ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳ ಭಜನೆ ಪ್ರಾರಂಭ
A month-long bhajan begins on the occasion of the month of Shravan
ಉಗರಗೋಳ, 25 ; ಮನಸ್ಸು ಯೋಗ ಮಾರ್ಗದಲ್ಲಿ ಮುನ್ನೆಡೆಯುವ ಯೋಗ್ಯತೆಯನ್ನು ಕಳೆದುಕೊಂಡಾಗ, ಆನಂದ ಪ್ರದವಾದ ಆತ್ಮದರ್ಶನದ ನೆಲೆಗೆ ತಲುಪಲು ನಾವೆಲ್ಲರೂ ಶ್ರಾವಣ ಮಾಸದಲ್ಲಿ ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗಬೇಕೆಂದು ಶ್ರೀಬಸವೇಶ್ವರ ಬಜನಾ ಮಂಡಳದ ಅಧ್ಯಕ್ಷ ನಿಂಗನಗೌಡ ಹರಳಕಟ್ಟಿ ಹೇಳಿದರು
ಉಗರಗೋಳ ಗ್ರಾಮದಲ್ಲಿ ಶ್ರಾವನ ಮಾಸದ ನಿಮಿತ್ಯವಾಗಿ ಶ್ರೀಬಸವೇಶ್ವರ ಭಜನಾ ಮಂಡಳದಿಂದ ಭೀಮನ ಅವಾಸ್ಯೆಯಿಂದ ಬೆನಕನ ಅಮವಾಸ್ಯೆವರೆಗೂ ನಿರಂತರವಾಗಿ ಒಂದು ತಿಂಗಳ ಕಾಲ ಬೆಳಿಗ್ಗೆ 4 ರಿಂದ 6 ಗಂಟೆಯವರೆಗೆ “ಬಜನಾ ಸೇವೆಯನ್ನು ಗ್ರಾಮದಲ್ಲಿ ಮಾಡುವದಕ್ಕೆ ಚಾಲನೆ ನೀಡಿ ಮಾತನಾಡಿದ ಅವರು.
ಶ್ರಾವಣ ಮಾಸದಲ್ಲಿ ಭಕ್ತಿಯಿಂದ ಮಾಡುವ ದೇವರ ಆರಾಧನೆ, ಎಂದಿಗೂ ನಮ್ಮನ್ನು ಕೈ ಬಿಡುವದಿಲ್ಲ ಎಂದರು.
ಯಲ್ಲಪ್ಪ ಯಡ್ರಾಂವಿ, ನಿಂಗಪ್ಪ ಗೊವಪ್ಪನವರ, ಮಂಜು ಜಾಲಗಾರ, ನಾಗಪ್ಪ ಪಡಸುಣಗಿ, ಶೇಖಯ್ಯ ಹೊಸಮಠ, ಶಿವಪ್ಪ ಹೇಬಸೂರ, ಮಲ್ಲಪ್ಪ ಕುಸುಗಲ್ಲ್, ಅಯ್ಯಪ್ಪ ಗಾಣಿಗೇರ, ಗಂಗಪ್ಪ ಕಂಬ್ಳಿ, ಶಿವಪ್ಪ ಹಿರೇಹೊಳಿ, ಮಾರುತಿ ಸಂಗಟಿ, ಶಂಕ್ರಯ್ಯ ಮಠಪತಿ, ಶಂಕ್ರಯ್ಯ ಸಂಬಯ್ಯನಮಠ ಹಾಗೂ ಗ್ರಾಮಸ್ಥರು ಭಜನೆಯಲ್ಲಿ ಪಾಲ್ಗೊಂಡಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 