ಮಿರಜ್‌ನಲ್ಲಿ ಸೌಂದರ್ಯ ಚಿಕಿತ್ಸೆಯ ಹೊಸ ಅಧ್ಯಾಯ ಪ್ರಾರಂಭ: ಡಾ. ಸುರೇಶಭಾವು ಖಾಡೆ
A new chapter in beauty treatment begins at Miraj: Dr. Sureshabhavu Khade
ಕಾಗವಾಡ, 02 : ತಂತ್ರಜ್ಞಾನ ಮತ್ತು ಆಯುರ್ವೇದದ ಸಂಗಮದೊಂದಿಗೆ ಸೌಂದರ್ಯ ಚಿಕಿತ್ಸಾ ಕ್ಷೇತ್ರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಿರಜ್ ಪಟ್ಟಣದಲ್ಲಿ ಡಾ. ವಿನಾಯಕ ಲೋಕರೆ ಮತ್ತು ಡಾ. ವಿದ್ಯಾ ಲೋಕರೆ ಅವರು ಸೌಂದರ್ಯ ಚಿಕಿತ್ಸೆಗೆ ಹೊಸ ರೂಪ ನೀಡಿದ್ದಾರೆಂದು ಮಿರಜ್‌ನ ಶಾಸಕ ಡಾ. ಸುರೇಶಭಾವು ಖಾಡೆ ತಿಳಿಸಿದ್ದಾರೆ.
ಅವರು, ಶನಿವಾರ ದಿ. 30 ರಂದು ಮಿರಜ್ ಪಟ್ಟಣದ ಸುಭಾಷ ನಗರದಲ್ಲಿ ಪ್ಲಾಸ್ಟಿಕ್ ಮತ್ತು ಕಾಸ್ಮೆಟಿಕ್ ಸರ್ಜನ್ ಡಾ. ವಿನಾಯಕ ಲೋಕರೆ ಮತ್ತು ಕಾಸ್ಮೆಟಾಲಜಿಸ್ಟ್ ಡಾ. ವಿದ್ಯಾ ಲೋಕರೆ ಅವರ ಕಾಸ್ಮೋವರ್ಸ್ ಚರ್ಮ, ಕೂದಲು ಮತ್ತು ಲೇಸರ್ ಕ್ಲಿನಿಕ್‌ನ 2ನೇ ಶಾಖೆಯನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ಮಿರಜ್ ಪಟ್ಟಣದಲ್ಲಿ ಅತ್ಯಾಧುನಿಕ ಸೌಂದರ್ಯ ಚಿಕಿತ್ಸಾ ಸೌಲಭ್ಯಗಳು ಲಭ್ಯವಿರುವುದು ಹೆಮ್ಮೆಯ ವಿಷಯವಾಗಿದೆ. ಮಿರಜ್ ಪಟ್ಟಣದಲ್ಲಿ ಹೊಸ ತಂತ್ರಜ್ಞಾನದ ಆಸ್ಪತ್ರೆಗಳಿಂದ ರೋಗಿಗಳಿಗೆ ಹೆಚ್ಚಿನ ಪ್ರಯೋಜನವಾಗುವುದಲ್ಲದೇ ಮಿರಜ್‌ನ ವೈದ್ಯಕೀಯ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದರು. ಜೊತೆಗೆ ಕಾಸ್ಮೋವರ್ಸ್ ತಂಡಕ್ಕೆ ಶುಭ ಹಾರೈಸಿ, ಡಾ. ಲೋಕರೆ ದಂಪತಿಗಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಮತಿ ಸುಮಂತಾಯಿ ಸುರೇಶಭಾವು ಖಾಡೆ, ನಿರಂಜನದಾದಾ ಅವಟಿ, ಪಾಂಡುರಂಗ ಕೋರೆ, ಸಾಮಾಜಿಕ ಕಾರ್ಯಕರ್ತ ಸಂದೀಪದಾದಾ ಸಲಗರ ಸೇರಿದಂತೆ ಮಿರಜ್ ಪಟ್ಟಣದ ಅನೇಕ ಗಣ್ಯರು, ಸಾಮಾಜಿಕ ಕಾರ್ಯಕರ್ತರು ನಾಗರೀಕರು ಉಪಸ್ಥಿತರಿದ್ದರು. ಡಾ. ವಿನಾಯಕ ಲೋಕರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿದ್ಯಾ ಲೋಕರೆ ನಿರೂಪಿಸಿ, ವಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 