ನಾಡು ಕಟ್ಟಿದ ಹಾಡುಗಳ ಸಂಗೀತ ಕಾರ್ಯಕ್ರಮ

ನಾಡು ಕಟ್ಟಿದ ಹಾಡುಗಳ ಸಂಗೀತ ಕಾರ್ಯಕ್ರಮ   A musical program of songs that shaped the nation.


ಹಾವೇರಿ 06: ಹಾಡುಗಳೇ ನಾಡನ್ನುಕಟ್ಟುತ್ತವೆ ಎಂಬ ಮಾತಿನಂತೆಇಲ್ಲಿಯಗಂಗಾಧರ ನಂದಿ ಸಾಹಿತ್ಯ ಭವನದಲ್ಲಿಕನ್ನಡ ಸಂಜೆಗಳು ಎಂಬ ರಾಜ್ಯೋತ್ಸವದಕೊನೆಯ ದಿನದಕಾರ್ಯಕ್ರಮದಲ್ಲಿ ನಾಡಕಟ್ಟಿದ ಹಾಡುಗಳು ಎಂಬ ಸಂಗೀತಕಾರ್ಯಕ್ರಮ ಕೇಳುಗರನ್ನು ರಂಜಿಸಿತು.  

ಇಲ್ಲಿಯ ಗುರುಭವನದಎದರು ಹೊಟ್ಟೆ ಪಾಡಿಗಾಗಿ ಹಾಡುವಅಂಧಕಲಾವಿದ ಪಾಂಡುರಂಗ ಈ ಕಾರ್ಯಕ್ರಮವನ್ನು ಹುಟ್ಟಿದರೆಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಹಾಡಿನೊಂದಿಗೆ ಉದ್ಘಾಟಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಅಷ್ಟಯಲ್ಲ ಸೇರಿದ್ದ ಕಲಾಭಿಮಾನಿಗಳು ಸುಮಾರು 4 ಸಾವಿರರೂಪಾಯಿ ಹಣ ಸಂಗ್ರಹಿಸಿ ಕಲಾವಿದನಿಗೆ ನೀಡಿದ್ದು,ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತಿಕಲಾವಿದರ ಬಳಗದ ಈ ಕಾರ್ಯಕ್ರಮದಲ್ಲಿ 20 ಕ್ಕೂ ಹೆಚ್ಚು ಗಾಯಕರು ಪಾಲ್ಗೊಂಡಿದ್ದರು. ಕನ್ನಡದಕುಲದೇವಿ ಕಾಪಾಡು ಬಾ ತಾಯಿ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಹುಟ್ಟಿದರೆಕನ್ನಡ ನಾಡಲ್ಲಿ ಹುಟ್ಟ ಬೇಕು, ವಿಶ್ವ ವಿನೂತನ ವಿದ್ಯಾಚೇತನ, ಶಿಲೆಗಳು ಸಂಗೀತವ ಹಾಡಿವೆ, ಸಿರಿವಂತನದರೂ ಕನ್ನಡ ನಾಡಲ್ಲೆ ಜನಿಸುವೆ ಮುಂತಾದ ಹಾಡುಗಳು ಕನ್ನಡ ನಾಡಿನ ಬಗ್ಗೆ ಭಾವ ಪುಳಕ ಹುಟ್ಟಿಸಿದವು. 

ಗಾಯಕರುಗಳಾದಕೆ.ಆರ್‌. ಹಿರೇಮಠ, ಮಹಾಂತೇಶ ಮರಿಗೂಳಪ್ಪನವರ, ಶಿವಬಸವ ಬಣಕಾರ, ಎ.ಬಿ.ಗುಡ್ಡಳ್ಳಿ,ರಾಜು ಪೇಟಕರ್, ಮಹಾದೇವ ಕರಿಯಣ್ಣನವರ,ಶಿಗ್ಗಾವಿಯ ಪಿ.ಎಚ್‌. ತೆಂಬದಮನಿ, ಕಾಂತೇಶಅಂಗಡಿ, ಅಕ್ಕಮಹಾದೇವಿ ಹಾನಗಲ್ಲ, ಭಾರತಿಯಾವಗಲ್, ಮಂಜುನಾಥ ವಾಲ್ಮಿಕಿ, ಆರ್‌.ಸಿ. ನಂದೀಹಳ್ಳಿ, ಯುವಗಾಯಕರಾದ ಕೇಶವ ಮರಿಗೂಳಪ್ಪನವರ, ಸುರಭಿ ಮಳಗಿ, ಭೂಮಿಕಾರಜಪೂತ ಮುಂತಾದವರು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದರು. 

ವೇದಿಕೆಯ ಮೇಲೆ ಹಾರ್ಮೋನಿಯಂಇಟ್ಟುಕೊಂಡು ಸುಂದರ ಹಾಡನ್ನು ಹಾಡಿದರವೀಂದ್ರ ಮಳಗಿ, ಗಿರಿಜಾ ಮಳಗಿ ಹಾಗೂ ಸುರಭಿ ಗಮನ ಸೆಳೆದರೆ, ಮಹಾಂತೇಶ ಮರಿಗೂಳಪ್ಪನವರ ಕಾರ್ಯಕ್ರಮದಕೊನೆಯಲ್ಲಿ ಹೆಸರಾಯಿತುಕರ್ನಾಟಕಎಲ್ಲಗಾಯಕರೊಂದಿಗೆ ಹಾಡಿದ್ದು ಸ್ಮರಣೀಯವಾಗಿತ್ತು.ಕಾರ್ಯಕ್ರಮವನ್ನು ಪೃಥ್ವಿರಾಜ ಬೆಟಗೇರಿ ನಿರ್ವಹಿಸಿದರು.