಾಲೂಕುಗಳನ್ನು ಒಳಗೊಂಡು ಬೆಳಗಾವಿ ಜಿಲ್ಲೆ ವಿಭಜಿಸಬೇಕು ಎಂದರು.ಇಡೀ ರಾಜ್ಯದಲ್ಲಿ ಬೆಳಗಾವಿ ದೊಡ್ಡ ಜಿಲ್ಲೆಯಾಗಿದೆ. ಆಡಳಿತ ಮತ್ತು ಅಭಿವೃದ್ಧಿ ದೃಷ್ಟಿಯಿಂದ ವಿಭಜಿಸುವುದು ಅವಶ್ಯಕತೆ ಇದೆ. ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾದರೆ ಗಡಿ ಭಾಗದ ಜನರಿಗೆ ಅನುಕೂಲ ಆಗುತ್ತದೆ. ದೂರದ ಅಥಣ, ರಾಯಬಾಗ, ಕಾಗವಾಡ ಮತ್ತು ನಿಪ್ಪಾಣಿ ಭಾಗದ ಜನರಿಗೆ ಅನುಕೂಲವಾಗಲಿದೆ.ಸರಕಾರ ಕೂಡಲೇ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ ಮತ್ತು ಜಿಲ್ಲಾ ಉಸ್ತುವಾರಿ ವಸಚಿವ ಸತೀಶ ಜಾರಕಿಹೊಳಿ ಸೇರಿ ಇನ್ನೂಳಿದ ಸಚಿವರಿಗೆ ಮನವಿ ಕೊಡಲಾಗುತ್ತದೆ ಎಂದರು.
ಗೋಕಾಕ ಜಿಲ್ಲೆಯಾಗಲು ನಮ್ಮದೆನು ವಿರೋಧವಿಲ್ಲ. ಈಗಾಗಲೇ ಚಿಕ್ಕೋಡಿಯಲ್ಲಿ ಅನೇಕ ಜಿಲ್ಲಾ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಕೇವಲ ಜಿಲ್ಲಾಧಿಕಾರಿ.ಎಸ್ ಪಿ ಮತ್ತು ಜಿಪಂ ಸಿಇಒ ಕಚೇರಿ ಮಾತ್ರ ಆರಂಭವಾಗಬೇಕಿದೆ. ಜಿಲ್ಲೆಗೆ ಬೇಕಾಗಿರುವ ಅನೇಕ ಕಚೇರಿಗಳನ್ನು ವಿಪ ಸದಸ್ಯ ಪ್ರಕಾಶ ಹುಕ್ಕೇರಿ. ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಮಂಜೂರು ಮಾಡಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ರಾಜು ಕೊಟಗಿ. ಶಂಕರಗೌಡ ಪಾಟೀಲ. ದೀಲೀಪ ಜಮಾದಾರ. ಶ್ರವಣಕುಮಾರ ಕಾಂಬಳೆ. ಜ್ಯೋತಿ ಕೆಂಪಟ್ಟಿ. ಆರ್.ಎಂ.ಪೂಜಾರಿ ಮುಂತಾದವರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 