ಕಲಬುರಗಿ, ಏ.13, ರಸ್ತೆ ಮೇಲೆ ಸಂಚರಿಸುತ್ತಿದ್ದ ಜನರ ಮೇಲೆ ಉಗುಳಿದ ವ್ಯಕ್ತಿ ಯೋರ್ವ ವಿಕೃತ ಮೆರೆದಿರುವ ಘಟನೆ ನಗರದ ಧನ್ವಂತರಿ ಆಸ್ಪತ್ರೆ ಬಳಿ ರವಿವಾರ ರಾತ್ರಿ ನಡೆದಿದೆ.ವಿಕೃತಿ ಮೆರೆದಾತ ಆಳಂದ ತಾಲೂಕಿನ ವಿ.ಕೆ.ಸಲಗರ ಗ್ರಾಮದ ರಬ್ಬಾನಿ ಎಂದು ಗುರುತಿಸಲಾಗಿದೆ.ಕೊರೊನಾ ಭೀತಿ ಹಿನ್ನೆಲೆಯಲ್ಲಿ ವಿಕೃತ ವ್ಯಕ್ತಿಯ ಕೃತ್ಯ ಕಂಡು ಬಡಾವಣೆಯ ಜನರಲ್ಲಿ ಕೆಲ ಕಾಲ ಆತಂಕಮೂಡಿದ್ದು, ತಕ್ಷಣವೇ ಅವರು ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ವಿಕೃತ ರಬ್ಬಾನಿಯನ್ನು ವಶಕ್ಕೆ ಪಡೆದಿದ್ದಾರೆ.ಬಳಿಕ ಆತನನ್ನು ವಿಚಾರಣೆಗೆ ಒಳಪಡಿಸಿದಾಗ, ಪದೇ ಪದೇ ಆತ ಹೇಳಿಕೆಗಳನ್ನು ಬದಲಿಸಿದ್ದ ಎಂದು ತಿಳಿದು ಬಂದಿದೆ.ತಕ್ಷಣವೇ ಆತನನ್ನು ತಪಾಸಣೆಗಾಗಿ ಕಲಬುರಗಿಯ ಜೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸ್ಥಳಕ್ಕೆ ವಿಕೃತನ ತಂಗಿ ಆಗಮಿಸಿ, ಆತ ಮಾನಸಿಕ ಅಸ್ವಸ್ಥ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎಂದು ತಿಳಿದು ಬಂದಿದೆ.